‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್)’ ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ
೧. ಪರಾತ್ಪರ ಗುರು ಡಾ. ಆಠವಲೆಯವರ ಜನ್ಮಪತ್ರಿಕೆಯ ‘ಯು.ಎ.ಎಸ್.’ ಪರೀಕ್ಷಣೆ
‘ವ್ಯಕ್ತಿಯ ಜನ್ಮಪತ್ರಿಕೆಯಿಂದ ‘ಅವನ ಪೂರ್ಣ ಜೀವನ ಹೇಗಿರಬಹುದು, ಎಂಬುದರ ಅನುಮಾನವನ್ನು ಮಾಡಬಹುದು, ಹಾಗೆಯೇ ಅವನ ಗೋಚರ (ವರ್ತಮಾನ) ಜನ್ಮಪತ್ರಿಕೆಯಿಂದ ಸದ್ಯದ ಜೀವನ ಹೇಗಿರಬಹುದು’, ಎಂಬುದರ ಅನುಮಾನವನ್ನೂ ಮಾಡಬಹುದು. ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಜ್ಯೋತಿಷ್ಯ ವಿಶಾರದ ಶ್ರೀ. ರಾಜ ಕರ್ವೆ ಇವರು ಪರಾತ್ಪರ ಗುರು ಡಾಕ್ಟರರ ಜನ್ಮಪತ್ರಿಕೆಯ ಮತ್ತು ಅವರ ವರ್ತಮಾನಕಾಲದ) ಜನ್ಮಪತ್ರಿಕೆಯ (ಜಾತಕದ) ಅಧ್ಯಯನ ಮಾಡಿ ‘ಅವರ ಜನ್ಮಪತ್ರಿಕೆಯಲ್ಲಿನ ಚಂದ್ರ, ಮಂಗಳ, ಶನಿ ಮತ್ತು ವರ್ತಮಾನ ಕಾಲದ ಜಾತಕದಲ್ಲಿನ ರವಿ, ಬುಧ ಮತ್ತು ಶನಿ ಈ ಗ್ರಹಗಳು ಪರಾತ್ಪರ ಗುರು ಡಾಕ್ಟರರ ಮಹಾಮೃತ್ಯುಯೋಗಕ್ಕೆ ಕಾರಣವಾಗಿವೆ’, ಎಂದರು.
ಪರಾತ್ಪರ ಗುರು ಡಾ. ಆಠವಲೆಯವರ ಮಹಾಮೃತ್ಯುಯೋಗದ ಸಂಕಟವನ್ನು ತಪ್ಪಿಸಿ ಅವರಿಗೆ ಒಳ್ಳೆಯ ಆರೋಗ್ಯ ಪ್ರಾಪ್ತವಾಗಬೇಕು’, ಎಂದು ೨೨.೧.೨೦೨೨ ರಂದು ಗೋವಾದ ರಾಮನಾಥಿಯ ಸನಾತನದ ಆಶ್ರಮದಲ್ಲಿ ಮಹಾಮೃತ್ಯುಂಜಯ ಯಾಗವನ್ನು ಮಾಡಲಾಯಿತು. ಈ ಯಾಗದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಜನ್ಮಪತ್ರಿಕೆ ಮತ್ತು ಗೋಚರ (ವರ್ತಮಾನ) ಜನ್ಮಪತ್ರಿಕೆಯನ್ನಿಟ್ಟು ಅವುಗಳ ಮೇಲಾಗುವ ಪರಿಣಾಮವನ್ನು ‘ಯು.ಎ.ಎಸ್. (ಯುನಿರ್ವಸಲ್ ಔರಾ ಸ್ಕ್ಯಾನರ್)’ ಉಪಕರಣದ ಮೂಲಕ ಅಧ್ಯಯನ ಮಾಡಲಾಯಿತು. ಇದರ ಸಂದರ್ಭದಲ್ಲಿನ ವೈಶಿಷ್ಟ್ಯಪೂರ್ಣ ಸಂಶೋಧನೆಯನ್ನು ಮುಂದೆ ಕೊಡಲಾಗಿದೆ.
೨. ಪರಾತ್ಪರ ಗುರು ಡಾ. ಆಠವಲೆಯವರ ಸದ್ಯದ ಜನ್ಮಪತ್ರಿಕೆಯ ‘ಯು.ಎ.ಎಸ್.’ ನಿರೀಕ್ಷಣೆಗಳು
ಎರಡೂ ಕೊಷ್ಟಕಗಳಲ್ಲಿನ ಸಮಾನ ಟಿಪ್ಪಣಿಗಳು
ಟಿಪ್ಪಣಿ ೧ – ಪರೀಕ್ಷಣೆಯ ಸ್ಥಳದಲ್ಲಿನ ಜಾಗ ಕಡಿಮೆ ಬಿದ್ದುದರಿಂದ ಸಂಪೂರ್ಣ ಪ್ರಭಾವಲಯವನ್ನು ಅಳೆಯಲು ಆಗಲಿಲ್ಲ.
ಟಿಪ್ಪಣಿ ೨ – ಯಾಗದ ಮೊದಲು ಎಲ್ಲ ೯ ಗ್ರಹಗಳ ಮಾದರಿಗಳನ್ನು ಉಪಯೋಗಿಸಿ ಪ್ರಭಾವಲಯಗಳ ಅಳತೆ ಮಾಡಲಾಯಿತು. ಇದರಿಂದ ಜನ್ಮಪತ್ರಿಕೆಯಲ್ಲಿ ‘ಯಾವ ಗ್ರಹಗಳ ಸ್ಪಂದನಗಳು ಎಷ್ಟು ಪ್ರಮಾಣದಲ್ಲಿ ಕಲುಷಿತವಾಗಿವೆ ?’, ಎಂಬುದು ತಿಳಿಯಿತು. ಸದ್ಗುರು ಡಾ. ಮುಕುಲ ಗಾಡಗೀಳರೂ ಕಲುಷಿತ ಗ್ರಹಗಳ ಸಂದರ್ಭದಲ್ಲಿಯೇ ಒತ್ತಡದ ಅರಿವಾಗುತ್ತಿದೆ ಎಂದರು. ಆದುದರಿಂದ ಯಾಗದ ನಂತರ ಕೇವಲ ಕಲುಷಿತ ಗ್ರಹಗಳ ಪ್ರಭಾವಲಯಗಳ ಅಳತೆಗಳನ್ನು ಮಾಡಿದರೂ ಸಾಕಾಗುವುದು ಎಂದು ಅಷ್ಟೇ ಗ್ರಹಗಳ ಮಾದರಿಗಳನ್ನು ಉಪಯೋಗಿಸಿ ಪರೀಕ್ಷಣೆಯನ್ನು ಮಾಡಲಾಯಿತು.
ಈ ಎರಡು ಕೊಷ್ಟಕಗಳಿಂದ ಮುಂದಿನ ಅಂಶಗಳು ಗಮನಕ್ಕೆ ಬಂದವು
೧. ಯಾಗದ ಮೊದಲು, ಯಾಗ ನಡೆಯುತ್ತಿರುವಾಗ ಮತ್ತು ಯಾಗದ ನಂತರವೂ ಪರಾತ್ಪರ ಗುರು ಡಾಕ್ಟರರ ಎರಡೂ ಜನ್ಮಪತ್ರಿಕೆಗಳಲ್ಲಿ ನಕಾರಾತ್ಮಕ ಊರ್ಜೆ ಕಂಡುಬರಲಿಲ್ಲ.
೨. ಯಾಗದ ಮೊದಲು ಎರಡೂ ಜನ್ಮಪತ್ರಿಕೆಗಳಲ್ಲಿ ಸಕಾರಾತ್ಮಕ ಊರ್ಜೆ ಇತ್ತು. ಯಾಗ ಪ್ರಾರಂಭವಾದ ನಂತರ ಜನ್ಮಪತ್ರಿಕೆಗಳಲ್ಲಿನ ಸಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಗುತ್ತಾ ಹೋಯಿತು.
೩. ಯಾಗದ ಮೊದಲು ಪರಾತ್ಪರ ಗುರು ಡಾಕ್ಟರರ ಜನ್ಮಪತ್ರಿಕೆಯಲ್ಲಿನ ಚಂದ್ರ, ಮಂಗಳ ಮತ್ತು ಶನಿ ಮತ್ತು ಗೋಚರ ಜನ್ಮಪತ್ರಿಕೆಯಲ್ಲಿನ ರವಿ, ಬುಧ ಮತ್ತು ಶನಿ ಈ ಗ್ರಹಗಳ ಸ್ಪಂದನಗಳು ಕಲುಷಿತವಾಗಿರುವುದರಿಂದ ಅವುಗಳ ಪ್ರಭಾವಲಯಗಳು ಬಂದಿದ್ದವು. ಯಾಗ ಆರಂಭವಾದ ಬಳಿಕ ಆ ಗ್ರಹಗಳ ಪ್ರಭಾವಲಯಗಳು ಕಡಿಮೆಯಾದವು. ಯಾಗದ ನಂತರ ಪರಾತ್ಪರ ಗುರು ಡಾಕ್ಟರರ ಎರಡೂ ಜನ್ಮಪತ್ರಿಕೆಗಳನ್ನು ಪರೀಕ್ಷಿಸುವಾಗ ‘ಔರಾ ಸ್ಕ್ಯಾನರ್’ದ ಭುಜಗಳು ತೆರೆಯಲಿಲ್ಲ. ಇದರರ್ಥಯಾಗದ ನಂತರ ಜನ್ಮಪತ್ರಿಕೆಗಳಲ್ಲಿ ಆಯಾಯ ಗ್ರಹಗಳ ಕಲುಷಿತ ಸ್ಪಂದನಗಳಿರಲಿಲ್ಲ.
ಇದರಿಂದ ‘ಪರಾತ್ಪರ ಗುರು ಡಾಕ್ಟರರಿಗೆ ಮಹಾಮೃತ್ಯುಂಜಯ ಯಾಗದಿಂದ ದೊರಕಿದ ಚೈತನ್ಯದಿಂದ ಅವರ ಜನ್ಮಪತ್ರಿಕೆಗಳಲ್ಲಿನ ಆಯಾ ಗ್ರಹಗಳ ಕಲುಷಿತ ಸ್ಪಂದನಗಳ ಪ್ರಭಾವಲಯವು ಸಂಪೂರ್ಣ ಇಲ್ಲವಾಯಿತು. ಆದುದರಿಂದ ಪರಾತ್ಪರ ಗುರು ಡಾಕ್ಟರರ ಮಹಾಮೃತ್ಯು ಯೋಗದಿಂದ ರಕ್ಷಣೆಯಾಯಿತು’, ಎಂಬುದು ಗಮನಕ್ಕೆ ಬಂದಿತು.
– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೭.೧.೨೦೨೨)