ನ್ಯಾಯಾಧೀಶರ ಮೇಲೆ ಬಂದೂಕಿ ಹಿಡಿಯಲಾಯಿತು
ನ್ಯಾಯಾಧೀಶರನ್ನೇ ಥಳಿಸುವ ಪೊಲೀಸರು ಜನಸಾಮಾನ್ಯರೊಂದಿಗೆ ಹೇಗೆ ವರ್ತಿಸಬಹುದು, ಎಂಬುದು ಗಮನಕ್ಕೆ ಬರುತ್ತದೆ !- ಸಂಪಾದಕರು
ಮಧುಬನಿ (ಬಿಹಾರ) – ಇಲ್ಲಿಯ ಝಾಂಝಾಪೂರದಲ್ಲಿ ಹೆಚ್ಚುವರಿ ಜಿಲ್ಲೆ ಮತ್ತು ಸತ್ರ ನ್ಯಾಯಾಧೀಶ ಅವಿನಾಶ ಕುಮಾರ ಇವರ ಮೇಲೆ ದಾಳಿ ನಡೆಸಿರುವ ಮತ್ತು ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣದಲ್ಲಿ ಇಬ್ಬರು ಪೊಲೀಸರನ್ನು ಬಂಧಿಸಲಾಗಿದೆ. ಈ ಪೊಲೀಸರು ನ್ಯಾಯಾಧೀಶ ಅವಿನಾಶ ಕುಮಾರ ಇವರನ್ನು ಥಳಿಸಿ ಅವರ ಮೇಲೆ ಬಂದೂಕು ಇಡಲಾಯಿತು.
Bihar: Judge assaulted by police officials inside his chamber, threatened with gun, Patna HC furioushttps://t.co/JHhTgDZDNQ
— OpIndia.com (@OpIndia_com) November 19, 2021
ಒಂದು ಪ್ರಕರಣದಲ್ಲಿ ನ್ಯಾಯಾಧೀಶ ಅಭಿನಾಶ ಕುಮಾರ ಇವರು ‘ಮಧುಬನಿದಲ್ಲಿಯ ಪೊಲೀಸ ಅಧೀಕ್ಷಕ ಡಾ. ಸತ್ಯಪ್ರಕಾಶ್ ಇವರಿಗೆ ಕಾನೂನು ಕಲಿಸಬೇಕು’, ಎಂದು ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದರು. ಇದರಿಂದ ಇಬ್ಬರು ಪೊಲೀಸರು ನ್ಯಾಯಾಧೀಶರಿಗೆ ‘ನಿನ್ನ ಯೋಗ್ಯತೆ ಏನೆಂದು ಇಂದು ತೋರಿಸುತ್ತೇವೆ. ನೀನು ನಮ್ಮ ಬಾಸ್‍ಗೆ ತೊಂದರೆ ನೀಡಿದ್ದೀರಿ. ನಿನ್ನ ಯೋಗ್ಯತೆ ಏನೆಂದು ತೋರಿಸುತ್ತೇವೆ’, ಎಂದು ಬೆದರಿಕೆಯೊಡ್ಡಿದ್ದರು. ಆ ಸಮಯದಲ್ಲಿ ನ್ಯಾಯಾಧೀಶರ ಭದ್ರತಾ ಪಡೆಗಳು ಕೂಡಲೇ ಪೊಲೀಸರನ್ನು ಬಂಧಿಸಿದರು. ಈ ಗದ್ದಲದಲ್ಲಿ ನ್ಯಾಯಾಧೀಶರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ನ್ಯಾಯಾಲಯದಲ್ಲಿ ಉಪಸ್ಥಿತರಿರುವ ಕೆಲವು ನ್ಯಾಯವಾದಿಗಳು ಆರೋಪಿ ಪೊಲೀಸರನ್ನು ಥಳಿಸಿದರು.