ಸುಪೌಲ (ಬಿಹಾರ)ದಲ್ಲಿ ಶಿವಲಿಂಗದ ಮೇಲೆ ಕಾಲಿಟ್ಟು ಛಾಯಾಚಿತ್ರವನ್ನು ತೆಗೆದು ನಂತರ ಅದನ್ನು ಪ್ರಸಾರ ಮಾಡಿದ ಭೀಮ ಆರ್ಮಿಯ ಕಾರ್ಯಕರ್ತರು !

ಈಗ ಹಿಂದುದ್ವೇಷದ ಕಾಮಾಲೆಯಾಗಿರುವ ಭೀಮ ಆರ್ಮಿಯ ಮೇಲೆ ಕೇಂದ್ರ ಸರಕಾರವು ನಿರ್ಬಂಧ ಹೇರಬೇಕೆಂದು ಹಿಂದೂಗಳು ಮತ್ತು ಅವರ ಸಂಘಟನೆಗಳು ಬೇಡಿಕೆಯನ್ನು ಮಾಡಬೇಕು !

‘ಸುದರ್ಶನ ನ್ಯೂಸ್’ ವಾರ್ತಾವಾಹಿನಿಯ ಪತ್ರಕರ್ತ ಮನೀಶ ಕುಮಾರ ಸಿಂಹ ಇವರನ್ನು ಕಥಿತ ಭೂಮಿಯ ವಿವಾದದಿಂದಾಗಿ ಕತ್ತು ಸೀಳಿ ಹತ್ಯೆ

ಸ್ಥಳೀಯ ಮಠಲೋಹಿಯಾ ಎಂಬ ಊರಿನಲ್ಲಿ ಸುದರ್ಶನ ನ್ಯೂಸ್ ಹಿಂದಿ ವಾರ್ತಾ ವಾಹಿನಿಯ ಪತ್ರಕರ್ತ ಮನೀಶ್ ಕುಮಾರ್ ಸಿಂಹ ಇವರ ಕತ್ತು ಸೀಳಿ ಹತ್ಯೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಸಿಸಿಟಿವಿಯ ಆಧಾರದಲ್ಲಿ ಮಹಮ್ಮದ್ ಆಲಮ ಮತ್ತೆ ಅವನ ಸಹಚರನನ್ನು ಬಂಧಿಸಿದ್ದಾರೆ.

ಬಿಹಾರ ಶಿಕ್ಷಣ ಮಂಡಳಿಯ 5 ನೇ ತರಗತಿಯ ಪಠ್ಯ ಪುಸ್ತಕದಲ್ಲಿ ಮಕ್ಕಳ ಮನಸ್ಸಿನ ಮೇಲೆ ಯೇಸು ಕ್ರಿಸ್ತನ ಪ್ರಭಾವ ಬೀರುವ ಅಧ್ಯಾಯ !

ರಾಜ್ಯದ ಶಿಕ್ಷಣ ಮಂಡಳಿಯ `ಸ್ಟೇಟ್ ಕೌನ್ಸಿಲ್ ಫಾರ್ ಎಜುಕೇಷನಲ್ ರಿಸರ್ಚ್ ಮತ್ತು ಟ್ರೈನಿಂಗ್’ (ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತಿನ) 5 ನೇ ತರಗತಿಯ `ಬ್ಲಾಸಮ್ ಪಾರ್ಟ್ – 4′ ಪಠ್ಯ ಪುಸ್ತಕದಲ್ಲಿ, ಮಕ್ಕಳ ಮನಸ್ಸಿನಲ್ಲಿ ಯೇಸು ಕ್ರಿಸ್ತನ ಪ್ರಭಾವ ಬೀರುವಂತಹ ಪಠ್ಯವನ್ನು ನೀಡಲಾಗಿದೆ.

ಗುಂಡುಹಾರಿಸಿ ಕಟಿಹಾರ್ (ಬಿಹಾರ) ನಗರದ ಮಹಾಪೌರರ ಹತ್ಯೆ.

ಮಹಾಪೌರರನ್ನೇ ಹಾಡುಹಗಲಲ್ಲಿ ಹತ್ಯೆ ಮಾಡಲಾಗುತ್ತದೆ. ಇದು ಬಿಹಾರದ ಪೊಲೀಸರಿಗೆ ನಾಚಿಕೆಗೇಡಿನ ವಿಚಾರ. ಇದರಿಂದ ಬಿಹಾರದಲ್ಲಿ ಮತ್ತೆ ಜಂಗಲ ರಾಜ್ಯವು ಪ್ರಾರಂಭವಾಗಿದೆ ಅಂತ ತಿಳಿಯಬೇಕೆ?

‘ತಮ್ಮದೇ ಮನೆಯಲ್ಲಿ ಮರ್ಯಾದೆ ಸಿಗದೇ ಇದ್ದುದರಿಂದ ದಲಿತರು ಮತಾಂತರವಾಗುತ್ತಾರೆ !’ – ಬಿಹಾರದ ಮಾಜಿ ಮುಖ್ಯಮಂತ್ರಿ ಜೀತನ್ ರಾಮ ಮಾಂಝಿ

ಹಿಂದುತ್ವನಿಷ್ಠ ಸಂಘಟನೆಗಳು, ಧಾರ್ಮಿಕ ಸಂಘಟನೆಗಳು, ಸಂಪ್ರದಾಯಗಳು ಇವುಗಳೆಲ್ಲ ಜಾತಿಬೇಧವನ್ನು ನಾಶ ಮಾಡಲು ಕಾರ್ಯನಿರತವಾಗಿವೆ; ಆದರೆ ಬಡ ಹಿಂದೂಗಳಿಗೆ ಆಮಿಷಗಳನ್ನು ತೋರಿಸುವುದರಿಂದಲೇ ಅವರು ಮತಾಂತರವಾಗುತ್ತಾರೆ, ಇದೇ ಸತ್ಯವಾಗಿದೆ.

ಅರಾರಿಯಾ (ಬಿಹಾರ) ಇಲ್ಲಿಯ ಒಂದು ಶಾಲೆಯ ಮತಾಂಧ ಮುಖ್ಯೋಪಾಧ್ಯಾಯರಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ

ಇಂತಹ ಕಾಮಾಂಧರಿಗೆ ಶರಿಯತ್ ಕಾನೂನಿನ ಪ್ರಕಾರ ಕೈ-ಕಾಲು ಮುರಿಯುವ ಅಥವಾ ನಡುರಸ್ತೆಯಲ್ಲಿ ಕಟ್ಟಿಹಾಕಿ ಆತನ ಮೇಲೆ ಕಲ್ಲೆಸೆಯುವ ಶಿಕ್ಷೆ ನೀಡುವಂತೆ ಯಾರಾದರು ಒತ್ತಾಯಿಸಿದರೆ ಅದಕ್ಕೆ ಆಶ್ಚರ್ಯ ಪಡಬೇಕಿಲ್ಲ !

ನಮ್ಮ ಪೂರ್ವಜರು ಹಿಂದೂ ರಜಪೂತರಾಗಿದ್ದರು ! – ಬಿಹಾರದ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮಾ ಖಾನ್

ಹಿಂದೂ ಸಂಬಂಧಿಕರೊಂದಿಗೆ ಇನ್ನೂ ಅನ್ಯೋನ್ಯವಾಗಿದ್ದೇವೆ. ಯಾರನ್ನೂ ಬಲವಂತವಾಗಿ ಮತಾಂರಿಸಲು ಸಾಧ್ಯವಿಲ್ಲ. ನನಗೆ ಬಂದೂಕಿನಿಂದ ಹೆದರಿಸಿದರೂ ನಾನು ನನ್ನ ಧರ್ಮವನ್ನು ಬದಲಾಯಿಸುವುದಿಲ್ಲ. ಯಾರಾದರು ಸ್ವೇಚ್ಛೆಯಿಂದ ಮತಾಂತರಗೊಂಡರೆ ಅದು ಬೇರೆಯೇ ಆಗಿದೆ; ಆದರೆ ಯಾರನ್ನೂ ಬಲವಂತದಿಂದ ಮತಾಂತರವಾಗಲು ರಾಜ್ಯಾಡಳಿತವು ಬಿಡುವುದಿಲ್ಲ ಎಂದು ಹೇಳಿದರು.

ಬಿಹಾರ-ನೇಪಾಳದ ಗಡಿಯಲ್ಲಿ ಪತ್ತೆಯಾದ ಚೀನಾದ ೮ ಡ್ರೋನ್‍ಗಳು !

ಜಮ್ಮುವಿನ ಸೈನ್ಯ ಮತ್ತು ವಾಯುದಳದ ನೆಲೆಯ ಪರಿಸರದಲ್ಲಿ ಜಿಹಾದಿ ಭಯೋತ್ಪಾದಕರಿಂದ ಡ್ರೋನ್ ಮೂಲಕ ದಾಳಿ ಮಾಡುವ ಪ್ರಯತ್ನವಾಗುತ್ತಿರುವಾಗ ಈಗ ಬಿಹಾರದ ನೇಪಾಳದ ಗಡಿಯಲ್ಲಿಯೂ ಚೀನಾದ ೮ ಡ್ರೋನ್‍ಗಳು ಪತ್ತೆಯಾಗಿವೆ. ಪೂರ್ವ ಚಂಪಾರಣ ಜಿಲ್ಲೆಯ ಗಡಿಯಲ್ಲಿ ಸಶಸ್ತ್ರ ಗಡಿ ಪಡೆಯ ಸೈನಿಕರು ಒಂದು ಚತುಶ್ಚಕ್ರ ವಾಹನದಿಂದ ೮ ಡ್ರೋನ್ ಮತ್ತು ೮ ಕ್ಯಾಮೆರಾಗಳನ್ನು ವಶ ಪಡಿಸಿಕೊಂಡಿದ್ದಾರೆ.

ಸಿವಾನ್ (ಬಿಹಾರ)ನಲ್ಲಿ ಮಸೀದಿಯಲ್ಲಿ ಸ್ಫೋಟಗೊಂಡ ಬಾಂಬ್‍ನಿಂದ ಇಬ್ಬರಿಗೆ ಗಾಯ !

ಜುಡಕನ್ ಗ್ರಾಮದ ಮಸೀದಿಯ ಹಿಂದೆ ನಡೆದ ಬಾಂಬ್ ಸ್ಫೋಟದಲ್ಲಿ ತಂದೆ ಮತ್ತು ಮಗ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವಿನೋದ್ ಮಾಂಝಿ ಮತ್ತು ಅವರ ೩ ವರ್ಷದ ಮಗ ಸತ್ಯಂ ಕುಮಾರ್ ಎಂದು ಗುರುತಿಸಲಾಗಿದೆ. ಸ್ಫೋಟದ ಶಬ್ದದಿಂದ ಗ್ರಾಮಸ್ಥರು ಇಲ್ಲಿ ಜಮಾಯಿಸಿ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬಿಹಾರದ ಚಿರಾಗ್ ಪಾಸ್ವಾನ್ ರ ವಿರುದ್ಧ ಲೋಕ ಜನಶಕ್ತಿ ಪಕ್ಷದ ಐದೂ ಸಂಸದರಿಂದ ಬಂಡಾಯ !

ಬಿಹಾರದ ಲೋಕ ಜನಶಕ್ತಿ ಪಕ್ಷದ ಮುಖಂಡ ರಾಮ ವಿಲಾಸ ಪಾಸ್ವಾನ್ ಅವರ ನಿಧನದ ನಂತರ ಅವರ ಪಕ್ಷವು ವಿಭಜನೆಯ ಹಾದಿಯಲ್ಲಿದೆ. ಪಕ್ಷದ ಎಲ್ಲಾ ಐದು ಸಂಸದರು ರಾಮ ವಿಲಾಸ ಪಾಸ್ವಾನ್ ಅವರ ಪುತ್ರ ಮತ್ತು ಅವರ ರಾಜಕೀಯ ಉತ್ತರಾಧಿಕಾರಿ ಚಿರಾಗ್ ಪಾಸ್ವಾನ್ ವಿರುದ್ಧ ಬಂಡಾಯ ಎದ್ದಿದ್ದಾರೆ.