ಸಕಾರಾತ್ಮಕ ಸ್ಪಂದನಗಳನ್ನು ಪ್ರಕ್ಷೇಪಿಸುವ ಬಟ್ಟೆಗಳಿಗೆ ಒತ್ತು ನೀಡಿ ! – ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ಬಣ್ಣ, ಕಸೂತಿ (ಡಿಸೈನ್), ಬಟ್ಟೆಯ ವಿನ್ಯಾಸ ಮತ್ತು ಆಕಾರ ಅಥವಾ ಬಟ್ಟೆಯ ಪ್ರಕಾರಗಳು ತಮ್ಮದೇ ಆದ ವಿಶಿಷ್ಟ ಸೂಕ್ಷ್ಮ ಸ್ಪಂದನಗಳನ್ನು ಹೊಂದಿವೆ ಮತ್ತು ಆದ್ದರಿಂದಲೇ ಅದು ನಮ್ಮ ಮೇಲೆ ಆಧ್ಯಾತ್ಮಿಕ ಮಟ್ಟದಲ್ಲಿ ಪರಿಣಾಮ ಬೀರುತ್ತವೆ.

ಪರಾತ್ಪರ ಗುರು ಡಾ. ಆಠವಲೆ ಇವರು ತಮ್ಮ ೮೦ ನೇ ಜನ್ಮೋತ್ಸವದ ನಿಮಿತ್ತ ಆಚರಿಸಲಾದ ರಥೋತ್ಸವದ ಸಮಯದಲ್ಲಿ ಧರಿಸಿದ ವಸ್ತ್ರಾಲಂಕಾರಗಳಿಂದ ಹೆಚ್ಚು ಪ್ರಮಾಣದಲ್ಲಿ ಚೈತನ್ಯ ಪ್ರಕ್ಷೇಪಿಸುವುದು

ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ರೂಪದಲ್ಲಿ ಶ್ರೀವಿಷ್ಣುವಿನ ‘ಜಯಂತಾವತಾರದ ದಿವ್ಯತೆಯನ್ನು ಎಲ್ಲರೂ ಅನುಭವಿಸಬೇಕು’, ಎಂದು ಸಪ್ತರ್ಷಿಗಳು ಈ ಬಾರಿ ರಥೋತ್ಸವವನ್ನು ಆಚರಿಸಲು ಹೇಳಿದರು. ರಥೋತ್ಸವದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಧರಿಸಿದ ವಸ್ತ್ರಾಲಂಕಾರಗಳಲ್ಲಿನ ಸಕಾರಾತ್ಮಕ ಊರ್ಜೆಯಲ್ಲಿ ಆದ ಹೆಚ್ಚಳವೇ ಇದರ ಸೂಚಕವಾಗಿದೆ.

ಗ್ಯಾಸ್ ಅಥವಾ ವಿದ್ಯುತ್‌ಕ್ಕಿಂತ ಮಣ್ಣಿನ ಒಲೆಯ ಮೇಲೆ ಬೇಯಿಸಿದ ಆಹಾರದಿಂದ ಹೆಚ್ಚು ಸಕಾರಾತ್ಮಕ ಸ್ಪಂದನ ಪ್ರಕ್ಷೇಪಣೆಯಾಗುತ್ತದೆ !

ಒಲೆಯಲ್ಲಿ ಅಡುಗೆ ಮಾಡುವಾಗ ಆಹಾರಕ್ಕೆ ಅಗ್ನಿಯ ಸಂಸ್ಕಾರವಾಗುವುದರಿಂದ ಆಹಾರವು ಸಾತ್ತ್ವಿಕವಾಗುತ್ತದೆ. ಅದೇ ಅನುಭವವು ಪರೀಕ್ಷಣೆಯಲ್ಲಿನ ಮಣ್ಣಿನ ಒಲೆಯ ಮೇಲೆ ಬೇಯಿಸಿದ ಅನ್ನದ ಸಂದರ್ಭದಲ್ಲಿ ಬಂದಿತು.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರಲ್ಲಿನ ಚೈತನ್ಯದಿಂದ ಅವರು ದೈವೀ ಪ್ರವಾಸಕ್ಕಾಗಿ ಉಪಯೋಗಿಸಿದ ವಾಹನಗಳಲ್ಲಿ ತುಂಬಾ ಚೈತನ್ಯ ನಿರ್ಮಾಣವಾಗುವುದು

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳಕಾಕುರವರು ಉಚ್ಚ ಆಧ್ಯಾತ್ಮಿಕ ಮಟ್ಟದ ಸಮಷ್ಟಿ ಸಂತರಾಗಿದ್ದಾರೆ. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ಶ್ರೀ ಮಹಾಲಕ್ಷ್ಮಿಸ್ವರೂಪ ಆಗಿದ್ದಾರೆಂದು ಸಪ್ತರ್ಷಿಗಳು ಹೇಳಿದ್ದಾರೆ. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳಕಾಕು ಇವರಲ್ಲಿ ಶ್ರೀ ಮಹಾಲಕ್ಷ್ಮಿದೇವಿಯ ತತ್ತ್ವವಿದೆ.

‘ಸನಾತನ ದಂತಮಂಜನ’ದಲ್ಲಿ ಒಂದು ಪ್ರಸಿದ್ಧ ಟೂತ್ ಪೇಸ್ಟಗಿಂತ ಹೆಚ್ಚು ಸಕಾರಾತ್ಮಕ ಸ್ಪಂದನಗಳಿರುವುದು

ವಸ್ತುವಿನ ವಿಧ, ಅದರ ನಿರ್ಮಾಣದ ಉದ್ದೇಶ, ನಿರ್ಮಾಣದ ಸ್ಥಳ, ವಸ್ತುಗಳನ್ನು ಸಿದ್ಧಪಡಿಸಲು ಬಳಸಿದ ಘಟಕಪದಾರ್ಥಗಳು ಇತ್ಯಾದಿ. ಈ ಘಟಕಗಳು ಎಷ್ಟು ಸಾತ್ತ್ವಿಕವಾಗಿರುತ್ತವೆಯೋ, ಅಷ್ಟು ಅವುಗಳಿಂದ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿಸುತ್ತವೆ. ಆದರೆ ಘಟಕಗಳು ಅಸಾತ್ತ್ವಿಕವಾಗಿದ್ದರೆ ಅವುಗಳಿಂದ ನಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿಸುತ್ತವೆ.

ದೈವಿ ಬಾಲಕರು ಮನುಕುಲವನ್ನು ಸುರಾಜ್ಯದತ್ತ ಕೊಂಡೊಯ್ಯುತ್ತಾರೆ !

‘ಸಂಪತ್ಕಾಲದಲ್ಲಿ ದೈವಿ ಬಾಲಕರು ಪೃಥ್ವಿಯ ಮೇಲೆ ಜನಿಸುತ್ತಾರೆ ಮತ್ತು ಇವರೇ ಮನುಕುಲವನ್ನು ಸುರಾಜ್ಯದ ಕಡೆ ಕೊಂಡೊಯ್ಯುವರು’ ಎಂದು ಶ್ರೀಲಂಕಾದಲ್ಲಿ ನಡೆದ `ದ ಫೋರ್ಥ ಇಂಟರನ್ಯಾಶನಲ್ ಕಾನ್ಫರೆನ್ಸ್ ಅನ್ ಚಿಲ್ದೆರ್ನ್ ಆಂಡ್ ಯೂಥ ೨೦೨೨’  ಈ ಅಂತರಾಷ್ಟ್ರೀಯ ವೈಜ್ಞಾನಿಕ ಪರಿಷತ್ತಿನಲ್ಲಿ ಸೌ. ಶ್ವೇತಾ ಕ್ಲಾರ್ಕ್ ಇವರು ಹೇಳಿದರು.

ಸಪ್ತರ್ಷಿಗಳು ಹೇಳಿದ ಆಧ್ಯಾತ್ಮಿಕ ಉಪಾಯಗಳಿಂದ ಕೆಟ್ಟ ಶಕ್ತಿಗಳ ಆಕ್ರಮಣಗಳಿಂದ ಪರಾತ್ಪರ ಗುರು ಡಾ. ಆಠವಲೆಯವರ ರಕ್ಷಣೆಯಾಗುವುದು

ಸಪ್ತರ್ಷಿಗಳು ಹೇಳಿದಂತೆ ಮಾಡಿದ ಉಪಾಯಗಳಿಂದ ಪರಾತ್ಪರ ಗುರು ಡಾಕ್ಟರರ ಮೇಲಾಗುವ ಕೆಟ್ಟ ಶಕ್ತಿಗಳ ಆಕ್ರಮಣಗಳನ್ನು ತಡೆಗಟ್ಟಲು ಬಟ್ಟೆಯ ಗಂಟಿನಲ್ಲಿನ ಚೈತನ್ಯಶಕ್ತಿಯು ಕಾರ್ಯನಿರತವಾಯಿತು. ಬಟ್ಟೆಯ ಗಂಟಿನಲ್ಲಿನ ಚೈತನ್ಯ ಮತ್ತು ಕೆಟ್ಟ ಶಕ್ತಿಗಳ ನಡುವೆ ಸೂಕ್ಷ್ಮಯುದ್ಧ ನಡೆಯಿತು.

ಪರಾತ್ಪರ ಗುರು ಡಾ. ಆಠವಲೆಯವರ ಜನ್ಮಪತ್ರಿಕೆಯ ಸಂದರ್ಭದಲ್ಲಿನ ವೈಶಿಷ್ಟ್ಯಪೂರ್ಣ ಸಂಶೋಧನೆ !

ಇದರಿಂದ ‘ಪರಾತ್ಪರ ಗುರು ಡಾಕ್ಟರರಿಗೆ ಮಹಾಮೃತ್ಯುಂಜಯ ಯಾಗದಿಂದ ದೊರಕಿದ ಚೈತನ್ಯದಿಂದ ಅವರ ಜನ್ಮಪತ್ರಿಕೆಗಳಲ್ಲಿನ ಆಯಾ ಗ್ರಹಗಳ ಕಲುಷಿತ ಸ್ಪಂದನಗಳ ಪ್ರಭಾವಲಯವು ಸಂಪೂರ್ಣ ಇಲ್ಲವಾಯಿತು. ಆದುದರಿಂದ ಪರಾತ್ಪರ ಗುರು ಡಾಕ್ಟರರ ಮಹಾಮೃತ್ಯು ಯೋಗದಿಂದ ರಕ್ಷಣೆಯಾಯಿತು’, ಎಂಬುದು ಗಮನಕ್ಕೆ ಬಂದಿತು. 

ಅಧ್ಯಾತ್ಮದಲ್ಲಿ ಸ್ತ್ರೀ-ಪುರುಷರಲ್ಲಿ ಯಾವುದೇ ಭೇದವಿಲ್ಲದೇ ಆಧ್ಯಾತ್ಮಿಕ ಪ್ರಗತಿಗಾಗಿ ಇಬ್ಬರಿಗೂ ಸಮಾನ ಅವಕಾಶ !

ಅಧ್ಯಾತ್ಮದಲ್ಲಿ ಲಿಂಗದ ಆಧಾರದಲ್ಲಿ ಭೇದಭಾವವಿರುವುದಿಲ್ಲ. ಅಧ್ಯಾತ್ಮಶಾಸ್ತ್ರದಲ್ಲಿ ಮಾರ್ಗದರ್ಶನ ಮಾಡುವ ಅವಕಾಶ ಮಹಿಳೆಯರಿಗಿಂತ ಪುರುಷರಿಗೆ ಹೆಚ್ಚು ಸಿಗುತ್ತಿದೆ ಎಂದು ಗಮನಕ್ಕೆ ಬರುತ್ತಿದ್ದರೂ ಆಧ್ಯಾತ್ಮಿಕ ಪ್ರಗತಿಯ ಅವಕಾಶ ಇಬ್ಬರಿಗೂ ಸಮಾನವಾಗಿದೆ ಎಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಶ್ರೀ. ಶಾನ್ ಕ್ಲಾರ್ಕ್ ಇವರು ಪ್ರತಿಪಾದಿಸಿದರು.

ಎಳನೀರು, ಕಿತ್ತಳೆಯ ರಸ, ಭಾರತೀಯ ಗೋವಿನ ಹಾಲು ಇವುಗಳು ವ್ಯಕ್ತಿಯಲ್ಲಿ ಸಕಾರಾತ್ಮಕತೆ ಹೆಚ್ಚಿಸುತ್ತದೆ  ಹಾಗೂ ‘ವೈನ್’, ‘ವಿಸ್ಕೀ’, ‘ಬಿಯರ್’ ನಕಾರಾತ್ಮಕತೆ ಹೆಚ್ಚಿಸುತ್ತದೆ !

‘ಬಿಯರ್’ನಲ್ಲಿ ಅತಿಹೆಚ್ಚು ನಕಾರಾತ್ಮಕತೆ ಕಂಡುಬಂದಿದೆ. ಅದನ್ನು ಸೇವಿಸಿದ ನಂತರ, ಒಬ್ಬ ವ್ಯಕ್ತಿಯಲ್ಲಿ ನಕಾರಾತ್ಮಕತೆಯು ಸುಮಾರು ಶೇ. ೫೦೦೦ ರಷ್ಟು ಹೆಚ್ಚಾಯಿತು. ಇದರ ನಂತರ ಕ್ರಮವಾಗಿ ‘ಕೆಂಪು ವೈನ್’ನಲ್ಲಿ ನಕಾರಾತ್ಮಕ ಪ್ರಭಾವಳಿ ಕಂಡಿತು.