‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ‘ಯು.ಎ.ಎಸ್. (ಯುನಿರ್ವಸಲ್ ಔರಾ ಸ್ಕ್ಯಾನರ್) ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ
‘ಪರಾತ್ಪರ ಗುರು ಡಾ. ಆಠವಲೆಯವರು ಅವರ ಬಾಲ್ಯವನ್ನು ಯಾವ ಮನೆಯಲ್ಲಿ ಕಳೆದರೋ, ಅಲ್ಲಿನ ಹಳೆಯ ಪೀಠೋಪಕರಣ (ಮೇಜು, ಆಸನ (ಕುರ್ಚಿಗಳು), ಕಪಾಟು, ಮಂಚ ಇತ್ಯಾದಿ ವಸ್ತುಗಳು. ಇವುಗಳಲ್ಲಿನ ಕೆಲವು ವಸ್ತುಗಳು ಮರದ ಹಲಗೆಯದ್ದು ಮತ್ತು ಕೆಲವು ವಸ್ತುಗಳು ಕಬ್ಬಿಣದ್ದಾಗಿವೆ.)ಗಳನ್ನು ಅವರ ಸಹೋದರರಾದ ಡಾ. ವಿಲಾಸ ಆಠವಲೆಯವರು ೨೦೨೧ ರಲ್ಲಿ ಸನಾತನ ಆಶ್ರಮಕ್ಕೆ ಕಳುಹಿಸಿದರು. ಈ ಪೀಠೋಪಕರಣಗಳಲ್ಲಿ ಚೈತನ್ಯ ಇರುವುದು ಅವುಗಳ ಸೂಕ್ಷ್ಮ ಸ್ಪಂದನಗಳಿಂದ ಗಮನಕ್ಕೆ ಬಂದಿತು. ಈ ಪೀಠೋಪಕರಣಗಳನ್ನು ‘ಯು.ಎ.ಎಸ್. (ಯುನಿರ್ವಸಲ್ ಔರಾ ಸ್ಕ್ಯಾನರ್) ಈ ಉಪಕರಣದ ಮೂಲಕ ಪರೀಕ್ಷಣೆಯನ್ನು ಮಾಡಲಾಯಿತು. ತುಲನೆಗಾಗಿ ಓರ್ವ ಸಾಮಾನ್ಯ ವ್ಯಕ್ತಿಯ ಮನೆಯಲ್ಲಿನ ಪೀಠೋಪಕರಣಗಳನ್ನೂ ಪರೀಕ್ಷಣೆ ಮಾಡಲಾಯಿತು.
೧. ಡಾ. ವಿಲಾಸ ಆಠವಲೆಯವರು ನೀಡಿದ ಪೀಠೋಪಕರಣಗಳಲ್ಲಿ ತುಂಬಾ ಚೈತನ್ಯ ಇರುವುದು
ಈ ಪೀರೋಪಕರಣಗಳಲ್ಲಿ ನಕಾರಾತ್ಮಕ ಊರ್ಜೆ ಸ್ವಲ್ಪವೂ ಇರಲಿಲ್ಲ, ಅವುಗಳಲ್ಲಿ ತುಂಬಾ ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆಯಿತ್ತು. ಅವುಗಳಲ್ಲಿನ ಕೆಲವು ಆಯ್ದ ವಸ್ತುಗಳಲ್ಲಿನ ಸಕಾರಾತ್ಮಕ ಊರ್ಜೆಯ ಪರೀಕ್ಷಣೆಗಳನ್ನು ಮುಂದೆ ಕೊಡಲಾಗಿದೆ.
೧ ಅ. ಡಾ. ವಿಲಾಸ ಆಠವಲೆಯವರು ನೀಡಿದ ಸಾಹಿತ್ಯಗಳಲ್ಲಿ ತುಂಬಾ ಚೈತನ್ಯವಿರುವುದರ ಕಾರಣ : ಸಾಮಾನ್ಯವಾಗಿ ವಸ್ತು ಗಳು ಹಳೆಯದಾದ ನಂತರ ಅವುಗಳನ್ನು ನೋಡಿದಾಗ ಒಳ್ಳೆಯದೆನಿಸುವುದಿಲ್ಲ. ಡಾ. ವಿಲಾಸ ಆಠವಲೆಯವರು ನೀಡಿದ ಪೀಠೋಪಕರಣಗಳು ಬಹಳ ಹಳೆಯದಾಗಿದ್ದರೂ ಅವುಗಳತ್ತ ನೋಡಿದಾಗ ಚೈತನ್ಯದ ಅರಿವಾಗುತ್ತದೆ. ಇದರ ಕಾರಣವೆಂದರೆ, ಪರಾತ್ಪರ ಗುರು ಡಾ. ಆಠವಲೆಯವರ ತಾಯಿ-ತಂದೆ ಸಹ ಸಂತರಾಗಿದ್ದರು. ಸಂತರಲ್ಲಿ ತುಂಬಾ ಚೈತನ್ಯವಿರುತ್ತದೆ. ಸಂತರಿಂದ ವಾತಾವರಣದಲ್ಲಿ ಚೈತನ್ಯ ಪ್ರಕ್ಷೇಪಿತವಾಗುತ್ತದೆ. ಸಂತಪದವಿಯನ್ನು ಪ್ರಾಪ್ತಮಾಡಿಕೊಂಡ ತಾಯಿ-ತಂದೆಯರಲ್ಲಿನ ಚೈತನ್ಯದಿಂದ ಅವರು ಉಪಯೋಗಿಸಿದ ವಸ್ತುಗಳ (ಫರ್ನಿಚರ್) ಮೇಲೆ ಸಕಾರಾತ್ಮಕ ಪರಿಣಾಮವಾಗಿ ಆ ವಸ್ತುಗಳು ಚೈತನ್ಯದಿಂದ ತುಂಬಿಕೊಂಡಿವೆ. ವಿಶೇಷವೆಂದರೆ ಇಷ್ಟು ವರ್ಷಗಳ ನಂತರವೂ ಅವುಗಳಲ್ಲಿನ ಚೈತನ್ಯವು ಉಳಿದುಕೊಂಡಿದೆ.
೨. ಸಾಮಾನ್ಯ ವ್ಯಕ್ತಿಯ ಮನೆಯಲ್ಲಿನ ಫರ್ನಿಚರ್(ಪೀಠೋಪಕರಣ)ಗಳಲ್ಲಿ ಸ್ವಲ್ಪವೂ ಸಕಾರಾತ್ಮಕ ಊರ್ಜೆ ಇಲ್ಲದೇ, ನಕಾರಾತ್ಮಕ ಊರ್ಜೆ ಇರುವುದು
ಸಾಮಾನ್ಯ ವ್ಯಕ್ತಿಯ ಮನೆಯಲ್ಲಿನ ಪೀಠೋಪಕರಣಗಳಲ್ಲಿ ಸಕಾರಾತ್ಮಕ ಊರ್ಜೆ ಸ್ವಲ್ಪವೂ ಇರಲಿಲ್ಲ, ಅದರ ಬದಲಿಗೆ ನಕಾರಾತ್ಮಕ ಊರ್ಜೆಯಿತ್ತು. ಅವುಗಳಲ್ಲಿನ ಕೆಲವು ಆಯ್ದ ವಸ್ತುಗಳಲ್ಲಿನ ನಕಾರಾತ್ಮಕ ಊರ್ಜೆಯ ಪರೀಕ್ಷಣೆಗಳನ್ನು ಮುಂದೆ ಕೊಡಲಾಗಿದೆ.
೨ ಅ. ಸಾಮಾನ್ಯ ವ್ಯಕ್ತಿಯ ಮನೆಯಲ್ಲಿನ ಪೀಠೋಪಕರಣಗಳಲ್ಲಿ ಸಕಾರಾತ್ಮಕ ಊರ್ಜೆ ಸ್ವಲ್ಪವೂ ಇರದೇ ನಕಾರಾತ್ಮಕ ಊರ್ಜೆ ಇರುವುದರ ಕಾರಣ : ಕಲಿಯುಗದಲ್ಲಿ ಸಾಮಾನ್ಯ ವ್ಯಕ್ತಿಗಳಲ್ಲಿ ರಜ-ತಮದ ಪ್ರಮಾಣ ಹೆಚ್ಚಿದೆ. ಸಮಾಜದಲ್ಲಿನ ಹೆಚ್ಚಿನ ಜನರು ಸಾಧನೆಯನ್ನು ಮಾಡುವುದಿಲ್ಲ. ಹಾಗೆಯೇ ಅನೇಕರಿಗೆ ಹೆಚ್ಚು-ಕಡಿಮೆ ಪ್ರಮಾಣದಲ್ಲಿ ಆಧ್ಯಾತ್ಮಿಕ ತೊಂದರೆಗಳಿವೆ. ಇದರಿಂದ ಸಾಮಾನ್ಯ ವ್ಯಕ್ತಿಯಲ್ಲಿ ಸಕಾರಾತ್ಮಕ ಸ್ಪಂದನಗಳ ಪ್ರಮಾಣ ಅತ್ಯಂತ ಕಡಿಮೆ ಮತ್ತು ನಕಾರಾತ್ಮಕ ಸ್ಪಂದನಗಳ ಪ್ರಮಾಣ ಹೆಚ್ಚು ಕಂಡುಬರುತ್ತದೆ. ಈ ಪರೀಕ್ಷಣೆಯಲ್ಲಿನ ಸಾಮಾನ್ಯ ವ್ಯಕ್ತಿಗೆ ತೀವ್ರ ಆಧ್ಯಾತ್ಮಿಕ ತೊಂದರೆಯಿದೆ. ಅವಳಲ್ಲಿನ ತೊಂದರೆದಾಯಕ ಸ್ಪಂದನಗಳಿಂದ ಅವಳು ಉಪಯೋಗಿಸಿದ ವಸ್ತುಗಳ ಮೇಲೆ ಪರಿಣಾಮವಾಗಿ, ಅವು ನಕಾರಾತ್ಮಕ ಸ್ಪಂದನಗಳಿಂದ ತುಂಬಿಕೊಂಡಿವೆ. ಆದುದರಿಂದ ಅವಳ ಮನೆಯಲ್ಲಿನ ಪೀಠೋಪಕರಣಗಳಲ್ಲಿ ಸಕಾರಾತ್ಮಕ ಊರ್ಜೆ ಇರದೇ ನಕಾರಾತ್ಮಕ ಊರ್ಜೆ ಕಂಡುಬಂದಿತು. ವ್ಯಕ್ತಿಯು ಸಾಧನೆಯನ್ನು ಮಾಡತೊಡಗಿದರೆ, ಅವನಲ್ಲಿನ ರಜ-ತಮದ ಪ್ರಮಾಣ ಕಡಿಮೆಯಾಗಿ ಅವನಲ್ಲಿನ ಸತ್ತ್ವಗುಣ ಹೆಚ್ಚಾಗತೊಡಗುತ್ತದೆ. ಅವನ ಸಾಧನೆ ಹೆಚ್ಚಾಗುತ್ತ ಹೋದಂತೆ, ಅವನಲ್ಲಿ ಚೈತನ್ಯ ಉತ್ಪನ್ನವಾಗುತ್ತದೆ. ಇದರಿಂದ ಅವನ ದೇಹ, ಅವನ ವಾಸ್ತು, ಅವನು ಉಪಯೋಗಿಸುತ್ತಿರುವ ವಸ್ತುಗಳ ಮೇಲೆ ಒಳ್ಳೆಯ ಪರಿಣಾಮವಾಗಿ ಅವುಗಳೂ ಚೈತನ್ಯದಿಂದ ತುಂಬಿಕೊಳ್ಳುತ್ತವೆ. ಕಾಲಾಂತರದಲ್ಲಿ ಅವನ ಆಧ್ಯಾತ್ಮಿಕ ಉನ್ನತಿಯಾಗಿ ಅವನು ಜನ್ಮ-ಮರಣದ ಚಕ್ರಗಳಿಂದ ಮುಕ್ತನಾಗುತ್ತಾನೆ. ಇದನ್ನು ಗಮನದಲ್ಲಿಟ್ಟು ಎಲ್ಲರೂ ಸಾಧನೆಯನ್ನು ಮಾಡಲು ಆರಂಭಿಸಬೇಕು !’ – ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೮.೪.೨೦೨೨)
ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನ ಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆ ಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು. ಕೆಟ್ಟ ಶಕ್ತಿ : ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ-ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ, ಉದಾ. ಅಸುರರು, ರಾಕ್ಷಸರು, ಪಿಶಾಚಿ, ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವರಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ. |