ಅಂತರಾಷ್ಟ್ರೀಯ ವೈಜ್ಞಾನಿಕ ಪರಿಷತ್ತಿನಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯಕ್ಕೆ ‘ಅತ್ಯುತ್ತಮ ಪ್ರಸ್ತುತಿ ಪ್ರಶಸ್ತಿ’ ನೀಡಿ ಗೌರವ
ಅಧ್ಯಾತ್ಮದಲ್ಲಿ ಲಿಂಗದ ಆಧಾರದಲ್ಲಿ ಭೇದಭಾವವಿರುವುದಿಲ್ಲ. ಅಧ್ಯಾತ್ಮಶಾಸ್ತ್ರದಲ್ಲಿ ಮಾರ್ಗದರ್ಶನ ಮಾಡುವ ಅವಕಾಶ ಮಹಿಳೆಯರಿಗಿಂತ ಪುರುಷರಿಗೆ ಹೆಚ್ಚು ಸಿಗುತ್ತಿದೆ ಎಂದು ಗಮನಕ್ಕೆ ಬರುತ್ತಿದ್ದರೂ ಆಧ್ಯಾತ್ಮಿಕ ಪ್ರಗತಿಯ ಅವಕಾಶ ಇಬ್ಬರಿಗೂ ಸಮಾನವಾಗಿದೆ ಎಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಶ್ರೀ. ಶಾನ್ ಕ್ಲಾರ್ಕ್ ಇವರು ಪ್ರತಿಪಾದಿಸಿದರು. ಅವರು ಶ್ರೀಲಂಕಾದಲ್ಲಿ ನಡೆದ ‘ದಿ ಎಡ್ತ್ ವರ್ಲ್ಡ್ ಕಾನ್ಫರೆನ್ಸ್ ಆನ್ ವುಮೆನ್ಸ್ ಸ್ಟಡೀಸ್’ ಎಂಬ ವೈಜ್ಞಾನಿಕ ಪರಿಷತ್ತಿನಲ್ಲಿ ಮಾತನಾಡುತ್ತಿದ್ದರು. ಈ ಪರಿಷತ್ತನ್ನು ‘ದಿ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ನಾಲೆಡ್ಜ್ ಮ್ಯಾನೇಜ್‌ಮೆಂಟ್’ ಆಯೋಜಿಸಿತ್ತು. ವಿಶ್ವವಿದ್ಯಾಲಯದ ಸಂಸ್ಥಾಪಕ ಪರಾತ್ಪರ ಗುರು ಡಾ. ಆಠವಲೆ ಅವರು ಬರೆದ ‘ಆಧ್ಯಾತ್ಮಿಕ ಉನ್ನತಿಗೆ ಸಂಬಂಧಿಸಿದ ಲಿಂಗದ ಆಧಾರದಲ್ಲಿ ಭೇದಭಾವಕ್ಕೆ ಸವಾಲು’ ಎಂಬ ಶೋಧಪ್ರಬಂಧವನ್ನು ಶ್ರೀ. ಕ್ಲಾರ್ಕ್ ಇವರು ಮಂಡಿಸಿದರು. ಶ್ರೀ. ಕ್ಲಾರ್ಕ್ ಇವರು ಈ ಶೋಧಪ್ರಬಂಧದ ಸಹಲೇಖಕರಾಗಿದ್ದಾರೆ. ಇದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ 93 ನೇ ಪ್ರಸ್ತುತಿಯಾಗಿತ್ತು. ಈ ಶೋಧಪ್ರಬಂಧಕ್ಕೆ ಪರಿಷತ್ತಿನಲ್ಲಿ ‘ಅತ್ಯುತ್ತಮ ಪ್ರಸ್ತುತಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಶ್ರೀ. ಕ್ಲಾರ್ಕ್ ಇವರು ಈ ಕುರಿತು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆಯನ್ನು ಪ್ರಸ್ತುತಪಡಿಸಿದರು. ಊರ್ಜೆ ಮತ್ತು ಪ್ರಭಾವಳಿಯ ಮಾಪಕ ಯಂತ್ರವಾದ ‘ಯುನಿವರ್ಸಲ್ ಔರಾ ಸ್ಕ್ಯಾನರ್’ (ಯು.ಎ.ಎಸ್.)ನ ಆಧಾರದಲ್ಲಿ ೨೪ ಸಾಧಕರ (ಪುರುಷ ಮತ್ತು ಸ್ತ್ರೀ) ಪ್ರಭಾವಳಿಯ ಅಧ್ಯಯನ ಮಾಡಲಾಯಿತು. ಇವರನ್ನು 4 ಗುಂಪುಗಳಾಗಿ ವಿಂಗಡಿಸಲಾಗಿತ್ತು, ಶೇ. 60 ಆಧ್ಯಾತ್ಮಿಕ ಮಟ್ಟಕ್ಕಿಂತ ಹೆಚ್ಚಿರುವ ಮತ್ತು ಶೇ. 60 ಆಧ್ಯಾತ್ಮಿಕ ಮಟ್ಟಕ್ಕಿಂತ ಕೆಳಗಿರುವ ಹೀಗೆ ಇನ್ನೆರಡು ಗುಂಪುಗಳಿದ್ದವು. ‘ಶೇ. 60 ರಷ್ಟು ಆಧ್ಯಾತ್ಮಿಕ ಮಟ್ಟ’, ಇದು ಆಧ್ಯಾತ್ಮಿಕ ಸಾಧನೆಯಲ್ಲಿನ ಒಂದು ಮಹತ್ವದ ಮೈಲಿಗಲ್ಲಾಗಿದೆ; ಏಕೆಂದರೆ ಈ ಮಟ್ಟವನ್ನು ತಲುಪಿದ ನಂತರ, ವ್ಯಕ್ತಿಯು ಜನನ-ಮರಣದ ಚಕ್ರದಿಂದ ಮುಕ್ತನಾಗುತ್ತಾನೆ. ಪ್ರತಿ ಗುಂಪನ್ನು ಪುನಃ ‘ಆಧ್ಯಾತ್ಮಿಕ ತೊಂದರೆ ಇರುವವರು’ ಮತ್ತು ‘ಅಧ್ಯಾತ್ಮಿಕ ತೊಂದರೆ ಇಲ್ಲದಿರುವವರು’, ಹೀಗೆ ಎರಡು ಗುಂಪುಗಳಾಗಿ ಪುನಃ ವಿಂಗಡಿಸಲಾಗಿದೆ. ಈ ಪರೀಕ್ಷೆಯಲ್ಲಿ ಶೇ. 60 ರಷ್ಟು ಆಧ್ಯಾತ್ಮಿಕ ಮಟ್ಟಕ್ಕಿಂತ ಹೆಚ್ಚಿನ ಸಾಧಕರಲ್ಲಿನ ನಕಾರಾತ್ಮಕ ಊರ್ಜೆಯ ಪ್ರಭಾವಳಿಯಲ್ಲಿ ಪುರುಷರು ಮತ್ತು ಸ್ತ್ರೀಯರ ನಡುವೆ ಯಾವುದೇ ವಿಶೇಷ ವ್ಯತ್ಯಾಸವಿರಲಿಲ್ಲ. ಶೇ. 60 ರಷ್ಟು ಆಧ್ಯಾತ್ಮಿಕ ಮಟ್ಟಕ್ಕಿಂತ ಕೆಳಗಿನ ಸಾಧಕರ ಗುಂಪಿನಲ್ಲಿ ಮಾತ್ರ ಸ್ತ್ರೀಯರಲ್ಲಿ ನಕಾರಾತ್ಮಕ ಊರ್ಜೆಯ ಪ್ರಭಾವಳಿಯು ಪುರುಷರಿಗಿಂತ ಬಹಳ ಕಡಿಮೆ ಕಂಡುಬಂದಿದೆ. ಶೇ. 60 ರಷ್ಟು ಆಧ್ಯಾತ್ಮಿಕ ಮಟ್ಟಕ್ಕಿಂತ ಹೆಚ್ಚು ಇರುವ ಸಾಧಕರಲ್ಲಿ ಸಕಾರಾತ್ಮಕ ಊರ್ಜೆಯ ಪ್ರಭಾವಲಯವು ಪುರುಷರಲ್ಲಿ ಸ್ವಲ್ಪ ಹೆಚ್ಚಾಗಿರುವುದು ಕಂಡುಬಂದಿದ್ದು ಶೇ. 60 ರಷ್ಟು ಆಧ್ಯಾತ್ಮಿಕ ಮಟ್ಟಕ್ಕಿಂತ ಕಡಿಮೆ ಇರುವ ಸಾಧಕರ ಗುಂಪಿನಲ್ಲಿ ಸ್ತ್ರೀಯರಲ್ಲಿ ಸಕಾರಾತ್ಮಕ ಊರ್ಜೆಯ ಪ್ರಭಾವಳಿಯು ಬಹಳಷ್ಟು ಹೆಚ್ಚು ಕಂಡುಬಂದಿದೆ. ಶೇ. 60 ಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟ ಹೊಂದಿರುವ ಸಾಧಕರ ಮೇಲೆ ಸಕಾರಾತ್ಮಕ ಊರ್ಜೆಯ ಪ್ರಭಾವಳಿಯು ಈ ಮಟ್ಟಕ್ಕಿಂತ ಕೆಳಗಿರುವ ಸಾಧಕರ ತುಲನೆಯಲ್ಲಿ ಹೆಚ್ಚಿತ್ತು. ಅಲ್ಲದೆ, ಆಧ್ಯಾತ್ಮಿಕ ತೊಂದರೆ ಇರುವ ಸಾಧಕರ ಸಕಾರಾತ್ಮಕ ಊರ್ಜೆಯ ಪ್ರಭಾವಳಿಯು ಕಡಿಮೆ ಇತ್ತು. ಇದರಿಂದ ಆಧ್ಯಾತ್ಮಿಕ ತೊಂದರೆ ಇರುವುದು, ಇದು ಆಧ್ಯಾತ್ಮಿಕ ಉನ್ನತಿಗೆ ಅಡ್ಡಿಯಾಗಿದೆ ಎಂಬುದು ಗಮನಕ್ಕೆ ಬರುತ್ತದೆ. ಆದ್ದರಿಂದ ತೊಂದರೆ ಇರುವ ಸಾಧಕರು ಆಧ್ಯಾತ್ಮಿಕ ಉನ್ನತಿಗಾಗಿ ಹೆಚ್ಚಿನ ಪ್ರಯತ್ನ ಮಾಡಬೇಕಾಗಿದೆ.
ಇನ್ನೊಂದು ಪರೀಕ್ಷಣೆಯಲ್ಲಿ, ನಾಲ್ಕು ಸಾಧಕರು ಪ್ರತ್ಯೇಕ 30 ನಿಮಿಷಗಳ ಕಾಲ ‘ಓಂ ನಮೋ ಭಗವತೇ ವಾಸುದೇವಾಯ’ ಎಂದು ನಾಮಜಪ ಮಾಡಿದರು. ಕೇವಲ30 ನಿಮಿಷಗಳ ಏಕಾಗ್ರತೆಯೊಂದಿಗೆ ಮಾಡಿದ ನಾಮಜಪದಿಂದ ಆಧ್ಯಾತ್ಮಿಕ ತೊಂದರೆ ಇಲ್ಲದಿರುವ ಮತ್ತು ಶೇ. 60 ರಷ್ಟು ಆಧ್ಯಾತ್ಮಿಕ ಮಟ್ಟಕ್ಕಿಂತ ಹೆಚ್ಚಿರುವ ಸಾಧಕರಲ್ಲಿರುವ ನಕಾರಾತ್ಮಕ ಊರ್ಜೆಯ ಪ್ರಭಾವಲಯವು ನಾಶವಾಗಿರುವುದು ಮತ್ತು ಅವರ ಸಕಾರಾತ್ಮಕ ಊರ್ಜೆಯ ಪ್ರಭಾವಲಯವು ದ್ವಿಗುಣಗೊಂಡಿರುವುದು ಕಂಡುಬಂದಿತು. ಶೇ. 60 ರಷ್ಟು ಆಧ್ಯಾತ್ಮಿಕ ಮಟ್ಟಕ್ಕಿಂತ ಕಡಿಮೆ ಇರುವ ಸಾಧಕರಲ್ಲಿಯೂ ಅವರ ನಕಾರಾತ್ಮಕ ಊರ್ಜೆಯ ಪ್ರಭಾವಲಯವು ಅರ್ಧಕ್ಕಿಂತ ಕಡಿಮೆಯಾಗಿದೆ ಎಂದು ಕಂಡುಬಂದಿದೆ ಮತ್ತು ಸಕಾರಾತ್ಮಕ ಊರ್ಜೆಯ ಪ್ರಭಾವಲಯವು ಬಹಳ ಹೆಚ್ಚಾಗಿದೆ ಎಂದು ಕಂಡುಬಂದಿದೆ. ಇದರಿಂದ ಪುರುಷರು ಮತ್ತು ಸ್ತ್ರೀಯರು ದೈನಂದಿನ ಆಧ್ಯಾತ್ಮಿಕ ಸಾಧನೆಯ ಮೂಲಕ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಬಹುದು ಎಂಬುದು ಸ್ಪಷ್ಟವಾಯಿತು. ವ್ಯಕ್ತಿಯ ಆಧ್ಯಾತ್ಮಿಕ ಮಟ್ಟವು ಎಷ್ಟು ಹೆಚ್ಚು, ಅಷ್ಟು ಸಾಧನೆಯ ಪರಿಣಾಮ ಹೆಚ್ಚಾಗುತ್ತದೆ.
ಶ್ರೀ. ಕ್ಲಾರ್ಕ್ ಇವರು ಮುಂದೆ ಮಾತನಾಡುತ್ತಾ, ನಕಾರಾತ್ಮಕ ಸ್ಪಂದನಗಳನ್ನು ಪ್ರಕ್ಷೇಪಿಸುವ ಕೃತಿಗಳಲ್ಲಿ ನಾವು ತೊಡಗಿಸಿಕೊಂಡರೆ, ನಾವು ಮಾಡುವ ಆಧ್ಯಾತ್ಮಿಕ ಸಾಧನೆಯ ಪರಿಣಾಮವು ನಾಶವಾಗುತ್ತದೆ. ಮತ್ತೊಂದು ಪರೀಕ್ಷಣೆಯಲ್ಲಿ, ಪ್ರತಿ ಪುರುಷ ಮತ್ತು ಸ್ತ್ರೀ ಸಾಧಕರು, ಮದ್ಯಪಾನ ಮಾಡಿದ ನಂತರ, ಕೇವಲ 5 ನಿಮಿಷಗಳಲ್ಲಿ ಅವರಲ್ಲಿನ ಸಕಾರಾತ್ಮಕ ಊರ್ಜೆಯ ಪ್ರಭಾವಲಯವು ನಾಶವಾಗಿರುವುದು ಮತ್ತು ಕೇವಲ ಅರ್ಧ ಗಂಟೆಯಲ್ಲಿ ನಕಾರಾತ್ಮಕ ಊರ್ಜೆಯ ಪ್ರಭಾವಲಯವು ಬಹಳಷ್ಟು ಪ್ರಮಾಣದಲ್ಲಿ ಹೆಚ್ಚಳವಾಗಿರುವುದು ಕಂಡು ಬಂದಿತು, ಎಂದರು.
ಅನಂತರ ಶ್ರೀ. ಕ್ಲಾರ್ಕ್ ಅವರು ಸ್ತ್ರೀಯರ ಆಧ್ಯಾತ್ಮಿಕ ಪ್ರಗತಿಯ ಮೇಲೆ ಪರಿಣಾಮ ಬೀರುವ ಕೇಶಾಲಂಕಾರ, ಉಡುಪುಗಳು, ಬಟ್ಟೆಯ ಬಣ್ಣಗಳು, ಆಭರಣಗಳು ಇತ್ಯಾದಿ ಘಟಕಗಳ ಸಂದರ್ಭದಲ್ಲಿ ನಡೆಸಿದ ಸಂಶೋಧನೆಯ ಬಗ್ಗೆ ಮಾಹಿತಿ ನೀಡಿದರು. ಕೇಶಾಲಂಕಾರದ ಅಡಿಯಲ್ಲಿ ತುರುಬು ಹಾಕಿಕೊಳ್ಳುವುದರಿಂದ ಅತ್ಯಧಿಕ ಸಾತ್ತ್ವಿಕ ಸ್ಪಂದನಗಳು ಪ್ರಕ್ಷೇಪಿತಗೊಳ್ಳುತ್ತವೆ, ಆದರೆ ಕೂದಲನ್ನು ಸಡಿಲವಾಗಿ ಬಿಡುವುದರಿಂದ ಅಷ್ಟೇ ವಿರುದ್ಧ ಪರಿಣಾಮವಾಗುವುದು ಕಂಡುಬಂದಿದೆ. ವಸ್ತ್ರಗಳಲ್ಲಿ ಯೋಗ್ಯ ರೀತಿಯಿಂದ ಸೀರೆಯನ್ನು ಉಡುವುದು ಅತ್ಯಂತ ಸಾತ್ತ್ವಿಕವಾಗಿದೆ. ಆಭರಣಗಳು ಸ್ತ್ರೀಯರ ಸಕಾರಾತ್ಮಕತೆಯನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು. ಇದು ಆಭರಣದಲ್ಲಿ ಬಳಸುವ ಲೋಹ, ಅದರ ವಿನ್ಯಾಸ (ಡಿಝೈನ್) ಮತ್ತು ಅದರಲ್ಲಿ ಕೂರಿಸಿರುವ ರತ್ನಗಳನ್ನು ಅವಲಂಬಿಸಿರುತ್ತದೆ.
ಪುರುಷರು ಮತ್ತು ಸ್ತ್ರೀಯರ ಗುಣವೈಶಿಷ್ಟ್ಯಗಳನ್ನು ಪರಿಗಣಿಸಿ, ಪುರುಷರಿಗೆ ಹೋಲಿಸಿದರೆ ಸಾಮಾನ್ಯವಾಗಿ ಸ್ತ್ರೀಯರಲ್ಲಿ ಭಾವನಾಶೀಲತೆಯು ಅವರ ಆಧ್ಯಾತ್ಮಿಕ ಉನ್ನತಿಯಲ್ಲಿ ಎಲ್ಲಕ್ಕಿಂತ ದೊಡ್ಡ ಅಡತಡೆ ಇರುವುದು ಕಂಡುಬಂದಿದೆ. ಆದರೆ, ಸ್ತ್ರೀಯರಲ್ಲಿ ಬುದ್ಧಿಯ ಅಡತಡೆ ಕಡಿಮೆ ಮತ್ತು ಶ್ರದ್ಧೆ ಹೆಚ್ಚಿರುತ್ತದೆ, ಇದು ಅವರ ಸಕಾರಾತ್ಮಕ ಭಾಗವಾಗಿದೆ ಆಧ್ಯಾತ್ಮಿಕ ಉನ್ನತಿಗಾಗಿ ಶ್ರದ್ಧೆಯು ಅತ್ಯಂತ ಮಹತ್ವದ್ದಾಗಿರುತ್ತದೆ.
ಪುರುಷರು ಮತ್ತು ಮಹಿಳೆಯರು ಇಬ್ಬರೂ ಪರಸ್ಪರರಿಂದ ಕಲಿಯಬಹುದು. ಹಾಗೆಯೇ ಆಧ್ಯಾತ್ಮಿಕ ಉನ್ನತಿಯು ಸಾಧನೆಗಾಗಿ ಮಾಡುವ ಪ್ರಯತ್ನಗಳ ಮೇಲೆ ಅವಲಂಬಿಸಿರುತ್ತದೆ ಮತ್ತು ಇತರರನ್ನು ಆಧ್ಯಾತ್ಮಿಕ ಮಾರ್ಗದರ್ಶನ ಮಾಡುವ ಕ್ಷಮತೆಯು ವ್ಯಕ್ತಿಯ ಆಧ್ಯಾತ್ಮಿಕ ಮಟ್ಟದ ಮೇಲೆ ಮತ್ತು ಜ್ಞಾನಪ್ರಾಪ್ತಿಯ ಮೇಲೆ ಅವಲಂಬಿಸಿರುತ್ತದೆ,’ ಎಂದು ಶ್ರೀ. ಕ್ಲಾರ್ಕ ಇವರು ಹೇಳಿದರು