ಪಾಟಲಿಪುತ್ರ (ಬಿಹಾರ)ದಲ್ಲಿ 2013 ರಲ್ಲಿ ನರೇಂದ್ರ ಮೋದಿ ಅವರ ಸಭೆಯಲ್ಲಾದ ಸರಣಿ ಬಾಂಬ್ ಸ್ಫೋಟ ಪ್ರಕರಣ : 9 ಜನರು ತಪ್ಪಿತಸ್ಥರು

ಪಾಟಲಿಪುತ್ರ (ಬಿಹಾರ) – ಇಲ್ಲಿಯ ಗಾಂಧಿ ಮೈದಾನದಲ್ಲಿ ಅಕ್ಟೋಬರ್ 27, 2013 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ಸಭೆಯಲ್ಲಾದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಎನ್.ಐ.ಎ. ನ ವಿಶೇಷ ನ್ಯಾಯಾಲಯವು 10 ಆರೋಪಿಗಳ ಪೈಕಿ ಫಖರುದ್ದಿನ್ ಎಂಬ ಆರೋಪಿಯನ್ನು ಸಾಕ್ಷಾಧಾರಗಳ ಕೊರತೆಯಿಂದ ನಿರಪರಾಧಿ ಎಂದು ಬಿಡುಗಡೆ ಮಾಡಿದೆ, ಹಾಗೂ ಇತರ 9 ಆರೋಪಿಗಳನ್ನು ಅಪರಾಧಿಗಳೆಂದು ತೀರ್ಪನ್ನು ನೀಡಿದೆ. ಇದರಲ್ಲಿ ಉಮರ ಸಿದ್ದಿಕಿ ಅಜರುದ್ದೀನ್, ಅಹಮದ ಹುಸೇನ, ಫಕ್ರುದ್ದೀನ, ಫಿರೋಜ ಆಲಂ ಅಲಿಯಾಸ್ ಪಪ್ಪು, ನುಮಾನ ಅನ್ಸಾರಿ, ಇಫ್ತಿಖಾರ ಆಲಂ, ಹೈದರ ಆಲಿ ಅಲಿಯಾಸ್ ಅಬ್ದುಲ್ಲಾ ಅಲಿಯಾಸ್ ಬ್ಲಾಕ್ ಬ್ಯೂಟಿ, ಮಹಮ್ಮದ್ ಆಲಂ ಅಲಿಯಾಸ್ ಪಪ್ಪು ಮುಜಿಬುಲ್ಲಾ ಅನ್ಸಾರಿ ಮತ್ತು ಇಮ್ತಿಯಾಜ್ ಅನ್ಸಾರಿ ಅಲಿಯಾಸ್ ಆಲಂ ಇವರ ಕೈವಾಡವಿತ್ತು. ಅವರಿಗೆ ಬರುವ ನವೆಂಬರ್ ಒಂದರಂದು ಶಿಕ್ಷೆ ವಿಧಿಸಲಾಗುವುದು. ಈ ಸ್ಫೋಟದ ಪ್ರಕರಣದಲ್ಲಿ ಒಂದು ಅಪ್ರಾಪ್ತ ಹುಡುಗನ ಸಹಿತ 12 ಜನರ ಮೇಲೆ ಆರೋಪ ಪತ್ರ ದಾಖಲು ಮಾಡಲಾಗಿತ್ತು. ಇದರಲ್ಲಿ ಒಬ್ಬನು ಸಾವನ್ನಪ್ಪಿದ್ದಾನೆ, ಹಾಗೂ ಅಪ್ರಾಪ್ತ ಆರೋಪಿಗೆ ಈ ಮೊದಲೇ 3 ವರ್ಷದ ಶಿಕ್ಷೆಯನ್ನು ವಿಧಿಸಿದೆ. ಈ ಪ್ರಕರಣದಲ್ಲಿ 5 ಆರೋಪಿಗಳಿಗೆ ಈ ಮೊದಲೇ ಬೋಧಗಯಾದಲ್ಲಿ ಸರಣಿ ಬಾಂಬ್ ಸ್ಫೋಟದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ನೀಡಲಾಗಿದೆ.