ದರಭಂಗಾ (ಬಿಹಾರ) ಇಲ್ಲಿಯ ಸರಕಾರಿ ಆಯುರ್ವೇದಿಕ ಆಸ್ಪತ್ರೆಯಲ್ಲಿ ಇದೇ ಪ್ರಥಮಬಾರಿ ಜಾತಕ ನೋಡಿ ಚಿಕಿತ್ಸೆ ನೀಡುವ ಹೊರರೋಗಿಗಳ ವಿಭಾಗ ಆರಂಭ

ಭಾರತೀಯ ಸಂಸ್ಕೃತಿಯ ಪುನರುತ್ಥಾನ ಈ ರೀತಿಯಲ್ಲಾಗುವುದು ಶ್ಲಾಘನೀಯ ! ಈಗ ದೇಶದ ಇತರ ಆಸ್ಪತ್ರೆಗಳಲ್ಲಿಯೂ ಈ ರೀತಿಯ ವಿಭಾಗ ತೆರೆಯಬೇಕು ! – ಸಂಪಾದಕರು 

ದರಭಂಗಾ (ಬಿಹಾರ) – ಇಲ್ಲಿನ ಸರಕಾರಿ ಆಯುರ್ವೇದ ಮಹಾವಿದ್ಯಾಲಯಗಳಲ್ಲಿ ರೋಗಿಗಳು ಜಾತಕ ನೋಡಿ ಅವರಿಗೆ ಔಷಧೋಪಚಾರ ಮಾಡುವ ಹೊರ ರೋಗಿಗಳ ವಿಭಾಗ (ಒಪಿಡಿ) ಆರಂಭವಾಗಿದೆ. ದೇಶದಲ್ಲಿ ‘ಜ್ಯೋತಿಷ್ಯ ಚಿಕಿತ್ಸೆ’ಯ ಆಧಾರದಲ್ಲಿ ನಡೆಸಲಾಗುವ ಈ ರೀತಿಯ ಇದು ಮೊದಲನೆಯ ಹೊರ ರೋಗಿಗಳ ವಿಭಾಗವಾಗಿದೆ ಮತ್ತು ಅದು ಕೂಡಾ ಸರಕಾರಿ ಆಸ್ಪತ್ರೆಯಲ್ಲಿ ನಡೆಸಲಾಗುತ್ತಿದೆ ಎಂಬುದು ವಿಶೇಷವಾಗಿದೆ. ಈ ಆಸ್ಪತ್ರೆಯ ಪರಿಸರದಲ್ಲಿ ರಾಶಿಗಳ ಅನುಸಾರ ಔಷಧಿ ವನಸ್ಪತಿಗಳ ಒಂದು ಉದ್ಯಾನವನ್ನು ನಿರ್ಮಿಸಲಾಗಿದೆ.

ಇಲ್ಲಿಯ ಪ್ರಾಚಾರ್ಯ ಡಾ. ದಿನೇಶ್ವರ ಪ್ರಸಾದ ಅವರು ಮಾತನಾಡುತ್ತಾ, ‘ಚಿಕಿತ್ಸಾ ಜ್ಯೋತಿಷ್ಯ’ ಇದು ಜ್ಯೋತಿಷ್ಯಶಾಸ್ತ್ರದ ಒಂದು ಪ್ರಾಚೀನ ಶಾಖೆಯಾಗಿದೆ. ಸೂರ್ಯ, ಚಂದ್ರ ಮುಂತಾದ ಗ್ರಹಗಳು ಮತ್ತು ರಾಶಿ ಇವುಗಳ ಆಧಾರದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವ ಶಾಖೆವಾಗಿದೆ. ಇದರಲ್ಲಿ ರೋಗಿಯ ಜಾತಕ ಮತ್ತು ಹಸ್ತರೇಖೆಗಳು ನೋಡಿ ಚಿಕಿತ್ಸೆ ನೀಡಲಾಗುತ್ತದೆ. ಪ್ರಾಚೀನ ಕಾಲದಲ್ಲಿ ಈ ಚಿಕಿತ್ಸಾ ಪದ್ಧತಿ ಜನಪ್ರಿಯವಾಗಿತ್ತು; ಆದರೆ ಕಾಲದ ಗರ್ಭದಲ್ಲಿ ಕಣ್ಮರೆಯಾಗಿತ್ತು; ಈಗ ಅದನ್ನು ಮತ್ತೆ ಉಪಯೋಗ ಮಾಡಲಾಗುತ್ತದೆ. ಇದರ ಉಪಯೋಗ ಮಾಡುವ ಮೊದಲ ಆಸ್ಪತ್ರೆ ನಮ್ಮದಾಗಿದೆ. ಇಲ್ಲಿ ಆಯುರ್ವೇದ, ಯೋಗ ಮತ್ತು ನಿಸರ್ಗ ಚಿಕಿತ್ಸೆ ಸಹಿತ ಜ್ಯೋತಿಷ್ಯ ಚಿಕಿತ್ಸೆಯು ನೀಡಲಾಗುತ್ತಿದೆ’ ಎಂದು ಹೇಳಿದರು.