ವೈಶಾಲೀ (ಬಿಹಾರ) ನಗರದಲ್ಲಿ ಹಿಂದೂಗಳ ಮೂರು ದೇವಾಲಯಗಳಲ್ಲಿ ದೇವರ ಮೂರ್ತಿಗಳನ್ನು ಧ್ವಂಸಗೊಳಿಸಿದ ಅಜ್ಞಾತರು !

ಸ್ಥಳೀಯ ನಾಗರಿಕರಿಂದ ರಸ್ತೆ ತಡೆ ಆಂದೋಲನ!

* ಭಾರತದಲ್ಲಿ ಎಂದಾದರೂ ಯಾವುದಾದರೂ ಮಸೀದಿಯಲ್ಲಾಗಲಿ ಅಥವ ಚರ್ಚಿನಲ್ಲಾಗಲಿ ಧ್ವಂಸ ಮಾಡಿರುವ ಸುದ್ದಿ ಓದಲು ಸಿಗುವುದಿಲ್ಲ; ಆದರೆ ಪ್ರತೀದಿನ ಒಂದಲ್ಲ ಒಂದು ಕಡೆ ಯಾವುದಾದರೂ ಹಿಂದೂಗಳ ದೇವಾಲಯಗಳ ಧ್ವಂಸ ಮಾಡುವ ಘಟನೆ ನಡೆಯುತ್ತಿರುತ್ತದೆ. ಈ ಸ್ಥಿತಿಯನ್ನು ಬದಲಾಯಿಸಲು ಹಿಂದೂಗಳು ಜಾಗೃತರಾಗಿ ಹಿಂದು ರಾಷ್ಟ್ರವನ್ನು ಸ್ಥಾಪಿಸಿ ದೇವರು, ದೇಶ ಹಾಗೂ ಧರ್ಮವನ್ನು ರಕ್ಷಿಸಬೇಕು ! – ಸಂಪಾದಕರು 

* ಬಿಹಾರ ಸರಕಾರದಲ್ಲಿ ಭಾಜಪವು ಸಹಭಾಗಿಯಾಗಿರುವಾಗ ಈ ರೀತಿಯ ಘಟನೆಗಳಾಗುವುದು ಹಿಂದೂಗಳಿಗೆ ಅಪೇಕ್ಷೆಯಿಲ್ಲ ! – ಸಂಪಾದಕರು 

ವೈಶಾಲೀ (ಬಿಹಾರ) – ಇಲ್ಲಿನ ಜಂದಾಹ ಕೊಠೀ ಪರಿಸರದಲ್ಲಿ ಹಿಂದೂಗಳ ಪ್ರಾಚೀನ ಶಿವಮಂದಿರದೊಳಗೆ ನುಗ್ಗಿ ಅಲ್ಲಿರುವ ಮೂರ್ತಿಗಳನ್ನು ಧ್ವಂಸ ಮಾಡಲಾಗಿದೆ. ಅಜ್ಞಾತರು ಇಲ್ಲಿನ ಭಗವಾನ್ ಶಿವ, ಶ್ರೀ ಮಹಾಲಕ್ಷ್ಮೀ ದೇವಿ, ಶ್ರೀ ದುರ್ಗಾದೇವಿ ಹಾಗೂ ಇತರ ದೇವತೆಗಳ ಮೂರ್ತಿಗಳನ್ನು ಹಾಗೂ ಶಿವಲಿಂಗವನ್ನು ಧ್ವಂಸ ಮಾಡಿ ಹೊರಗಿರುವ ಪುಷ್ಕರಣಿಯಲ್ಲಿ ಎಸೆದಿದ್ದಾರೆ. ಇದೇ ರೀತಿ ನಗರದಲ್ಲಿನ ಇತರ 2 ದೇವಾಲಯಗಳಲ್ಲಿ ಕೂಡ ಧ್ವಂಸ ಮಾಡಲಾಗಿದೆ. ಈ ಘಟನೆಯ ಬಗ್ಗೆ ಮಾಹಿತಿ ಸಿಕ್ಕಿದ ತಕ್ಷಣ ಸ್ಥಳೀಯ ನಾಗರಿಕರು ರಸ್ತೆ ತಡೆ ಆಂದೋಲನ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದರು. ಪೊಲೀಸರು ‘ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಲಿದ್ದೇವೆ’, ಎಂದು ಆಶ್ವಾಸನೆ ನೀಡಿದ ಬಳಿಕ ಆಂದೋಲನವನ್ನು ಹಿಂದೆಗೆದುಕೊಳ್ಳಲಾಯಿತು.

ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗೆ ನೋವನುಂಟು ಮಾಡುವುದಾಗಿರದೆ, ಮಾಹಿತಿಯನ್ನು ನೀಡುವ ಉದ್ದೇಶದಿಂದ ಪ್ರಕಟಿಸಲಾಗಿದೆ – ಸಂಪಾದಕರು