‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯು.ಎ.ಎಸ್.’ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ
‘ಪರಾತ್ಪರ ಗುರು ಡಾ. ಆಠವಲೆಯವರು ಈಶ್ವರೀ ರಾಜ್ಯದ ಸ್ಥಾಪನೆಯ ಶ್ರೇಷ್ಠ ಸಮಷ್ಟಿ ಕಾರ್ಯವನ್ನು ಮಾಡುತ್ತಿದ್ದಾರೆ. ಈ ಕಾರ್ಯದಲ್ಲಿ ಅಡಚಣೆಯನ್ನು ತರಲು ದೊಡ್ಡ ದೊಡ್ಡ ಕೆಟ್ಟ ಶಕ್ತಿಗಳು ಪರಾತ್ಪರ ಗುರು ಡಾ. ಆಠವಲೆ, ಹಾಗೆಯೇ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಮೇಲೆ ಸೂಕ್ಷ್ಮದಿಂದ ಆಕ್ರಮಣಗಳನ್ನು ಮಾಡುತ್ತಿವೆ. ಈ ಆಕ್ರಮಣಗಳು ನಾಶವಾಗಬೇಕೆಂದು ಸಪ್ತರ್ಷಿಗಳು ಆಧ್ಯಾತ್ಮಿಕ ಸ್ತರದಲ್ಲಿನ ವಿವಿಧ ಉಪಾಯಗಳನ್ನು ಮಾಡಲು ಹೇಳಿದ್ದಾರೆ. ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಈ ಆಧ್ಯಾತ್ಮಿಕ ಉಪಾಯಗಳ ಸಂದರ್ಭದಲ್ಲಿ ಅನೇಕ ಸಂಶೋಧನೆಗಳನ್ನು ಮಾಡಲಾಗುತ್ತಿದೆ. ಅದರಲ್ಲಿನ ಒಂದು ಸಂಶೋಧನೆಯನ್ನು ಮುಂದೆ ಕೊಡಲಾಗಿದೆ.
೧. ಸಪ್ತರ್ಷಿಗಳು ಹೇಳಿರುವ ಆಧ್ಯಾತ್ಮಿಕ ಉಪಾಯಗಳು
ಪರಾತ್ಪರ ಗುರು ಡಾ. ಆಠವಲೆಯವರ ಮೇಲಾಗುತ್ತಿರುವ ಆಕ್ರಮಣಗಳು ನಾಶವಾಗಲು ಸಪ್ತರ್ಷಿಗಳು ಮುಂದಿನ ಉಪಾಯಗಳನ್ನು ಮಾಡಲು ಹೇಳಿದರು.
೧ ಅ. ೪.೮.೨೦೨೧ ರಂದು ಮಾಡಬೇಕಾದ ಆಧ್ಯಾತ್ಮಿಕ ಉಪಾಯ :
ಪಟಕಾರವನ್ನು ಪುಡಿ ಮಾಡಿ ಒಂದು ಬಟ್ಟೆಯಲ್ಲಿ ಕಟ್ಟಿ ಒಂದು ಚಿಕ್ಕ ಗಂಟನ್ನು ತಯಾರಿಸಬೇಕು. ಮಲಗುವಾಗ ಆ ಗಂಟನ್ನು ಪರಾತ್ಪರ ಗುರು ಡಾಕ್ಟರರ ತಲೆದಿಂಬಿನ ಕೆಳಗೆ ಇಡಬೇಕು. ಮರುದಿನ ಅದನ್ನು ಹರಿಯುವ ನೀರಿನಲ್ಲಿ ವಿಸರ್ಜಿಸಬೇಕು.
೧ ಆ. ೬.೮.೨೦೨೧ ರಂದು ಮಾಡಬೇಕಾದ ಉಪಾಯ : ಪಟಕಾರದ ಪುಡಿ ಮತ್ತು ೩-೪ ಎಳೆ ಕಹಿಬೇವಿನ ಎಲೆಗಳನ್ನು ತಂದು ಅವುಗಳನ್ನು ಒಂದು ಬಟ್ಟೆಯಲ್ಲಿ ಕಟ್ಟಿ ಒಂದು ಚಿಕ್ಕ ಗಂಟನ್ನು ತಯಾರಿಸಬೇಕು. ಅದೇ ರೀತಿ ಕಂದು ಸಕ್ಕರೆ (Brown Sugar) ಮತ್ತು ಜೀರಿಗೆಯ ಒಂದು ಗಂಟನ್ನು ತಯಾರಿಸಬೇಕು. ಇವೆರಡೂ ಗಂಟುಗಳನ್ನು ಮಲಗುವ ಮೊದಲು ಪರಾತ್ಪರ ಗುರು ಡಾಕ್ಟರರ ದಿಂಬಿನ ಕೆಳಗೆ ಇಡಬೇಕು. ಮರುದಿನ ಎರಡೂ ಗಂಟುಗಳನ್ನು ಹರಿಯುವ ನೀರಿನಲ್ಲಿ ವಿಸರ್ಜಿಸಬೇಕು.
ಸಪ್ತರ್ಷಿಗಳು ಹೇಳಿದಂತೆ ಮೇಲಿನ ಆಧ್ಯಾತ್ಮಿಕ ಉಪಾಯಗಳನ್ನು ಮಾಡಲಾಯಿತು. ಈ ಉಪಾಯಗಳನ್ನು ಮಾಡುವ ಮೊದಲು ಮತ್ತು ಮಾಡಿದ ನಂತರ ಮೂರೂ ಗಂಟುಗಳ ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್)’ ಉಪಕರಣದಿಂದ ಪರೀಕ್ಷಣೆಯನ್ನು ಮಾಡಲಾಯಿತು. ಈ ನಿರೀಕ್ಷಣೆಯ ವಿವೇಚನೆ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ಕೊಡಲಾಗಿದೆ.
೨. ಉಪಾಯಗಳ ನಂತರ ಬಟ್ಟೆಯ ಗಂಟುಗಳಲ್ಲಿ ನಕಾರಾತ್ಮಕ ಊರ್ಜೆ ಕಂಡು ಬರುವುದು
ಪರಾತ್ಪರ ಗುರು ಡಾಕ್ಟರರ ದಿಂಬಿನ ಕೆಳಗೆ ಇಟ್ಟ ಮೂರೂ ಗಂಟುಗಳಲ್ಲಿ ಉಪಾಯದ ಮೊದಲು ನಕಾರಾತ್ಮಕ ಊರ್ಜೆಯು ಸ್ವಲ್ಪವೂ ಇರಲಿಲ್ಲ, ಅವುಗಳಲ್ಲಿ ಸಕಾರಾತ್ಮಕ ಊರ್ಜೆ ಇತ್ತು. ಉಪಾಯದ ನಂತರ ಮೂರೂ ಬಟ್ಟೆಯ ಗಂಟುಗಳಲ್ಲಿ ನಕಾರಾತ್ಮಕ ಊರ್ಜೆಯು ಕಂಡುಬಂದಿತು. ವಿಶೇಷವೆಂದರೆ, ೬.೮.೨೦೨೧ ರಂದು ಮಾಡಿದ ಉಪಾಯದ ನಂತರ ಆ ಬಟ್ಟೆಯ ಗಂಟಿನಲ್ಲಿ ಸಕಾರಾತ್ಮಕ ಊರ್ಜೆ ಪ್ರಮಾಣ ಹೆಚ್ಚಾಯಿತು. ಅದು ಈ ಮುಂದಿನ ಕೋಷ್ಟಕದಿಂದ ಗಮನಕ್ಕೆ ಬರುತ್ತದೆ.
೨ ಅ. ಉಪಾಯದ ನಂತರ ಬಟ್ಟೆಯ ಗಂಟುಗಳಲ್ಲಿ ನಕಾರಾತ್ಮಕ ಊರ್ಜೆ ಕಂಡುಬರುವುದರ ಹಿಂದಿನ ಕಾರಣ : ಕೆಟ್ಟ ಶಕ್ತಿಗಳ ಆಕ್ರಮಣಗಳಿಂದ ಪರಾತ್ಪರ ಗುರು ಡಾ. ಆಠವಲೆಯವರ ರಕ್ಷಣೆಯಾಗಬೇಕೆಂದು ಆಧ್ಯಾತ್ಮಿಕ ಉಪಾಯಗಳ ಮೂಲಕ ಮಾಡಿದ ಸಪ್ತರ್ಷಿಗಳ ಸಂಕಲ್ಪ ಕಾರ್ಯನಿರತವಾಯಿತು. ಸಪ್ತರ್ಷಿಗಳು ಹೇಳಿದಂತೆ ಮಾಡಿದ ಉಪಾಯಗಳಿಂದ ಪರಾತ್ಪರ ಗುರು ಡಾಕ್ಟರರ ಮೇಲಾಗುವ ಕೆಟ್ಟ ಶಕ್ತಿಗಳ ಆಕ್ರಮಣಗಳನ್ನು ತಡೆಗಟ್ಟಲು ಬಟ್ಟೆಯ ಗಂಟಿನಲ್ಲಿನ ಚೈತನ್ಯಶಕ್ತಿಯು ಕಾರ್ಯನಿರತವಾಯಿತು. ಬಟ್ಟೆಯ ಗಂಟಿನಲ್ಲಿನ ಚೈತನ್ಯ ಮತ್ತು ಕೆಟ್ಟ ಶಕ್ತಿಗಳ ನಡುವೆ ಸೂಕ್ಷ್ಮಯುದ್ಧ ನಡೆಯಿತು. ಇದರ ಪರಿಣಾಮವೆಂದು ಉಪಾಯದ ನಂತರ ಬಟ್ಟೆಯ ಗಂಟಿನಲ್ಲಿ ನಕಾರಾತ್ಮಕ ಊರ್ಜೆ ಕಂಡು ಬಂತು. ವಿಶೇಷವೆಂದರೆ ೬.೮.೨೦೨೧ ರಂದು ಉಪಾಯದ ನಂತರ ಬಟ್ಟೆಯ ಗಂಟಿನಲ್ಲಿನ ಸಕಾರಾತ್ಮಕ ಊರ್ಜೆಯ ಪ್ರಮಾಣವು ಸ್ವಲ್ಪ ಹೆಚ್ಚಾಯಿತು.
ಇದು ಉಪಾಯದ ಉದ್ದೇಶ ಸಫಲವಾದುದರ ಸಂಕೇತವಾಗಿದೆ. ಪರಾತ್ಪರ ಗುರು ಡಾಕ್ಟರರ ಸಂಶೋಧಕ ವೃತ್ತಿಯಿಂದಾಗಿ ನಮ್ಮೆಲ್ಲ ಸಾಧಕರಿಗೆ ಇದು ಕಲಿಯಲು ಸಿಗುತ್ತಿದೆ, ಅದಕ್ಕಾಗಿ ಅವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !
– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧.೧೨.೨೦೨೧) ವಿ-ಅಂಚೆ : [email protected]
ಕೆಟ್ಟ ಶಕ್ತಿ : ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ-ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದ’ದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ, ಉದಾ. ಅಸುರರು, ರಾಕ್ಷಸರು, ಪಿಶಾಚಿ, ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥ ಗಳಲ್ಲಿ ಉಲ್ಲೇಖವಿದೆ. ಈ ಲೇಖನದಲ್ಲಿ ಪ್ರಸಿದ್ಧಪಡಿಸಿರುವ ಅನುಭೂತಿಗಳು ಭಾವ ವಿದ್ದಲ್ಲಿ ದೇವರು ಎನ್ನುವ ವಚನದಂತೆ ಸಾಧಕರ ವೈಯಕ್ತಿಕ ಅನುಭೂತಿಗಳಾಗಿವೆ. ಅವುಗಳು ಎಲ್ಲರಿಗೂ ಸಮಾನವಾಗಿ ಬರುತ್ತವೆ ಎಂದು ಹೇಳುವ ಹಾಗಿಲ್ಲ. – ಸಂಪಾದಕರು |