ಸೀತಾಮಢಿ (ಬಿಹಾರ) ಇಲ್ಲಿಯ ನರ್ಸಿಂಗ್ ಹೋಮ್ ಮೇಲೆ ಅಪರಿಚಿತರಿಂದ ನಡೆದಿರುವ ಗುಂಡಿನ ದಾಳಿಯಲ್ಲಿ ನರ್ಸ್ ಸಾವು, ವೈದ್ಯರಿಗೆ ಗಾಯ

ಬಿಹಾರದಲ್ಲಿ ಜನತಾದಳ (ಸಂಯುಕ್ತ) ಮುತ್ತು ಬಿಜೆಪಿಯ ರಾಷ್ಟ್ರೀಯ ಲೋಕತಂತ್ರ ಮುಂಚೂಣಿಯ ಸರಕಾರ ಇದೆ. ಆದ್ದರಿಂದ ಅಲ್ಲಿ ಆಸ್ಪತ್ರೆಯ ಮೇಲೆ ಈ ರೀತಿಯ ದಾಳಿ ಆಗುವುದು ಅಪೇಕ್ಷಿತವಿಲ್ಲ. ಅಲ್ಲಿ ಹದಗೆಟ್ಟಿರುವ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಯಾವ ಹೆಜ್ಜೆಗಳನ್ನು ಇಡಲಿದೆ ?

ಸೀತಾಮಢಿ (ಬಿಹಾರ) – ಇಲ್ಲಿಯ ಒಂದು ಖಾಸಗಿ ನರ್ಸಿಂಗ್ ಹೋಮ್ ಮೇಲೆ (ಆರೋಗ್ಯ ಸೇವೆ ಪೂರೈಸುವ ಕೇಂದ್ರದಲ್ಲಿ) ಅಪರಿಚಿತರು ನಡೆಸಿರುವ ಗುಂಡಿನ ದಾಳಿಯಲ್ಲಿ ಒರ್ವ ನರ್ಸ್ ಸಾವನ್ನಪ್ಪಿದ್ದು ಒಬ್ಬ ವೈದ್ಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಡಾ. ಶಿವಶಂಕರ ಮಹತೋ, ಅವರ ಪತ್ನಿ, ಇಬ್ಬರು ಸಿಬ್ಬಂದಿ ಮತ್ತು ಒರ್ವ ನರ್ಸ್ ಇಲ್ಲಿಯ ನರ್ಸಿಂಗ್ ಹೋಮ್‌ನಲ್ಲಿ ತಲುಪಿದ ನಂತರ ಘಟನೆ ನಡೆದಿದೆ. ಈ ಘಟನೆಯಲ್ಲಿ ಡಾ. ಮಹತೊ ಇವರಿಗೆ ಮೂರು ಗುಂಡುಗಳು, ಹಾಗೂ ನರ್ಸ್ ಬಬಲಿ ಪಾಂಡೆ ಇವರಿಗೆ ೫ ಗುಂಡು ತಗಲಿದೆ. ಇದರಲ್ಲಿ ಬಬಲಿ ಪಾಂಡೆ ಇವರು ಸಾವನ್ನಪ್ಪಿದ್ದಾರೆ, ಡಾ. ಮಹತೊ ಇವರಿಗೆ ಆಸ್ಪತ್ರೆಯಲ್ಲಿ ಶುಶ್ರೂಷೆ ನೀಡಲಾಗುತ್ತಿದೆ. ಭೂಮಿಯ ವಿವಾದದಿಂದ ಈ ದಾಳಿಯಾಗುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.