ದೈವಿ ಬಾಲಕರು ಮನುಕುಲವನ್ನು ಸುರಾಜ್ಯದತ್ತ ಕೊಂಡೊಯ್ಯುತ್ತಾರೆ !

ಶ್ರೀಲಂಕಾದಲ್ಲಿ ನಡೆದ ಅಂತರರಾಷ್ಟೀಯ ಪರಿಷತ್ತಿನಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯಕ್ಕೆ `ಅತ್ಯುತ್ತಮ’ ಪ್ರಶಸ್ತಿ ಪ್ರದಾನ !

‘ಸಂಪತ್ಕಾಲದಲ್ಲಿ ದೈವಿ ಬಾಲಕರು ಪೃಥ್ವಿಯ ಮೇಲೆ ಜನಿಸುತ್ತಾರೆ ಮತ್ತು ಇವರೇ ಮನುಕುಲವನ್ನು ಸುರಾಜ್ಯದ ಕಡೆ ಕೊಂಡೊಯ್ಯುವರು’ ಎಂದು ಶ್ರೀಲಂಕಾದಲ್ಲಿ ನಡೆದ `ದ ಫೋರ್ಥ ಇಂಟರನ್ಯಾಶನಲ್ ಕಾನ್ಫರೆನ್ಸ್ ಅನ್ ಚಿಲ್ದೆರ್ನ್ ಆಂಡ್ ಯೂಥ ೨೦೨೨’  ಈ ಅಂತರಾಷ್ಟ್ರೀಯ ವೈಜ್ಞಾನಿಕ ಪರಿಷತ್ತಿನಲ್ಲಿ ಸೌ. ಶ್ವೇತಾ ಕ್ಲಾರ್ಕ್ ಇವರು ಹೇಳಿದರು. ಈ ಪರಿಷತ್ತನ್ನು `ದ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ನಾಲೆಡ್ಜ್ ಮ್ಯಾನೇಜ್‌ಮೆಂಟ್’  (TIIKM) ಆಯೋಜಿಸಿತ್ತು. ಸೌ. ಶ್ವೇತಾ ಕ್ಲಾರ್ಕ್ ಇವರು `ದೈವಿ ಬಾಲಕರನ್ನು ಹೇಗೆ ಗುರುತಿಸಬೇಕು ಮತ್ತು ಅವರನ್ನು ಹೇಗೆ ಪೋಷಿಸಬೇಕು’ ಈ ಕುರಿತು ಸಂಶೋಧನಾ ಪ್ರಬಂಧ ಮಂಡಿಸಿದರು. ಅದಕ್ಕಾಗಿ ಅವರಿಗೆ `ಅತ್ಯುತ್ತಮ ನಿರೂಪಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂಶೋಧನಾ ಪ್ರಬಂಧದ ಲೇಖಕರು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಅಠವಲೆಯವರಾಗಿದ್ದೂ, ಶ್ರೀ. ಶಾನ್ ಕ್ಲಾರ್ಕ್ ಮತ್ತು ಸೌ. ಶ್ವೇತಾ ಕ್ಲಾರ್ಕ್ ಇವರು ಸಹ ಲೇಖಕರಾಗಿದ್ದಾರೆ. ಈ ವಿಶ್ವವಿದ್ಯಾಲಯದ ಮೂಲಕ ವೈಜ್ಞಾನಿಕ ಪರಿಷತ್ತಿನಲ್ಲಿಲ್ಲಿ ೯೪ ನೇ ಪ್ರಸ್ತುತಿಯಾಗಿತ್ತು.

ಸೌ. ಶ್ವೇತಾ ಕ್ಲಾರ್ಕ್ ತಮ್ಮ ಮಾತನ್ನು ಮುಂದುವರೆಸುತ್ತಾ, ಉಚ್ಚ ಆಧ್ಯಾತ್ಮಿಕ ಮಟ್ಟವನ್ನು ಹೊಂದಿರುವ ಅನೇಕ ಮಕ್ಕಳು ಸಾಧಕರಲ್ಲಿ ಜನ್ಮತಾಳುತ್ತಿದ್ದಾರೆ; ಹಾಗಾಗಿ ಅವರನ್ನು ನಾವು `ದೈವಿ ಬಾಲಕ’ ಎಂದು ಕರೆಯುತ್ತೇವೆ. ಅವರಲ್ಲಿ ಆಜ್ಞಾಪಾಲನೆ, ಉನ್ನತ ವಿಚಾರಕ್ಷಮತೆ ಮತ್ತು ಆಧ್ಯಾತ್ಮಿಕ ಸಾಮರ್ಥ್ಯ, ಅಧ್ಯಾತ್ಮದ ಸೆಳೆತ ಮತ್ತು ಈಶ್ವರನ ಬಗೆಗಿನ ಭಾವ ಕಂಡುಬರುತ್ತದೆ. ಅವರು ಜೀವನದಲ್ಲಿ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸುವಾಗ ಸ್ಥಿರವಾಗಿರುತ್ತಾರೆ ಮತ್ತು ಜೀವನದತ್ತ ನೋಡುವ ಅವರ ದೃಷ್ಟಿಕೋನವು ಆಧ್ಯಾತ್ಮಿಕವಾಗಿರುತ್ತದೆ. ಅವರಲ್ಲಿ ಸೂಕ್ಷ್ಮ ಸಕಾರಾತ್ಮಕ ಮತ್ತು ನಕಾರಾತ್ಮಕ ಸ್ಪಂದನಗಳನ್ನು ಅರಿತುಕೊಳ್ಳುವ ಕ್ಷಮತೆ ಇರುತ್ತದೆ ಎಂದು ಹೇಳಿದರು.

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ಆಶಿಷ್ ಸಾವಂತ್

ಸೂಕ್ಷ್ಮ ಪರೀಕ್ಷಣೆಯಿಂದ ಗುರುತಿಸಲಾದ ೮ ದೈವಿ ಬಾಲಕರು ಮತ್ತು ೩೨ ಸಾಮಾನ್ಯ ಬಾಲಕರ ಸೂಕ್ಷ್ಮ ಊರ್ಜೆಯನ್ನು ಯುನಿವರ್ಸಲ್ ಔರಾ ಸ್ಕ್ಯಾನರ್  (ಯು.ಎ.ಎಸ್.) ಈ ಉಪಕರಣದ ಮೂಲಕ ಅಳೆಯಲಾಯಿತು. ಸಾಮಾನ್ಯ ಬಾಲಕರಲ್ಲಿ ಅತ್ಯಲ್ಪ ಸಕಾರಾತ್ಮಕ ಊರ್ಜೆ ಮತ್ತು ಬಹಳಷ್ಟು ನಕಾರಾತ್ಮಕ ಊರ್ಜೆ ಇರುವುದು ಕಂಡುಬಂದಿತು . ತದ್ವಿರುದ್ಧ ದೈವಿ ಬಾಲಕರಲ್ಲಿ ಬಹಳ ಕಡಿಮೆ ನಕಾರಾತ್ಮಕ ಊರ್ಜೆ ಮತ್ತು ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಇರುವುದು ಗಮನಕ್ಕೆ ಬಂದಿತು. ಇವರಲ್ಲಿ, ಹುಟ್ಟುವಾಗಲೇ ಸಂತ ಪದವಿಯ ಆಧ್ಯಾತ್ಮಿಕ ಮಟ್ಟ ಹೊಂದಿರುವ ೩ ವರ್ಷದ ಇಬ್ಬರು ದೈವಿ ಬಾಲಕರ ಸಕಾರಾತ್ಮಕ ಊರ್ಜೆಯ ಪ್ರಭಾವಳಿಯು ಸರ್ವೋಚ್ಚ ಅಂದರೆ ಅನುಕ್ರಮವಾಗಿ ೮೨೧ ಮತ್ತು ೭೯೩ ಮೀಟರ್ ಇತ್ತು. ಮತ್ತೊಂದು ಪರೀಕ್ಷಣೆಯಲ್ಲಿ ೩ ದೈವಿ ಬಾಲಕರನ್ನು ೧ ಗಂಟೆ `ಓಂ ನಮೋ ಭಗವತೇ ವಾಸುದೇವಾಯ |’ ಎಂದು ನಾಮಜಪ ಮಾಡುವಂತೆ ಹೇಳಲಾಯಿತು. ಅವರಲ್ಲಿ ಮುಲತಃ ಅತ್ಯಲ್ಪವಾಗಿರುವ ನಕಾರಾತ್ಮಕ ಊರ್ಜೆಯ ಪ್ರಭಾವಳಿಯು ನಾಮಜಪದ ನಂತರ ಶೇ. ೮೬ ರಷ್ಟು ಕಡಿಮೆ ಆಯಿತು ಹಾಗೂ ಸಕಾರಾತ್ಮಕ ಊರ್ಜೆಯ ಪ್ರಭಾವಳಿಯು ಶೇ. ೮೭ ರಷ್ಟು ಹೆಚ್ಚಾಗಿತ್ತು. ದೈವಿ ಬಾಲಕರಿಗೆ ಸಕಾರಾತ್ಮಕತೆಯನ್ನು ಹೆಚ್ಚಿಸುವ ಮತ್ತು ನಕಾರಾತ್ಮಕತೆಯನ್ನು ಕಡಿಮೆ ಮಾಡುವ ಚಟುವಟಿಕೆಗಳನ್ನು ಕಲಿಸಲಾಗುತ್ತದೆ, ಉದಾ. `ಕೋಪ, ಹಠ, ಸೋಮಾರಿತನ’ದಂತಹ ಸ್ವಭಾವದೋಷ ತೊಡೆದುಹಾಕಲು ಸ್ವಭಾವದೋಷ-ನಿರ್ಮೂಲನೆ ಪ್ರಕ್ರಿಯೆ, ಸಂಗೀತ-ನೃತ್ಯದಂತಹ ವಿವಿಧ ಕಲೆಗಳ ಜೊತೆಗೆ ಆಶ್ರಮ ಸ್ವಚ್ಛತೆ, ಧ್ವನಿಮುದ್ರಣ ಸಂಕಲನ, ತಾಂತ್ರಿಕ ಸೇವೆ ಇತ್ಯಾದಿಗಳ ಮೂಲಕ ಸತ್ಸೇವೆಯಲ್ಲಿರುವುದು.

ಕೊನೆಯಲ್ಲಿ ಸೌ. ಕ್ಲಾರ್ಕ್ ಮಾತನಾಡುತ್ತಾ, `ತಮ್ಮ ಮಕ್ಕಳ ಮೇಲೆ ಯೋಗ್ಯ ಸಂಸ್ಕಾರ ಮಾಡುವುದು, ಅದೇ ರೀತಿ ಅಧ್ಯಾತ್ಮಕ್ಕೆ ಪೂರಕ ವಾತಾವರಣವನ್ನು ಒದಗಿಸುವ ಮೂಲಕ ಅವರು ಜನ್ಮಕ್ಕೆ ಬರಲು ಕಾರಣವಾದ `ಈಶ್ವರ ಪ್ರಾಪ್ತಿ’ಯನ್ನು ಸಾಧಿಸಲು ಅವರ ಜೀವನವನ್ನು ಬಳಸುವುದು’, ಪೋಷಕರ ಕರ್ತವ್ಯವಾಗಿದೆ’ ಎಂದು ಹೇಳಿದರು.

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.