ಸಕಾರಾತ್ಮಕ ಸ್ಪಂದನಗಳನ್ನು ಪ್ರಕ್ಷೇಪಿಸುವ ಬಟ್ಟೆಗಳಿಗೆ ಒತ್ತು ನೀಡಿ ! – ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

ಶ್ರೀಲಂಕಾದಲ್ಲಿ ನಡೆದ ಅಂತರಾಷ್ಟ್ರೀಯ ವೈಜ್ಞಾನಿಕ ಪರಿಷತ್ತಿನಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಸಂಶೋಧನಾ ಪ್ರಬಂಧ ಮಂಡನೆ !

ಶ್ರೀ. ಶಾನ್ ಕ್ಲಾರ್ಕ್

‘ಬಣ್ಣ, ಕಸೂತಿ (ಡಿಸೈನ್), ಬಟ್ಟೆಯ ವಿನ್ಯಾಸ ಮತ್ತು ಆಕಾರ ಅಥವಾ ಬಟ್ಟೆಯ ಪ್ರಕಾರಗಳು ತಮ್ಮದೇ ಆದ ವಿಶಿಷ್ಟ ಸೂಕ್ಷ್ಮ ಸ್ಪಂದನಗಳನ್ನು ಹೊಂದಿವೆ ಮತ್ತು ಆದ್ದರಿಂದಲೇ ಅದು ನಮ್ಮ ಮೇಲೆ ಆಧ್ಯಾತ್ಮಿಕ ಮಟ್ಟದಲ್ಲಿ ಪರಿಣಾಮ ಬೀರುತ್ತವೆ. ದಿನವಿಡೀ ಬಟ್ಟೆಗಳು ನಮ್ಮ ದೇಹದ ಸಂಪರ್ಕಕ್ಕೆ ಬರುವುದರಿಂದ ಅವು ಶಾರೀರಿಕ ಮತ್ತು ಮಾನಸಿಕ ಮಟ್ಟಗಳ ಮೇಲೆ ಆಧ್ಯಾತ್ಮಿಕವಾಗಿ ನಮ್ಮ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತವೆ, ಎಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ನಡೆಸಿದ ಆಧ್ಯಾತ್ಮಿಕ ಸಂಶೋಧನೆಯಲ್ಲಿ ಸ್ಪಷ್ಟವಾಗಿದೆ. ಇದಲ್ಲದೇ, ವಸ್ತ್ರದ ತಯಾರಿಕಾ ಪ್ರಕ್ರಿಯೆ, ಉತ್ಪನ್ನ ತಯಾರಿಸುವ ಸ್ಥಳದ ಪರಿಸರ, ದರ್ಜಿ ಮತ್ತು ಅದನ್ನು ಖರೀದಿಸುವ ಅಂಗಡಿ ಈ ಘಟಕಗಳಿಂದಲೂ ಕೂಡ ಬಟ್ಟೆನಲ್ಲಿನ ಸ್ಪಂದನಗಳ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ನಾವು ಸಕಾರಾತ್ಮಕ ಸ್ಪಂದನಗಳನ್ನು ಪ್ರಕ್ಷೇಪಿಸುವ ಬಟ್ಟೆಗಳಿಗೆ ಒತ್ತು ನೀಡಬೇಕು’, ಎಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಶ್ರೀ. ಶಾನ್ ಕ್ಲಾರ್ಕ್ ಇವರು ಪ್ರತಿಪಾದಿಸಿದರು. ಅವರು ‘ದಿ ಫಿಫ್ಥ್ ಇಂಟರನ್ಯಾಶನಲ್ ಕಾನ್ಫರೆನ್ಸ್ ಆನ್ ಅಪಾರಲ್ ಟೆಕ್ಸ್‌ಟೈಲ್ಸ್ ಅಂಡ್ ಫ್ಯಾಶನ್ ಡಿಸೈನ್’ ಈ ಪರಿಷತ್ತಿನಲ್ಲಿ ಅವರು ಮಾತನಾಡುತ್ತಿದ್ದರು. ಈ ಪರಿಷತ್ತಿನ ಆಯೋಜನೆಯನ್ನು ಶ್ರೀಲಂಕಾದ ‘ಗ್ಲೋಬಲ್ ಅಕಾಡೆಮಿಕ್ ರಿಸರ್ಚ್’, ಶ್ರೀಲಂಕಾ ಇದರ ವತಿಯಿಂದ ‘ಆನ್‌ಲೈನ್’ ಮೂಲಕ ಆಯೋಜಿಸಿತ್ತು. ಶ್ರೀ. ಕ್ಲಾರ್ಕ್ ಅವರು ಈ ಪರಿಷತ್ತಿನಲ್ಲಿ ‘ಬಣ್ಣ, ವಿನ್ಯಾಸ, ಬಟ್ಟೆ ಮತ್ತು ಫ್ಯಾಷನ್ ಇವುಗಳ ಸೂಕ್ಷ್ಮ ಸ್ಪಂದನಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ?’ ಈ ಸಂಶೋಧನೆ ಪ್ರಬಂಧವನ್ನು ಮಂಡಿಸಿದರು.

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಇವರು ಸಂಶೋಧನಾ ಪ್ರಬಂಧದ ಲೇಖಕರಾಗಿದ್ದು, ಶ್ರೀ. ಶಾನ್ ಕ್ಲಾರ್ಕ್ ಸಹ-ಲೇಖಕರಾಗಿದ್ದಾರೆ. ಇದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ವೈಜ್ಞಾನಿಕ ಪರಿಷತ್ತುಗಳಲ್ಲಿ ಪ್ರಸ್ತುತಪಡಿಸಿದ ೯೬ ನೇ ಪ್ರಸ್ತುತಿಯಾಗಿತ್ತು. ವಿಶ್ವವಿದ್ಯಾಲಯದ ವತಿಯಿಂದ ಇದುವರೆಗೆ ೧೭ ರಾಷ್ಟ್ರೀಯ ಮತ್ತು ೭೮ ಅಂತರರಾಷ್ಟ್ರೀಯ ವೈಜ್ಞಾನಿಕ ಪರಿಷತ್ತಿನಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಾಗಿದೆ. ಇವುಗಳಲ್ಲಿ ೧೧ ಅಂತರರಾಷ್ಟ್ರೀಯ ಪರಿಷತ್ತಿನಲ್ಲಿ ‘ಅತ್ಯುತ್ತಮ ಪ್ರಸ್ತುತಿ ಪ್ರಶಸ್ತಿ’ಗಳನ್ನು ಪಡೆದಿವೆ.
ಶ್ರೀ. ಕ್ಲಾರ್ಕ್ ಇವರು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾನಿಲಯದ ವತಿಯಿಂದ ಬಟ್ಟೆಯ ವಿವಿಧ ಅಂಶಗಳ ಕುರಿತು ನಡೆಸಿದ ಸಂಶೋಧನೆಯನ್ನು ಪ್ರಸ್ತುತಪಡಿಸುವಾಗ, ಮೊದಲಿಗೆ ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.)’ ಈ ಪ್ರಭಾವಳಿ ಅಳೆಯುವ ಸಲಕರಣೆಯಿಂದ ಮಾಡಿದ ಪ್ರಯೋಗದ ಮಾಹಿತಿಯನ್ನು ನೀಡಿದರು. ಅವರು ಬಿಳಿ ಮತ್ತು ಕಪ್ಪು ಬಣ್ಣದ ತೊಳೆದ ಹತ್ತಿ ಬಟ್ಟೆಗಳ ‘ಯು.ಎ.ಎಸ್.’ ಮೂಲಕ ಪರೀಕ್ಷಣೆ ಮಾಡಲಾಯಿತು. ಕಪ್ಪು ಬಟ್ಟೆಯಲ್ಲಿ ಯಾವುದೇ ರೀತಿಯ ಸಕಾರಾತ್ಮಕ ಪತ್ತೆಯಾಗಿಲ್ಲ, ಆದರೆ ನಕಾರಾತ್ಮಕ ಶಕ್ತಿಯ ಪ್ರಭಾವಳಿಯು ೧೭.೮೭ ಮೀ. ಇಷ್ಟು ಇತ್ತು. ತದ್ವಿರುದ್ಧವಾಗಿ, ಬಿಳಿ ಬಟ್ಟೆಯಲ್ಲಿ ಯಾವುದೇ ನಕಾರಾತ್ಮಕತೆ ಪತ್ತೆಯಾಗಿಲ್ಲ, ಆದರೆ ಅದರಲ್ಲಿ ಸಕಾರಾತ್ಮಕ ಊರ್ಜೆಯ ಪ್ರಭಾವಳಿಯು ೧೮.೭೫ ಮೀ. ಇಷ್ಟು ಇತ್ತು. ಈ ಪರೀಕ್ಷೆಯಲ್ಲಿ, ಒಬ್ಬ ವ್ಯಕ್ತಿಯು ಕಪ್ಪು ಮತ್ತು ನಂತರ ಬಿಳಿ ಬಟ್ಟೆಗಳನ್ನು ಧರಿಸಿದ ನಂತರ, ಆ ವ್ಯಕ್ತಿಯಲ್ಲಿನ ಸಕಾರಾತ್ಮಕ ಮತ್ತು ನಕಾರಾತ್ಮಕತೆಯನ್ನು ‘ಯು.ಎ.ಎಸ್.’ ನಿಂದ ಅಳೆಯಲಾಯಿತು. ಅದರಲ್ಲಿ ಕಪ್ಪು ಬಟ್ಟೆಯನ್ನು ಧರಿಸಿದ ನಂತರ ಕೇವಲ ೩೦ ನಿಮಿಷಗಳಲ್ಲಿ ವ್ಯಕ್ತಿಯಲ್ಲಿ ನಕಾರಾತ್ಮಕತೆಯು ಶೇ. ೯೯ ರಷ್ಟು ಹೆಚ್ಚಾಗಿರುವುದು ಕಂಡುಬಂದಿದೆ. ಕಪ್ಪು ಬಣ್ಣವು ಎಲ್ಲಾ ಬಣ್ಣಗಳಲ್ಲಿ ಅತ್ಯಂತ ನಕಾರಾತ್ಮಕತೆಯನ್ನು ಪ್ರಕ್ಷೇಪಿಸುತ್ತದೆ, ಎಂದು ಈ ಸಂಶೋಧನೆಯಲ್ಲಿ ಕಂಡುಬಂದಿದೆ. ಅಂದರೆ, ಈ ನಿಯಮವು ಕೇವಲ ನಿರ್ಜೀವ ವಸ್ತುಗಳಿಗೆ ಮಾತ್ರ ಸೀಮಿತವಾಗಿದೆ, ಸಜೀವಗಳಿಗೆ ಅಲ್ಲ. ಉದಾ. ಚರ್ಮದ ಬಣ್ಣವು ಬಿಳಿ ಆಗಿದೆಯೇ ಅಥವಾ ಕಪ್ಪು ? ಇದು ಆ ವ್ಯಕ್ತಿಯ ಪ್ರಭಾವಳಿಯ ಮೇಲೆ ಪರಿಣಾಮ ಬೀರುವುದಿಲ್ಲ.

ಬಟ್ಟೆಯ ಮೇಲೆ ವಿನ್ಯಾಸವು ಅವರ ಮೇಲೆ ಆಗುವ ಪರಿಣಾಮವನ್ನು ಅಧ್ಯಯನ ಮಾಡಲು, ಒಂದೇ ರೀತಿಯ ಬಟ್ಟೆಯ ೪ ತುಂಡುಗಳನ್ನು ‘ಯು.ಎ.ಎಸ್.’ನಿಂದ ಅಳೆಯಲಾಯಿತು. ಇವುಗಳಲ್ಲಿ ಮೊದಲ ಬಟ್ಟೆಯಲ್ಲಿ ತಿಳಿ ನೀಲಿ ಬಣ್ಣದ ಬಟ್ಟೆಯ ಮೇಲೆ ಬಿಳಿ ಹೂವಿನ ಕಸೂತಿ ಒಳಗೊಂಡಿವೆ; ಎರಡನೇಯ ಬಟ್ಟೆಯಲ್ಲಿ ಬಿಳಿ ಬಟ್ಟೆಯ ಮೇಲೆ ಬಣ್ಣದ ಹೂವಿನ ಕಸೂತಿ ಒಳಗೊಂಡಿವೆ; ಮೂರನೇಯ ಬಟ್ಟೆಯಲ್ಲಿ ಕೆಂಪು ಗುಲಾಬಿ ಬಟ್ಟೆಯ ಮೇಲೆ ಕ್ಲಿಷ್ಟಕರವಾದ ಹೂವಿನ ಮಾದರಿ ಒಳಗೊಂಡಿದೆ ಮತ್ತು ನಾಲ್ಕನೆಯ ಬಟ್ಟೆಯಲ್ಲಿ ಬಿಳಿ ಬಣ್ಣದ ಬಟ್ಟೆಯ ಮೇಲೆ ತಲೆಬುರುಡೆಯ ಕಸೂತಿ ಇರುವುದನ್ನು ತೆಗೆದುಕೊಳ್ಳಲಾಗಿತ್ತು. ಈ ಸಂಶೋಧನೆಯಲ್ಲಿ, ಮೊದಲ ಬಟ್ಟೆಯು ಹೆಚ್ಚು ಸಕಾರಾತ್ಮಕ ಸ್ಪಂದನಗಳನ್ನು ಅಂದರೆ ಸಾತ್ವಿಕತೆಯನ್ನು ಪ್ರಕ್ಷೇಪಿಸುತ್ತಿರುವುದು ಗಮನಕ್ಕೆ ಬಂದಿದೆ. ಅದರಲ್ಲಿ ಯಾವುದೇ ನಕಾರಾತ್ಮಕತೆ ಇರದೇ ಸಕಾರಾತ್ಮಕ ಶಕ್ತಿಯ ಪ್ರಭಾವಳಿಯು ೧೭ ಮೀಟರಗಳಷ್ಟು ದೊಡ್ಡದಾಗಿತ್ತು. ಎರಡನೇ ಬಟ್ಟೆಯಲ್ಲಿ ನಕಾರಾತ್ಮಕ ಶಕ್ತಿಯು ೧೨ ಮೀಟರ್‌ನಷ್ಟು ಪ್ರಭಾವಳಿಯನ್ನು ಹೊಂದಿತ್ತು ಹಾಗೂ ಸಕಾರಾತ್ಮಕ ಶಕ್ತಿಯ ಪ್ರಭಾವಳಿವು ೧.೨೫ ಮೀಟರ್ ಆಗಿತ್ತು. ಮೂರನೇ ಬಟ್ಟೆಯಲ್ಲಿ ೨೨ ಮೀಟರ್‌ಗಳವರೆಗೆ ನಕಾರಾತ್ಮಕತೆ ಕಂಡುಬಂದಿತು ಮತ್ತು ಯಾವುದೇ ಸಕಾರಾತ್ಮಕತೆ ಕಂಡು ಬರಲಿಲ್ಲ. ತಲೆಬುರುಡೆಯ ವಿನ್ಯಾಸವನ್ನು ಹೊಂದಿರುವ ಬಟ್ಟೆಯಲ್ಲಿ ಅತ್ಯಂತ ನಕಾರಾತ್ಮಕವಾಗಿತ್ತು. ಇದರ ನಕಾರಾತ್ಮಕತೆಯು ೧೮೪ ಮೀಟರ್ ನಷ್ಟಿತ್ತು ! ‘ಪಾಲಿಕಾಂಟ್ರಾಸ್ಟ್ ಇಂಟರ್‌ಫರೆನ್ಸ್ ಫೋಟೋಗ್ರಫಿ (ಪಿಪ್)’ ಈ ಸಲಕರಣೆಯನ್ನು ಬಳಸಿಕೊಂಡು ನಡೆಸಿದ ಪರೀಕ್ಷೆಯಲ್ಲಿಯೂ ತಲೆಬುರುಡೆಯ ವಿನ್ಯಾಸವನ್ನು ಹೊಂದಿರುವ ಬಟ್ಟೆಗಳು ಕೋಣೆಯಲ್ಲಿನ ವಾತಾವರಣದಲ್ಲಿ ನಕಾರಾತ್ಮಕತೆಯನ್ನು ಹೆಚ್ಚಿಸುತ್ತಿರುವುದು ಕಂಡುಹಿಡಿಯಿತು.

ವಿವಿಧ ಪ್ರಕಾರದ ಬಟ್ಟೆಗಳಲ್ಲಿ ‘ಖರೀದಿಸಿದ ನಂತರ’, ‘ತೊಳೆದನಂತರ’ ಮತ್ತು ‘ಇಸ್ತ್ರಿ ಮಾಡಿದ ನಂತರ’ ಹೀಗೆ ಮೂರು ಹಂತಗಳಲ್ಲಿ ‘ಯು.ಎ.ಎಸ್.ನಿಂದ ಪರೀಕ್ಷಿಸಲಾಯಿತು. ಅದರಲ್ಲಿ ಬಟ್ಟೆ ಒಗೆಯುವ ಮೊದಲು ವಾತಾವರಣದಲ್ಲಿ ನಕಾರಾತ್ಮಕತೆಯಿಂದಾಗಿ ಬಟ್ಟೆ ಹೆಚ್ಚು ನಕಾರಾತ್ಮಕವಾಗಿರುವುದು ಕಂಡುಬಂದಿದೆ. ಅದನ್ನು ತೊಳೆದ ನಂತರ, ಬಟ್ಟೆಯಲ್ಲಿನ ಮೂಲ ಸ್ಪಂದನಗಳು ಗಮನಕ್ಕೆ ಬಂದವು. ಇಸ್ತ್ರಿ ಮಾಡಿದ ನಂತರ, ಮೂಲತಃ ನಕಾರಾತ್ಮಕ ಇರುವ ಬಟ್ಟೆಗಳು ಹೆಚ್ಚು ನಕಾರಾತ್ಮಕವಾದವು ಹಾಗೂ ಸಕಾರಾತ್ಮಕ ಇರುವ ಬಟ್ಟೆಗಳು ಹೆಚ್ಚು ಸಕಾರಾತ್ಮಕವಾಗಿರುವುದು ಕಂಡು ಬಂದಿದೆ. ಇದರಲ್ಲಿ ರೇಷ್ಮೆ ಮತ್ತು ಹತ್ತಿ ಬಟ್ಟೆಗಳಿಂದ ಹೆಚ್ಚು ಸಕಾರಾತ್ಮಕ ಸ್ಪಂದನಗಳು ಕಂಡುಬಂದರೆ, ‘ಪಾಲಿಸ್ಟರ್’, ‘ನೈಲಾನ್’, ‘ಜಾರ್ಜೆಟ್’ ಮತ್ತು ‘ಲೈಕ್ರಾ’ ಈ ಬಟ್ಟೆಗಳಿಂದ ಹೆಚ್ಚು ನಕಾರಾತ್ಮಕ ಸ್ಪಂದನಗಳು ಕಂಡುಬಂದಿವೆ. ಬಟ್ಟೆಯನ್ನು ಕತ್ತರಿಸಿ ಹೊಲಿಯುವಾಗ ಹೆಚ್ಚು ನಕಾರಾತ್ಮಕವಾಗುತ್ತದೆ ಎಂದು ಈ ಸಂಶೋಧನೆಯಲ್ಲಿ ಕಂಡುಬಂದಿದೆ. ಆದ್ದರಿಂದ, ಸೀರೆಯ ಬಟ್ಟೆಯು ಅಖಂಡವಾಗಿರುವುದರಿಂದ, ಹಾಗೆಯೇ ಅದನ್ನು ಯಾವ ಪದ್ದತಿಯಲ್ಲಿ ಉಡಲಾಗುತ್ತದೆ ಅದರಿಂದ ಆಕೆಯ ಮೇಲೆ ಸಕಾರಾತ್ಮಕ ಸ್ಪಂದನಗಳು ಹೆಚ್ಚು ಪ್ರಮಾಣದಲ್ಲಿ ಹರಿಯುತ್ತವೆ ಎಂದು ಗಮನಕ್ಕೆ ಬಂದಿತು.

ಅಂತಿಮವಾಗಿ, ಮುಕ್ತಾಯಗೊಳಿಸುವಾಗ, ಶ್ರೀ. ಕ್ಲಾರ್ಕ್ ಇವರು, ಯಾವಾಗ ಯಾವ ವ್ಯಕ್ತಿಗೆ ಸೂಕ್ಷ್ಮ ಸ್ಪಂದನಗಳ ಬಗ್ಗೆ ಗಮನಕ್ಕೆ ಬರುತ್ತದೆ, ಆಗ ಯಾವುದರಿಂದ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿಸುವುದು ಮತ್ತು ಯಾವುದರಿಂದ ನಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿಸುವುದು ಇದು ವ್ಯಕ್ತಿಗೆ ಸಹಜವಾಗಿ ಅರಿವಾಗುತ್ತದೆ. ಬಟ್ಟೆಯ ವಿನ್ಯಾಸ ಮಾಡುವ ವ್ಯಕ್ತಿಯಲ್ಲಿ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಕ್ಷಮತೆ ಇದ್ದರೆ ಸಮಾಜಕ್ಕೆ ಅವರ ಲಾಭವಾಗಲಿದೆ ಮತ್ತು ಬಟ್ಟೆಗಳನ್ನು ಖರೀದಿಸುವ ವ್ಯಕ್ತಿಗಳಲ್ಲಿ ಸೂಕ್ಷ್ಮ ಸ್ಪಂದನನಗಳನ್ನು ಅರಿಯುವ ಕ್ಷಮತೆಯನ್ನು ಹೊಂದಿದ್ದರೆ, ಅವರು ಸಹ ಸಾತ್ವಿಕ ಬಟ್ಟೆಗಳನ್ನು ಖರೀದಿಸಬಹುದು ಎಂದು ಹೇಳಿದರು.