ಪರಾತ್ಪರ ಗುರು ಡಾ. ಆಠವಲೆ ಇವರು ತಮ್ಮ ೮೦ ನೇ ಜನ್ಮೋತ್ಸವದ ನಿಮಿತ್ತ ಆಚರಿಸಲಾದ ರಥೋತ್ಸವದ ಸಮಯದಲ್ಲಿ ಧರಿಸಿದ ವಸ್ತ್ರಾಲಂಕಾರಗಳಿಂದ ಹೆಚ್ಚು ಪ್ರಮಾಣದಲ್ಲಿ ಚೈತನ್ಯ ಪ್ರಕ್ಷೇಪಿಸುವುದು

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯುನಿರ್ವಸಲ್ ಔರಾ ಸ್ಕ್ಯಾನರ್’ ಉಪಕರಣದಿಂದ ಮಾಡಿದ ವೈಜ್ಞಾನಿಕ ಪರೀಕ್ಷೆ

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ಆಶಿಷ್ ಸಾವಂತ್

ಸಪ್ತರ್ಷಿಗಳ ಆಜ್ಞೆಗನುಸಾರ ೨೦೧೫ ರಿಂದ ‘ರಾಮನಾಥಿ’ಯ (ಗೋವಾದ) ಸನಾತನದ ಆಶ್ರಮದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮೋತ್ಸವ ಸಮಾರಂಭವನ್ನು ಆಚರಿಸಲಾಗುತ್ತಿದೆ. ಸಪ್ತರ್ಷಿಗಳ ಆಜ್ಞೆಯಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಈ ಮೊದಲು ನಡೆದ ಅವರ ಜನ್ಮೋತ್ಸವದ ಸಮಾರಂಭಗಳಲ್ಲಿ ಶ್ರೀರಾಮ, ಶ್ರೀಕೃಷ್ಣ, ಶ್ರೀವಿಷ್ಣು ಮತ್ತು ಶ್ರೀಸತ್ಯನಾರಾಯಣ ಈ ದೇವತೆಗಳ ರೂಪಗಳಲ್ಲಿ (ಉಡುಪುಗಳಲ್ಲಿ) ಸಾಧಕರಿಗೆ ದರ್ಶನವನ್ನು ನೀಡಿದರು. ಸಪ್ತರ್ಷಿಗಳ ಆಜ್ಞೆಯಂತೆ ೨೨.೫.೨೦೨೨ ರಂದು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ೮೦ ನೇ ಜನ್ಮೋತ್ಸವದ ನಿಮಿತ್ತ ‘ರಥೋತ್ಸವ’ವನ್ನು ಆಚರಿಸಲಾಯಿತು. ‘ರಥೋತ್ಸವ’ದ ಸಮಾರಂಭದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಧರಿಸಿದ ವಸ್ತ್ರಾಲಂಕಾರಗಳ ಸಂದರ್ಭದಲ್ಲಿ ‘ಯು.ಎ.ಎಸ್. (ಯುನಿರ್ವಸಲ್ ಔರಾ ಸ್ಕ್ಯಾನರ್)’ ಈ ಉಪಕರಣದ ಮೂಲಕ ಸಂಶೋಧನೆಯನ್ನು ಮಾಡಲಾಯಿತು. ಅದನ್ನು ಮುಂದೆ ಕೊಡಲಾಗಿದೆ.

ಸೌ. ಮಧುರಾ ಕರ್ವೆ

೧. ಪರೀಕ್ಷಣೆಯ ನಿರೀಕ್ಷಣೆಗಳ ವಿವರಣೆ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ವಸ್ತ್ರಾಲಂಕಾರವನ್ನು ಧರಿಸುವ ಮೊದಲು (ರಥೋತ್ಸವದ ಮೊದಲು) ಮತ್ತು ಧರಿಸಿದ ನಂತರ (ರಥೋತ್ಸವದ ನಂತರ) ವಸ್ತ್ರಾಲಂಕಾರಗಳ ‘ಯು. ಎ. ಎಸ್. (ಯುನಿರ್ವಸಲ್ ಔರಾ ಸ್ಕ್ಯಾನರ್)’ ಈ ಉಪಕರಣದಿಂದ ಪರೀಕ್ಷಣೆಗಳನ್ನು ಮಾಡಲಾಯಿತು.

೧ ಅ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ರಥೋತ್ಸವದಲ್ಲಿ ವಸ್ತ್ರಾಲಂಕಾರಗಳನ್ನು ಧರಿಸಿದ ನಂತರ ವಸ್ತ್ರಾಲಂಕಾರಗಳಲ್ಲಿನ ನಕಾರಾತ್ಮಕ ಊರ್ಜೆ ಇಲ್ಲವಾಗಿ ಅವುಗಳಲ್ಲಿನ ಸಕಾರಾತ್ಮಕ ಊರ್ಜೆಯಲ್ಲಿ ಬಹಳ ಪ್ರಮಾಣದಲ್ಲಿ ಹೆಚ್ಚಳವಾಗುವುದು : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ವಸ್ತ್ರಾಲಂಕಾರಗಳನ್ನು ಧರಿಸುವ ಮೊದಲು (ರಥೋತ್ಸವದ ಮೊದಲು) ವಸ್ತ್ರಾಲಂಕಾರಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ನಕಾರಾತ್ಮಕ ಮತ್ತು ಸಕಾರಾತ್ಮಕ ಊರ್ಜೆ ಇತ್ತು. ರಥೋತ್ಸವದ ಮೊದಲು ವಸ್ತ್ರಾಲಂಕಾರಗಳಲ್ಲಿನ ನಕಾರಾತ್ಮಕ ಊರ್ಜೆಯ ಪ್ರಭಾವಲಯ ೭ ರಿಂದ ೩೮ ಮೀಟರ್ ಮತ್ತು ಸಕಾರಾತ್ಮಕ ಊರ್ಜೆಯ ಪ್ರಭಾವಲಯ ೩ ರಿಂದ ೩೬ ಮೀಟರ್ ಇತ್ತು. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ೨೨.೫.೨೦೨೨ ರಂದು ರಥೋತ್ಸವದಲ್ಲಿ ವಸ್ತ್ರಾಲಂಕಾರಗಳನ್ನು ಧರಿಸಿದ ನಂತರ ವಸ್ತ್ರಾಲಂಕಾರಗಳಲ್ಲಿನ ನಕಾರಾತ್ಮಕ ಊರ್ಜೆ ಇಲ್ಲವಾಗಿ ಅವುಗಳಲ್ಲಿ ಸಕಾರಾತ್ಮಕ ಊರ್ಜೆಯು ತುಂಬಾ ಪ್ರಮಾಣದಲ್ಲಿ ಹೆಚ್ಚಳವಾಯಿತು.

೧ ಅ ೧. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ರಥೋತ್ಸವದಲ್ಲಿ ಧರಿಸಿದ ವಸ್ತ್ರಾಲಂಕಾರಗಳಲ್ಲಿನ ಸಕಾರಾತ್ಮಕ ಊರ್ಜೆಯ ಪ್ರಭಾವಲಯದಲ್ಲಿ ಆದ ಹೆಚ್ಚಳವು ತುಂಬಾ ವೈಶಿಷ್ಟ್ಯಪೂರ್ಣವಾಗಿರುವುದು : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ರಥೋತ್ಸವದಲ್ಲಿ ಧರಿಸಿದ ವಸ್ತ್ರಾಲಂಕಾರಗಳಲ್ಲಿನ ಸಕಾರಾತ್ಮಕ ಊರ್ಜೆಯ ಪ್ರಭಾವಲಯವು ೧ ರಿಂದ ೨ ಸಾವಿರ ಮೀಟರಗಿಂತಲೂ ಹೆಚ್ಚಾಗಿದೆ, ಇದು ಬಹಳ ವೈಶಿಷ್ಟ್ಯಪೂರ್ಣವಾಗಿದೆ. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ರಥೋತ್ಸವದ ದಿನದಂದು ಕೇವಲ ೧-೨ ಗಂಟೆ ಕಾಲ ಧರಿಸಿದ ವಸ್ತ್ರಾಲಂಕಾರಗಳಲ್ಲಾದ ಸಕಾರಾತ್ಮಕ ಪರಿಣಾಮವನ್ನು ನೋಡಿದರೆ ಈ ಸಮಾರಂಭವು ಉಚ್ಚ ಆಧ್ಯಾತ್ಮಿಕ ಸ್ತರದಲ್ಲಿ ಆಗಿರುವುದು ಗಮನಕ್ಕೆ ಬರುತ್ತದೆ. ವಿಶೇಷವೆಂದರೆ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಕೊರಳಲ್ಲಿನ ಹೂವಿನ ಹಾರ ಮತ್ತು ತುಳಸಿ ಮಾಲೆ, ಕೈಯಲ್ಲಿನ ಶಂಖ ಮತ್ತು ಗದೆ, ಹಾಗೆಯೇ ಅವರ ಕಾಲುಚೀಲಗಳಲ್ಲಿನ ಸಕಾರಾತ್ಮಕ ಊರ್ಜೆಯೂ ರಥೋತ್ಸವದ ನಂತರ ವಿಲಕ್ಷಣವಾಗಿ ಹೆಚ್ಚಳವಾಗಿತ್ತು. ಅದನ್ನು ಮುಂದೆ ಕೊಡಲಾಗಿದೆ.

ಟಿಪ್ಪಣಿ : ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಜನ್ಮೋತ್ಸವದಂದು ಧರಿಸಿದ ವಸ್ತ್ರಾಲಂಕಾರದ ಛಾಯಾಚಿತ್ರಗಳನ್ನು ೨೩/೩೮ ರ ಸಾಪ್ತಾಹಿಕದಲ್ಲಿ ನೀಡಲಾಗಿದೆ.

 

೨. ಕಳೆದ ಕೆಲವು ವರ್ಷಗಳಲ್ಲಿನ ಜನ್ಮೋತ್ಸವ ಸಮಾರಂಭಗಳಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ಧರಿಸಿದ
ವಸ್ತ್ರಾಲಂಕಾರಗಳಲ್ಲಿನ ಸಕಾರಾತ್ಮಕ ಊರ್ಜೆಯ ಸಂದರ್ಭದಲ್ಲಿನ ತುಲನಾತ್ಮಕ ಅಧ್ಯಯನ

ಪರಾತ್ಪರ ಗುರು ಡಾ. ಆಠವಲೆಯವರು ಕಳೆದ ಕೆಲವು ವರ್ಷಗಳಲ್ಲಿನ ಜನೋತ್ಸವದ ಸಮಾರಂಭಗಳಲ್ಲಿ ಧರಿಸಿದ ವಸ್ತ್ರಾಲಂಕಾರಗಳಲ್ಲಿನ ಕೆಲವು ಆಯ್ದ ನೋಂದಣಿಗಳನ್ನು ಮುಂದೆ ಕೊಡಲಾಗಿದೆ.

ಟಿಪ್ಪಣಿ ೧ – ಪರೀಕ್ಷೆಯ ಸ್ಥಳದಲ್ಲಿ ಜಾಗವು ಕಡಿಮೆಯಾದುದರಿಂದ ಅದರ ಮುಂದಿನ ಪ್ರಭಾವಲಯದ ಅಳತೆಯನ್ನು ನಿಖರವಾಗಿ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ.
ಟಿಪ್ಪಣಿ ೨ – ೨೦೧೯ ರಲ್ಲಿ ಕಾಲುಗಳಲ್ಲಿನ ಕಡಗಗಳು ಮತ್ತು ಉಂಗುರಗಳ ಪರೀಕ್ಷಣೆ ಮಾಡಲಿಲ್ಲ. ಮೇಲಿನ ಪಟ್ಟಿಯಿಂದ ಗಮನಕ್ಕೆ ಬರುವುದೇನೆಂದರೆ, ಪ್ರತಿ ವರ್ಷ ಜನ್ಮೋತ್ಸವದ ಸಮಾರಂಭಗಳಲ್ಲಿ ಪರಾತ್ಪರ ಗುರು ಡಾಕ್ಟರರು ಧರಿಸಿದ ವಸ್ತ್ರಾಲಂಕಾರಗಳಿಂದ ಸಕಾರಾತ್ಮಕ ಊರ್ಜೆಯ ಪ್ರಭಾವಲಯವು ಉತ್ತರೋತ್ತರ ಹೆಚ್ಚೆಚ್ಚು ಆಗುತ್ತಿದೆ ಮತ್ತು ೨೦೨೨ ರ ಲ್ಲಿ ಅದು ಎಲ್ಲಕ್ಕಿಂತ ಹೆಚ್ಚಾಯಿತು.

೩. ಪರೀಕ್ಷಣೆಯ ನಿರೀಕ್ಷಣೆಗಳ ಆಧ್ಯಾತ್ಮಿಕ ವಿಶ್ಲೇಷಣೆ

೩ ಅ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಲ್ಲಿ ಶೇ. ೫ ರಷ್ಟು ವಿಷ್ಣುತತ್ತ್ವವಿದ್ದು ಅದು ಜಾಗೃತವಾಗಿ ಕಾರ್ಯನಿರತವಾಗುವುದು : ಶ್ರೀವಿಷ್ಣುವು ತ್ರೇತಾಯುಗದಲ್ಲಿ ಶ್ರೀರಾಮನ ರೂಪದಲ್ಲಿ ಮತ್ತು ದ್ವಾಪರಯುಗದಲ್ಲಿ ಶ್ರೀಕೃಷ್ಣನ ರೂಪದಲ್ಲಿ ಪೃಥ್ವಿಯ ಮೇಲೆ ಅವತರಿಸಿದ್ದನು. ‘ಇಂದಿನ ಕಲಿಯುಗದಲ್ಲಿ ಶ್ರೀವಿಷ್ಣುವು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ರೂಪದಲ್ಲಿ ‘ಜಯಂತ’ ನಾಮದಲ್ಲಿ ಅವತರಿಸಿದ್ದಾನೆ’, ಎಂದು ಸಪ್ತರ್ಷಿಗಳು ಹೇಳಿದ್ದಾರೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಲ್ಲಿ ಶೇ. ೫ ರಷ್ಟು ವಿಷ್ಣುತತ್ತ್ವವಿದ್ದು ಅದು ಜಾಗೃತವಾಗಿ ಕಾರ್ಯನಿರತವಾಗಿದೆ. ಪ್ರಸ್ತುತ ಕಲಿಯುಗದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಹಿಂದೂ ರಾಷ್ಟ್ರದ ಸ್ಥಾಪನೆಯ ಮಹಾನ ಸಮಷ್ಟಿ ಕಾರ್ಯ ಮಾಡುತ್ತಿದ್ದಾರೆ. ಈ ಈಶ್ವರೀ ಕಾರ್ಯಕ್ಕಾಗಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರಿಂದ ಹೆಚ್ಚು ಪ್ರಮಾಣದಲ್ಲಿ ವಿಷ್ಣುತತ್ತ್ವ (ಚೈತನ್ಯ) ಪ್ರಕ್ಷೇಪಿಸುತ್ತಿದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಹೆಚ್ಚಾಗಿ ನಿರ್ಗುಣಾವಸ್ಥೆಯಲ್ಲಿರುವುದರಿಂದ ಅವರ ಹೆಚ್ಚಿನ ಕಾರ್ಯವು ಸೂಕ್ಷ್ಮದಿಂದ ದೊಡ್ಡ ಪ್ರಮಾಣದಲ್ಲಿ ನಡೆದಿದೆ. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ರೂಪದಲ್ಲಿ ಶ್ರೀವಿಷ್ಣುವಿನ ‘ಜಯಂತಾವತಾರದ ದಿವ್ಯತೆಯನ್ನು ಎಲ್ಲರೂ ಅನುಭವಿಸಬೇಕು’, ಎಂದು ಸಪ್ತರ್ಷಿಗಳು ಈ ಬಾರಿ ರಥೋತ್ಸವವನ್ನು ಆಚರಿಸಲು ಹೇಳಿದರು. ರಥೋತ್ಸವದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಧರಿಸಿದ ವಸ್ತ್ರಾಲಂಕಾರಗಳಲ್ಲಿನ ಸಕಾರಾತ್ಮಕ ಊರ್ಜೆಯ ಪ್ರಭಾವಲಯದಲ್ಲಿ ಆದ ಹೆಚ್ಚಳವೇ ಇದರ ಸೂಚಕವಾಗಿದೆ.

೪. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ರಥೋತ್ಸವದಲ್ಲಿ ಶ್ರೀವಿಷ್ಣುವಿನ ರೂಪದ ದಿವ್ಯ ದರ್ಶನವನ್ನು ನೀಡಿ ಸಾಧಕರ ಜೀವನವನ್ನು ಸಾರ್ಥಕಗೊಳಿಸುವುದು

೨೦೦೭ ರಲ್ಲಿ ಪ್ರಾಣಶಕ್ತಿಯು ಅತ್ಯಂತ ಕಡಿಮೆ ಇರುವುದರಿಂದ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಆಶ್ರಮದಲ್ಲಿನ ಅವರ ಕೋಣೆಯೊಳಗಿಂದ ಹೊರಗೆ ಬರಲಿಲ್ಲ. ೨೦೧೫ ರಿಂದ ಪ್ರತಿವರ್ಷ ಅವರ ಶಾರೀರಿಕ ಸ್ಥಿತಿ ಸರಿಯಿಲ್ಲದಿದ್ದರೂ ಕೇವಲ ಸಪ್ತರ್ಷಿಗಳ ಆಜ್ಞಾಪಾಲನೆ ಮತ್ತು ಸಮಷ್ಟಿಯ ಕಲ್ಯಾಣಕ್ಕಾಗಿ ಅವರು ಜನ್ಮೋತ್ಸವದ ಸಮಾರಂಭಗಳಲ್ಲಿ ಶ್ರೀರಾಮ, ಶ್ರೀಕೃಷ್ಣ, ಶ್ರಿವಿಷ್ಣು ಮತ್ತು ಶ್ರೀಸತ್ಯನಾರಾಯಣ ಈ ದೇವತೆಗಳ ರೂಪಗಳಲ್ಲಿ (ಉಡುಪುಗಳಲ್ಲಿ) ಸಾಧಕರಿಗೆ ದರ್ಶನವಿತ್ತರು. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಸಪ್ತರ್ಷಿಗಳ ಆಜ್ಞೆಯಂತೆ ಈ ವರ್ಷ ರಥೋತ್ಸವದಲ್ಲಿ ಪಾಲ್ಗೊಂಡು ಸಾಧಕರಿಗೆ ಶ್ರೀವಿಷ್ಣುವಿನ ರೂಪದಲ್ಲಿ ದರ್ಶನವನ್ನು ನೀಡಿದರು. ‘ನ ಭೂತೋ ನ ಭವಿಷ್ಯತಿ |’, ಎಂಬಂತೆ ಅತ್ಯಂತ ಚೈತನ್ಯಮಯ ರಥೋತ್ಸವ ಸಮಾರಂಭದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ದಿವ್ಯ ದರ್ಶನವಾಗಿ ಸಾಧಕರ ಜೀವನವು ಕೃತಾರ್ಥವಾಯಿತು, ಹಾಗೆಯೇ ‘ಚರಾಚರ ಸೃಷ್ಟಿಯೂ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ದಿವ್ಯ ದರ್ಶನವನ್ನು ಪಡೆದು ಕೃತಾರ್ಥವಾಯಿತು’, ಎಂಬ ಅರಿವಾಯಿತು. ಇದಕ್ಕಾಗಿ ಸಪ್ತರ್ಷಿಗಳು ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೪.೭.೨೦೨೨)

ವಿ-ಅಂಚೆ : mav.research೨೦೧೪@gmail.com

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ‘ನಾನು ಅವತಾರವಾಗಿದ್ದೇನೆ’, ಎಂದು ಹೇಳಲಿಲ್ಲ. ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಶ್ರೀವಿಷ್ಣುವಿನ ಅವತಾರವಾಗಿದ್ದಾರೆ’ ಮತ್ತು ‘ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಶ್ರೀ ಮಹಾಲಕ್ಷ್ಮಿದೇವಿಯ ಅವತಾರರಾಗಿದ್ದಾರೆ’, ಎಂದು ಮಹರ್ಷಿಗಳು ನಾಡಿಪಟ್ಟಿಯಲ್ಲಿ ಹೇಳಿದ್ದಾರೆ. ಸಾಧಕರ ಮತ್ತು ಸನಾತನ ಪ್ರಭಾತದ ಸಂಪಾದಕರಿಗೆ ಮಹರ್ಷಿಗಳ ಬಗ್ಗೆ ಭಾವ ಇರುವುದರಿಂದ ನಾವು ಮಹರ್ಷಿಗಳ ಆಜ್ಞೆ ಎಂದು ಈ ಲೇಖನವನ್ನು ಪ್ರಕಟಿಸುತ್ತಿದ್ದೇವೆ. – ಸಂಪಾದಕರು