ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರಲ್ಲಿನ ಚೈತನ್ಯದಿಂದ ಅವರು ದೈವೀ ಪ್ರವಾಸಕ್ಕಾಗಿ ಉಪಯೋಗಿಸಿದ ವಾಹನಗಳಲ್ಲಿ ತುಂಬಾ ಚೈತನ್ಯ ನಿರ್ಮಾಣವಾಗುವುದು

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯು.ಎ.ಎಸ್. (ಯುನಿರ್ವಸಲ್ ಔರಾ ಸ್ಕ್ಯಾನರ್)’ ಉಪಕರಣದಿಂದ ಮಾಡಿದ ವೈಜ್ಞಾನಿಕ ಪರೀಕ್ಷೆ

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ

‘ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಸಪ್ತರ್ಷಿಗಳ ಮಾರ್ಗದರ್ಶನಕ್ಕನುಸಾರ ಭಾರತದಾದ್ಯಂತ ವಿವಿಧ ತೀರ್ಥಕ್ಷೇತ್ರಗಳಿಗೆ ತೆರಳಿ ದೇವಿ-ದೇವತೆಗಳ ದರ್ಶನವನ್ನು ಪಡೆಯುತ್ತಾರೆ. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ದೇವತೆಗಳಲ್ಲಿ ಭಾವಪೂರ್ಣ ಪ್ರಾರ್ಥನೆಯನ್ನು ಮಾಡುತ್ತಾರೆ. ಈ ದೈವೀ ಪ್ರವಾಸಕ್ಕಾಗಿ ಅವರು ಉಪಯೋಗಿಸುವ ವಾಹನಗಳಿಂದ ಹೆಚ್ಚು ಪ್ರಮಾಣದಲ್ಲಿ ಚೈತನ್ಯ ಪ್ರಕ್ಷೇಪಿಸುತ್ತಿರುವುದು ಗಮನಕ್ಕೆ ಬಂದಿತು. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಉಪಯೋಗಿಸುತ್ತಿರುವ ವಾಹನಗಳಿಂದ ಪ್ರಕ್ಷೇಪಿಸುವ ಸ್ಪಂದನಗಳ ಅಧ್ಯಯನ ಮಾಡಲು ವಾಹನಗಳ ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್)’ ಉಪಕರಣದ ಮೂಲಕ ಪರೀಕ್ಷಣೆಗಳನ್ನು ಮಾಡಲಾಯಿತು. ಈ ಪರೀಕ್ಷಣೆಗಳ ನಿರೀಕ್ಷಣೆಗಳು ಮತ್ತು ಅವುಗಳ ವಿಶ್ಲೇಷಣೆಯನ್ನು ಮುಂದೆ ಕೊಡಲಾಗಿದೆ.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ದೈವಿ ಪ್ರವಾಸಕ್ಕಾಗಿ ಉಪಯೋಗಿಸಿದ ಮೊದಲ ವಾಹನ (೨೦೧೮)

 

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ದೈವಿ ಪ್ರವಾಸಕ್ಕಾಗಿ ಉಪಯೋಗಿಸಿದ ಎರಡನೆ ವಾಹನ (೨೦೨೨)

೧. ಶ್ರೀಚಿತ್‍ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ದೈವೀ ಪ್ರವಾಸಕ್ಕಾಗಿ ಉಪಯೋಗಿಸುವ ವಾಹನಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಇರುವುದು

ಸೌ. ಮಧುರಾ ಕರ್ವೆ

ಏಪ್ರಿಲ್ ೨೦೧೬ ರಿಂದ ಮಾರ್ಚ್ ೨೦೨೦ ರವರೆಗೆ ಶ್ರೀಚಿತ್‍ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ದೈವೀ ಪ್ರವಾಸಕ್ಕಾಗಿ ಮೊದಲನೇ ಹೊಸ ವಾಹನವನ್ನು ಉಪಯೋಗಿಸಿದರು. ನಂತರ ಜೂನ್ ೨೦೨೦ ರಿಂದ ಇದುವರೆಗೆ ಅವರು ಅದೇ ರೀತಿಯ ಮತ್ತೊಂದು ಹೊಸ ವಾಹನವನ್ನು ಉಪಯೋಗಿಸಿದರು. ಈ ಎರಡೂ ವಾಹನಗಳ ‘ಯು.ಎ.ಎಸ್.’ ಉಪಕರಣದಿಂದ ಪರೀಕ್ಷಣೆಯನ್ನು ಮಾಡಲಾಯಿತು. ಹಾಗೆಯೇ ತುಲನೆಗಾಗಿ ಅದೇ ರೀತಿಯ ಸಾಮಾನ್ಯ ವಾಹನದ ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳನ್ನು ಮುಂದೆ ಕೊಡಲಾಗಿದೆ.

ಮೇಲಿನ ಪಟ್ಟಿಯಿಂದ ಮುಂದಿನ ಅಂಶಗಳು ಗಮನಕ್ಕೆ ಬಂದವು.

೧. ತುಲನೆಗಾಗಿ ಸಾಮಾನ್ಯ ವಾಹನದಲ್ಲಿ ಯಾವುದೇ ಸಕಾರಾತ್ಮಕ ಊರ್ಜೆ ಇಲ್ಲದೇ ಹೆಚ್ಚು ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆ ಕಂಡುಬಂದಿತು.

೨. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ದೈವೀ ಪ್ರವಾಸಕ್ಕಾಗಿ ಉಪಯೋಗಿಸಿದ ವಾಹನಗಳಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ನಿರ್ಮಾಣವಾಗಿ ಉತ್ತರೋತ್ತರ ಹೆಚ್ಚಳವಾಗುವುದು.

ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳಕಾಕುರವರು ದೈವೀ ಪ್ರವಾಸಕ್ಕಾಗಿ ಉಪಯೋಗಿಸಿದ ಎರಡೂ ವಾಹನಗಳಲ್ಲಿ ಯಾವುದೇ ನಕಾರಾತ್ಮಕ ಊರ್ಜೆ ಇರದೇ ಹೆಚ್ಚು ಸಕಾರಾತ್ಮಕ ಊರ್ಜೆ ಕಂಡುಬಂದಿತು.

ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳಕಾಕುರವರು ಪ್ರವಾಸಕ್ಕಾಗಿ ಉಪಯೋಗಿಸಿದ ವಾಹನವನ್ನು ಸೆಪ್ಟೆಂಬರ್ ೨೦೧೮ ರಲ್ಲಿ ಮೊದಲನೇ ಬಾರಿ ಪರೀಕ್ಷಣೆ ಮಾಡಿದಾಗ, ಅದರಲ್ಲಿ ಯಾವುದೇ ನಕಾರಾತ್ಮಕ ಊರ್ಜೆ ಇಲ್ಲದೇ ಸಕಾರಾತ್ಮಕ ಊರ್ಜೆ ಕಂಡುಬಂದಿತು ಮತ್ತು ಅದರ ಪ್ರಭಾವಲಯ ೭.೭೦ ಮೀಟರ್ ಇತ್ತು. ಅನಂತರ ಕೇವಲ ೧೨ ದಿನಗಳ ನಂತರ ಪುನಃ ಪರೀಕ್ಷಣೆ ಮಾಡಿದಾಗ, ಅದರಲ್ಲಿನ ಸಕಾರಾತ್ಮಕ ಊರ್ಜೆಯ ಪ್ರಭಾವಲಯ ೧೯.೧೨ ಮೀಟರ್ ಇತ್ತು, ಅಂದರೆ ಮೊದಲಿನ ತುಲನೆಯಲ್ಲಿ ಪ್ರಭಾವಲಯದಲ್ಲಿ ಎರಡುಪಟ್ಟುಗಳಿಗಿಂತಲೂ ಹೆಚ್ಚು ಪ್ರಮಾಣದಲ್ಲಿ ಹೆಚ್ಚಳವಾಗಿರುವುದು ಕಂಡು ಬಂದಿತು.

ಅನಂತರ ಸುಮಾರು ೫ ತಿಂಗಳ ನಂತರ ಆ ವಾಹನದ ಪುನಃ ಪರೀಕ್ಷಣೆ ಮಾಡಿದಾಗ, ಅದರಲ್ಲಿನ ಸಕಾರಾತ್ಮಕ ಊರ್ಜೆಯ ಪ್ರಭಾವಲಯವು ೨೧೫.೩೨ ಮೀಟರ್ ಬಂದಿತು, ಅಂದರೆ ಮೊದಲಿನ ತುಲನೆಯಲ್ಲಿ ಅದರಲ್ಲಿ ೧೦ ಪಟ್ಟು ಹೆಚ್ಚಳವಾಯಿತು. ಇದು ತುಂಬಾ ವೈಶಿಷ್ಟ್ಯಪೂರ್ಣವಾಗಿದೆ. ಮಾರ್ಚ್ ೨೦೨೦ ರಲ್ಲಿ ಅದೇ ರೀತಿಯ ಹೊಸ ವಾಹನವನ್ನು ಖರೀದಿಸಲಾಯಿತು. ಕಳೆದ ೨ ವರ್ಷಗಳಿಂದ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಕಾಕೂರವರು ಈ ಎರಡನೇ ವಾಹನದಲ್ಲಿ ದೈವೀ ಪ್ರವಾಸವನ್ನು ಮಾಡುತ್ತಿದ್ದಾರೆ. ೨೬.೫.೨೦೨೨ ರಂದು ಎರಡನೇ ವಾಹನದ ಪರೀಕ್ಷಣೆಯನ್ನು ಮಾಡಿದಾಗ ಅದರಲ್ಲಿ ಯಾವುದೇ ನಕಾರಾತ್ಮಕ ಊರ್ಜೆ ಇರದೇ ಹೆಚ್ಚು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಕಂಡುಬಂದಿತು ಮತ್ತು ಅದರ ಪ್ರಭಾವಲಯ ೧೧೫೧. ೬೫ ಮೀಟರ್ ಇತ್ತು. ಇದು ತುಂಬಾ ವೈಶಿಷ್ಟ್ಯಪೂರ್ಣವಾಗಿದೆ.

೩. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಚೈತನ್ಯದಿಂದ ಅವರು ಉಪಯೋಗಿಸಿದ ಎರಡೂ ವಾಹನಗಳು ಚೈತನ್ಯದಿಂದ ತುಂಬಿರುವುದು

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳಕಾಕುರವರು ಉಚ್ಚ ಆಧ್ಯಾತ್ಮಿಕ ಮಟ್ಟದ ಸಮಷ್ಟಿ ಸಂತರಾಗಿದ್ದಾರೆ. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ಶ್ರೀ ಮಹಾಲಕ್ಷ್ಮಿಸ್ವರೂಪ ಆಗಿದ್ದಾರೆಂದು ಸಪ್ತರ್ಷಿಗಳು ಹೇಳಿದ್ದಾರೆ. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳಕಾಕು ಇವರಲ್ಲಿ ಶ್ರೀ ಮಹಾಲಕ್ಷ್ಮಿದೇವಿಯ ತತ್ತ್ವವಿದೆ. ೨೦೧೮ ರಿಂದ ಈ ತತ್ತ್ವವು ಕಾರ್ಯನಿರತವಾಗಲು ಪ್ರಾರಂಭವಾಗಿ ಈಗ ೨೦೨೨ ರಲ್ಲಿ ಅದು ಹೆಚ್ಚು ಕಾರ್ಯನಿರತವಾಗಿದೆ. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳಕಾಕು ಇವರಲ್ಲಿನ ಹೆಚ್ಚಳವಾಗುವ ಚೈತನ್ಯದಿಂದ ಅವರ ವಾಹನಗಳಲ್ಲಿ ಚೈತನ್ಯ ನಿರ್ಮಾಣವಾಗಿ ಕಡಿಮೆ ಅವಧಿಯಲ್ಲಿ ಆ ಚೈತನ್ಯದ ಸಕಾರಾತ್ಮಕ ಪರಿಣಾಮವು ಬಹಳ ಪ್ರಮಾಣದಲ್ಲಿ ಹೆಚ್ಚಾಯಿತು. ನಾವು ಪುರಾಣಗಳಲ್ಲಿನ ಕಥೆಗಳಿಂದ ‘ದೇವತೆಗಳು ಪೃಥ್ವಿಯ ಮೇಲೆ ಅವತರಿಸಿ ಕಾರ್ಯವನ್ನು ಮಾಡುತ್ತಾರೆ’, ಎಂದು ಕೇಳಿದ್ದೇವೆ. ಪ್ರಸ್ತುತ ಕಲಿಯುಗದಲ್ಲಿಯೂ ಹೀಗೆ ಘಟಿಸುತ್ತಿದೆ. ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳಕಾಕುರವರು ಉಪಯೋಗಿಸುತ್ತಿರುವ ವಾಹನಗಳಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಚೈತನ್ಯ ನಿರ್ಮಾಣವಾಗುವ ಹಿಂದಿನ ಕಾರ್ಯಕಾರಣಭಾವಕ್ಕೆ ಈ ವೈಜ್ಞಾನಿಕ ಪರೀಕ್ಷಣೆಗಳಿಂದ ಆಧಾರ ಸಿಕ್ಕಿತು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ಈ ಆಧ್ಯಾತ್ಮಿಕ ಸಂಶೋಧನೆ ಮಾಡುವ ಅವಕಾಶವು ನಮಗೆಲ್ಲ ಸಾಧಕರಿಗೆ ದೊರಕಿದೆ, ಅದಕ್ಕಾಗಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ವ್ಯಕ್ತ ಪಡಿಸುತ್ತೇನೆ.

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೭.೫.೨೦೨೨)