‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯು.ಎ.ಎಸ್. (ಯುನಿರ್ವಸಲ್ ಔರಾ ಸ್ಕ್ಯಾನರ್)’ ಉಪಕರಣದಿಂದ ಮಾಡಿದ ವೈಜ್ಞಾನಿಕ ಪರೀಕ್ಷೆ
‘ಟೂತ್‌ಪೇಸ್ಟ’ ಮತ್ತು ‘ಟೂತ್‌ಬ್ರಶ್’ಗಳನ್ನು ಉಪಯೋಗಿಸಿ ಹಲ್ಲು ಉಜ್ಜುವ ಪದ್ಧತಿಯು ದೊಡ್ಡ ಪ್ರಮಾಣದಲ್ಲಿ ಪ್ರಚಲಿತವಾಗಿದೆ. ಹಿಂದಿನ ಕಾಲದಲ್ಲಿ ಜನರು ಹಲ್ಲು ಉಜ್ಜಲು ಬೇವಿನ ಕಡ್ಡಿಗಳನ್ನು ಉಪಯೋಗಿಸುತ್ತಿದ್ದರು. ಅದರಿಂದ ಹಲ್ಲುಗಳು ಚೆನ್ನಾಗಿ ಸ್ವಚ್ಛವಾಗುತ್ತವೆ, ಹಾಗೆಯೇ ಬೇವಿನಲ್ಲಿನ ರಸ ಮತ್ತು ಚೈತನ್ಯದಿಂದ ಒಸಡು ಮತ್ತು ಹಲ್ಲುಗಳಿಗೆ ಲಾಭವಾಗಿ ಅವು ಗಟ್ಟಿಮುಟ್ಟು ಆಗಿರುತ್ತವೆ. ‘ಸನಾತನ ಸಂಸ್ಥೆ’ಯ ವತಿಯಿಂದ ನಿತ್ಯೋಪಯೋಗಿ ವಸ್ತುಗಳನ್ನು ತಯಾರಿಸಲಾಗುತ್ತದೆ, ಉದಾ. ಮೈಗೆ ಹಚ್ಚುವ ಸಾಬೂನು, ಕೇಶತೈಲ, ಪರಿಮಳದ್ರವ್ಯ, ದಂತಮಂಜನ (ಹಲ್ಲುಪುಡಿ) ಇತ್ಯಾದಿ. ನಿತ್ಯೋಪಯೋಗಿ ವಸ್ತುಗಳು ಸಾತ್ತ್ವಿಕವಿರುತ್ತವೆ ಜೊತೆಗೆ ಅವುಗಳನ್ನು ಉಪಯೋಗಿಸುವ ಪದ್ಧತಿಯು ಸಾತ್ತ್ವಿಕವಾಗಿದ್ದರೆ ಪ್ರತಿದಿನದ ಕೃತಿಗಳಿಂದ ಆಧ್ಯಾತ್ಮಿಕ ಸ್ತರದಲ್ಲಿ ವ್ಯಕ್ತಿಗೆ ಲಾಭವಾಗುತ್ತದೆ. ಇದಕ್ಕಾಗಿ ‘ಸನಾತನ ಸಂಸ್ಥೆ’ಯು ಸಾತ್ತ್ವಿಕ ಉತ್ಪಾದನೆಗಳನ್ನು ನಿರ್ಮಾಣ ಮಾಡುವುದರೊಂದಿಗೆ ಅದನ್ನು ಉಪಯೋಗಿಸುವ ಸಾತ್ತ್ವಿಕ ಪದ್ಧತಿಯ ಬಗ್ಗೆಯೂ ಮಾರ್ಗದರ್ಶನ ಮಾಡುತ್ತದೆ.
‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದಿಂದ ‘ಸನಾತನ ದಂತಮಂಜನ’ ಮತ್ತು ಪೇಟೆಯಲ್ಲಿನ ಒಂದು ಪ್ರಸಿದ್ಧ ಟೂತ್ ಪೇಸ್ಟನಿಂದ ಪ್ರಕ್ಷೇಪಿತವಾಗುವ ಸ್ಪಂದನಗಳ ಅಧ್ಯಯನ ಮಾಡಲು ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್)’ ಉಪಕರಣದ ಮೂಲಕ ಅವುಗಳ ಪರೀಕ್ಷಣೆಗಳನ್ನು ಮಾಡಲಾಯಿತು. ಈ ಪರೀಕ್ಷಣೆಯ ನಿರೀಕ್ಷಣೆ ಮತ್ತು ಅವುಗಳ ವಿಶ್ಲೇಷಣೆಯನ್ನು ಮುಂದೆ ಕೊಡಲಾಗಿದೆ.
೧. ಪೇಟೆಯಲ್ಲಿನ ಒಂದು ಪ್ರಸಿದ್ಧ ಟೂತ್ ಪೇಸ್ಟನಿಂದ ನಕಾರಾತ್ಮಕ ಸ್ಪಂದನಗಳು ಮತ್ತು ‘ಸನಾತನ ದಂತಮಂಜನ’ದಿಂದ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುವುದು
೧ ಅ. ವಸ್ತುಗಳಿಂದ ಪ್ರಕ್ಷೇಪಿತವಾಗುವ ಸ್ಪಂದನಗಳು ಅನೇಕ ಘಟಕಗಳ ಮೇಲೆ ಅವಲಂಬಿಸಿರುವುದು : ಯಾವುದಾದರೊಂದು ವಸ್ತುವಿನಿಂದ ಪ್ರಕ್ಷೇಪಿಸುವ ಸ್ಪಂದನಗಳು ಅನೇಕ ಘಟಕಗಳ ಮೇಲೆ ಅವಲಂಬಿಸಿರುತ್ತವೆ, ಉದಾ. ವಸ್ತುವಿನ ವಿಧ, ಅದರ ನಿರ್ಮಾಣದ ಉದ್ದೇಶ, ನಿರ್ಮಾಣದ ಸ್ಥಳ, ವಸ್ತುಗಳನ್ನು ಸಿದ್ಧಪಡಿಸಲು ಬಳಸಿದ ಘಟಕಪದಾರ್ಥಗಳು ಇತ್ಯಾದಿ. ಈ ಘಟಕಗಳು ಎಷ್ಟು ಸಾತ್ತ್ವಿಕವಾಗಿರುತ್ತವೆಯೋ, ಅಷ್ಟು ಅವುಗಳಿಂದ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿಸುತ್ತವೆ. ಆದರೆ ಘಟಕಗಳು ಅಸಾತ್ತ್ವಿಕವಾಗಿದ್ದರೆ ಅವುಗಳಿಂದ ನಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿಸುತ್ತವೆ.
೧ ಆ. ಪೇಟೆಯಲ್ಲಿನ ಒಂದು ಪ್ರಸಿದ್ಧ ಟೂತ್ ಪೇಸ್ಟನಿಂದ ನಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿಸುವುದು : ಈ ಪರೀಕ್ಷಣೆಯಲ್ಲಿನ ಪೇಟೆಯಲ್ಲಿನ ಟೂತ್‌ಪೇಸ್ಟನಲ್ಲಿ ಸಕಾರಾತ್ಮಕ ಊರ್ಜೆ ಏನು ಇಲ್ಲದೇ ನಕಾರಾತ್ಮಕ ಊರ್ಜೆಯೇ ಅಪಾರ ಪ್ರಮಾಣದಲ್ಲಿ ಕಂಡುಬಂದಿತು. ಈ ಟೂತ್ ಪೇಸ್ಟನ್ನು ಬಳಸುವವರಿಗೆ ಅದರಲ್ಲಿನ ನಕಾರಾತ್ಮಕ ಸ್ಪಂದಗಳಿಂದ ಆಧ್ಯಾತ್ಮಿಕ ಸ್ತರದಲ್ಲಿ ಹಾನಿಯಾಗುತ್ತದೆ. ಟೂತ್ ಪೇಸ್ಟನಿಂದ ಹಲ್ಲು ಉಜ್ಜಲು ಟೂತ್ ಬ್ರಶ್‌ನ್ನು ಬಳಸುವುದರಿಂದ ಹಾನಿಯ ಪ್ರಮಾಣ ಹೆಚ್ಚುತ್ತದೆ. ಇದರ ಕಾರಣವೆಂದರೆ, ‘ಬ್ರಶ್‌ನ ಕೂದಲುಗಳ ಸ್ಪರ್ಶದಿಂದ ಒಸಡುಗಳು ಮತ್ತು ಹಲ್ಲುಗಳ ಮೇಲೆ ರಜ-ತಮ ಲಹರಿಗಳ ಆವರಣವು ಬರುತ್ತದೆ. ಆದುದರಿಂದ ಹಲ್ಲುಗಳು ಕೇವಲ ಸ್ಥೂಲದಿಂದ ಸ್ವಚ್ಛವಾಗುತ್ತವೆ; ಆದರೆ ಸೂಕ್ಷ್ಮದಿಂದ ಅವು ಅಸ್ವಚ್ಛವೇ ಇರುತ್ತವೆ.’
– ಕು. ಮಧುರಾ ಭೋಸಲೆ (ಆಧ್ಯಾತ್ಮಿಕ ಮಟ್ಟ ಶೇ. ೬೩), ಸನಾತನ ಆಶ್ರಮ, ರಾಮನಾಥಿ, ಗೋವಾ. (ಸೂಕ್ಷ್ಮದಿಂದ ಪ್ರಾಪ್ತವಾದ ಜ್ಞಾನ ೨೮.೧೧.೨೦೦೭)
೧ ಇ. ‘ಸನಾತನ ದಂತಮಂಜನ’ದಿಂದ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿಸುವುದು : ‘ಸನಾತನ ದಂತಮಂಜನ’ದಲ್ಲಿ ನಕಾರಾತ್ಮಕ ಊರ್ಜೆ ಸ್ವಲ್ಪವೂ ಇಲ್ಲ. ಅದರಲ್ಲಿ ಹೆಚ್ಚು ಸಕಾರಾತ್ಮಕ ಊರ್ಜೆ ಕಂಡುಬಂದಿತು. ‘ಸನಾತನ ದಂತ ಮಂಜನ’ವನ್ನು ಉಪಯೋಗಿಸುವವರಿಗೆ ಅದರಲ್ಲಿನ ಸಾತ್ತ್ವಿಕತೆಯ ಲಾಭವಾಗುತ್ತದೆ. ಹಾಗೆಯೇ ಹಲ್ಲುಗಳನ್ನು ಬೆರಳಿನಿಂದ (ಅನಾಮಿಕದಿಂದ) ಉಜ್ಜುವುದರಿಂದ ಹೆಚ್ಚು ಲಾಭವಾಗುತ್ತದೆ. ಇದಕ್ಕೆ ಕಾರಣವೆಂದರೆ, ಬೆರಳಿನಿಂದ ಹಲ್ಲು ಉಜ್ಜಿದ ನಂತರ ದೇಹದಲ್ಲಿನ ಒಳ್ಳೆಯ ಶಕ್ತಿಯು ಬೆರಳಿನ ಗೆಣ್ಣುಗಳಿಂದ ಪ್ರಕ್ಷೇಪಿಸಿ ಒಸಡುಗಳಲ್ಲಿ ಸಂಚರಿಸುತ್ತದೆ. ಈ ಪ್ರಕ್ರಿಯೆಯಿಂದ ಒಸಡು ಮತ್ತು ಹಲ್ಲುಗಳಿಗೆ ಸಾತ್ತ್ವಿಕತೆಯ ಲಾಭವಾಗುತ್ತದೆ. ಆದುದರಿಂದ ಹಲ್ಲುಗಳು ಸ್ಥೂಲದಿಂದ ಮತ್ತು ಸೂಕ್ಷ್ಮದಿಂದಲೂ ಸ್ವಚ್ಛವಾಗುತ್ತವೆ.
– ಕು. ಮಧುರಾ ಭೋಸಲೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (ಸೂಕ್ಷ್ಮದಿಂದ ಪ್ರಾಪ್ತವಾದ ಜ್ಞಾನ ೨೮.೧೧.೨೦೦೭)
೧ ಈ. ಸನಾತನ-ನಿರ್ಮಿತ ಸಾತ್ತ್ವಿಕ ಉತ್ಪಾದನೆಗಳಿಗೆ ಸಂಬಂಧಿಸಿದ ಘಟಕಗಳು ಸಾತ್ತ್ವಿಕವಾಗಿರುವುದರಿಂದ ಅವುಗಳಿಂದ ಸಾತ್ತ್ವಿಕತೆ ಪ್ರಕ್ಷೇಪಿಸುವುದು : ಸನಾತನ-ನಿರ್ಮಿತ ಉತ್ಪಾದನೆಗಳು ಸಾತ್ತ್ವಿಕವಾಗಿರಬೇಕು, ಹಾಗೆಯೇ ಅವುಗಳನ್ನು ಉಪಯೋಗಿಸುವವರಿಗೆ ಆಧ್ಯಾತ್ಮಿಕ ಸ್ತರದಲ್ಲಿನ ಲಾಭವಾಗಬೇಕು, ಎಂಬ ಮುಖ್ಯ ಉದ್ದೇಶವನ್ನಿಟ್ಟು ಅವುಗಳನ್ನು ನಿರ್ಮಾಣ ಮಾಡಲಾಗುತ್ತದೆ. ವಸ್ತುಗಳ ನಿರ್ಮಾಣದಿಂದ ಅವುಗಳ ಮಾರಾಟವನ್ನು ಮಾಡುವವರೆಗಿನ ಪ್ರತಿಯೊಂದು ಕೃತಿಯನ್ನು ಸಾಧಕರು ತಮ್ಮ ‘ಸಾಧನೆ’ ಎಂದು ಮಾಡುತ್ತಾರೆ.
‘ಸನಾತನದ ಉತ್ಪಾದನೆಗಳಿಂದ ಸಾಧಕರಿಗೆ ಮತ್ತು ಸಮಾಜಕ್ಕೆ ಸಾತ್ತ್ವಿಕತೆ ಸಿಗಬೇಕು’, ಎಂದು ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಂಕಲ್ಪವು ಕಾರ್ಯನಿರತವಾಗಿದೆ. ಒಟ್ಟಿನಲ್ಲಿ ಸನಾತನ-ನಿರ್ಮಿತ ಉತ್ಪಾದನೆಗಳಿಗೆ ಸಂಬಂಧಿಸಿದ ಘಟಕಗಳು ಸಾತ್ತ್ವಿಕವಾಗಿ ಇರುವುದರಿಂದ ಅವುಗಳಿಂದ ಸಾತ್ತ್ವಿಕತೆ ಪ್ರಕ್ಷೇಪಿಸುತ್ತದೆ.’
– ಸೌ. ಮಧುರಾ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೬.೫.೨೦೨೧)
ವಿ-ಅಂಚೆ ವಿಳಾಸ : [email protected]
‘ಸನಾತನ ದಂತಮಂಜನ’ದ ಔಷಧೀಯ ಉಪಯೋಗಗಳು, ಆಧಾತ್ಮಿಕ ವೈಶಿಷ್ಟ್ಯಗಳು ಮತ್ತು ಉಪಯುಕ್ತತೆ೧. ಸನಾತನ ದಂತಮಂಜನದ ಔಷಧೀಯ ಉಪಯೋಗಗಳುಸನಾತನ ದಂತಮಂಜನವನ್ನು ನಿಯಮಿತವಾಗಿ ಉಪಯೋಗಿಸುವುದರಿಂದ ಒಸಡು ಮತ್ತು ಹಲ್ಲುಗಳ ದೌರ್ಬಲ್ಯ ದೂರವಾಗಿ ಒಸಡು ಮತ್ತು ಹಲ್ಲುಗಳು ಗಟ್ಟಿಮುಟ್ಟಾಗುತ್ತವೆ. ಒಸಡು ಬಾತು ಹೋಗಿ ಅದರಿಂದ ಕೀವು ಮತ್ತು ರಕ್ತ ಬರುವುದು ಇವೆಲ್ಲ ನಿಲ್ಲುತ್ತದೆ. ಹಲ್ಲು ಹುಳುಕು ಕಡಿಮೆಯಾಗಿ ಹಲ್ಲುಗಳ ಆರೋಗ್ಯವು ಸುಧಾರಿಸುತ್ತದೆ, ಹಲ್ಲುಗಳು ಮೂಲದಿಂದ ಗಟ್ಟಿಯಾಗುತ್ತವೆ. ೨ . ಸನಾತನ ದಂತಮಂಜನದ ಆಧ್ಯಾತ್ಮಿಕ ವೈಶಿಷ್ಟ್ಯಗಳು ಮತ್ತು ಉಪಯುಕ್ತತೆಸನಾತನ ದಂತಮಂಜನದ ಬಗ್ಗೆ ಸನಾತನದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಮಾಡಿದ ‘ಸೂಕ್ಷ್ಮ-ಜ್ಞಾನದ ವಿಷಯದ ಪರೀಕ್ಷಣೆ ಮತ್ತು ಆ ಸಮಯದಲ್ಲಿ ಅವರ ಮನಸ್ಸಿನಲ್ಲಿ ಬಂದ ವಿಚಾರಗಳನ್ನು ಮುಂದೆ ಕೊಡಲಾಗಿದೆ. ಅದರಿಂದ ಸನಾತನ ದಂತಮಂಜನದ ಆಧ್ಯಾತ್ಮಿಕ ವೈಶಿಷ್ಟ್ಯಗಳು ಮತ್ತು ಉಪಯುಕ್ತತೆಯು ಗಮನಕ್ಕೆ ಬರುವುದು. ೨ ಅ. ಸನಾತನ ದಂತಮಂಜನದ ‘ಸೂಕ್ಷ್ಮ-ಜ್ಞಾನ’ದ ಬಗೆಗಿನ ಪರೀಕ್ಷಣೆ ೨ ಅ ೧. ದಂತಮಂಜನವನ್ನು ನೋಡಿ ಒಳ್ಳೆಯದೆನಿಸುವುದು : ದಂತಮಂಜನವನ್ನು ನೋಡಿದಾಗ ಸುಗಂಧಿತ ಉಟಣೆಯ ಪುಡಿ ನೋಡಿದ ನಂತರ ಹೇಗೆ ಒಳ್ಳೆಯದೆನಿಸುತ್ತದೆಯೋ, ಹಾಗೆ ಎನಿಸಿತು. ದೈವತ್ವವಿರುವ ವಿಷಯದಲ್ಲಿ ದೈವೀ ಸುಗಂಧದ ಪ್ರಮಾಣವು ಹೆಚ್ಚು ಪ್ರಮಾಣದಲ್ಲಿರುವುದರಿಂದ ಅದರಲ್ಲಿನ ಪರಿಮಳವು ನೇರವಾಗಿ ಅಂತರ್ಮನಕ್ಕೆ ಸ್ಪರ್ಶವಾಗಿ ಆ ವಸ್ತುಗಳನ್ನು ನೋಡಿ ಒಳ್ಳೆಯದೆನಿಸುತ್ತದೆ. ೨ ಅ ೨. ದಂತಮಂಜನವನ್ನು ಕೈಯಲ್ಲಿ ತೆಗೆದುಕೊಂಡಾಗ ಕೈಗೆ ತಂಪು ಎನಿಸುವುದು : ದಂತಮಂಜನವನ್ನು ಕೈಯಲ್ಲಿ ತೆಗೆದುಕೊಂಡಾಗ ಕೈಗೆ ಶೀತಲತೆಯ ಅರಿವಾಯಿತು. ಯಾವ ಘಟಕಗಳು ಈಶ್ವರನ ಸಂಕಲ್ಪ ಶಕ್ತಿಯಿಂದ ನಿರ್ಮಾಣವಾಗಿರುತ್ತದೆಯೋ, ಅವುಗಳಲ್ಲಿ ಚೈತನ್ಯವಿರುವುದರಿಂದ ಅದರ ಸ್ಪರ್ಶವು ಕೈಗೆ ತಂಪು ಎನಿಸುತ್ತದೆ. (ಆಧಾರ : ಸನಾತನದ ಗ್ರಂಥ ‘ದಿನಚರಿಗೆ ಸಂಬಂಧಿಸಿದ ಆಚಾರಗಳು ಮತ್ತು ಅವುಗಳ ಹಿಂದಿನ ಶಾಸ್ತ್ರ’) |