* ನಕ್ಸಲರು ಇಂತಹ ಕೃತ್ಯ ಮಾಡಲು ಧೈರ್ಯ ತೋರುತ್ತಾರೆಂದರೆ ಅವರಿಗೆ ಪೋಲಿಸರ ಬಗ್ಗೆ ಭಯವಿಲ್ಲ ಎಂದರ್ಥ, ಇದು ಪೊಲೀಸರಿಗೆ ನಾಚಿಕೆಗೇಡು !- ಸಂಪಾದಕರು * ಕಳೆದ 6 ದಶಕಗಳಿಂದ ನಡೆಯುತ್ತಿರುವ ನಕ್ಸಲರ ಅಟ್ಟಹಾಸ ಇದುವರೆಗೂ ನಿರ್ನಾಮ ಮಾಡಲು ಸಾಧ್ಯವಾಗಿಲ್ಲ. ಇದು ಇಲ್ಲಿಯವರೆಗಿನ ಎಲ್ಲಾ ಪಕ್ಷದ ಆಡಳಿತಗಾರರಿಗೆ ನಾಚಿಕೆಗೇಡಿನ ಸಂಗತಿಯಾಗಿದೆ !- ಸಂಪಾದಕರು |
ಗಯಾ (ಬಿಹಾರ) – ಗಯಾದಿಂದ 70 ಕಿ.ಮೀ. ದೂರದಲ್ಲಿರುವ ಮೌನವರ ಗ್ರಾಮದಲ್ಲಿ ಮಾವೋವಾದಿಗಳು 4 ಜನರಿಗೆ ನೇಣಿಗೇರಿಸಿ ಹತ್ಯೆ ಮಾಡಿದ್ದಾರೆ. ಈ ನಾಲ್ವರು ಒಂದೇ ಕುಟುಂಬದವರಾಗಿದ್ದು ಅದರಲ್ಲಿ ಇಬ್ಬರು ಮಹಿಳೆಯರು ಸೇರಿದ್ದಾರೆ. ಮಾವೋವಾದಿಗಳು ಇಲ್ಲಿಯ ಒಂದು ಮನೆಗೆ ಬೆಂಕಿ ಹಚ್ಚಿದರು ಹಾಗೂ ದ್ವಿಚಕ್ರವಾಹನ ಸುಟ್ಟು ಹಾಕಿದ್ದಾರೆ. ಅನಂತರ ಮಾವೋವಾದಿಗಳು ಇಲ್ಲಿ ಒಂದು ಕರಪತ್ರವನ್ನು ಆಂಟಿಸಿದ್ದಾರೆ. ಅದರ ಮೇಲೆ, ಮಾನವತೆಯ ಹತ್ಯೆ ಮಾಡುವ ಮತ್ತು ನಂಬಿಕೆ ದ್ರೂಹ ಮಾಡುವವರಿಗೆ ಮರಣದಂಡನೆ ಬಿಟ್ಟರೆ ಬೇರೆ ಪರ್ಯಾಯವಿಲ್ಲ. ಇದು ಅಮರೇಶ, ಸೀತಾ, ಶಿವಪೂಜನ ಮತ್ತು ಉದಯ ಈ ನಮ್ಮ 4 ಸಹಚರರ ಹತ್ಯೆಯ ಪ್ರತೀಕಾರವಾಗಿದೆ. ಭವಿಷ್ಯದಲ್ಲಿಯೂ ಇಂತಹ ಚಟುವಟಿಕೆಗಳು ನಡೆಯುತ್ತಲೇ ಇರುತ್ತದೆ ಎಂದು ಬರೆದಿದ್ದಾರೆ.
Gaya: Naxals brutally kill four members of a Dalit farmer’s family, detonate their house accusing them of being police informershttps://t.co/iRF2lohyyY
— OpIndia.com (@OpIndia_com) November 14, 2021
ಈ ಕರಪತ್ರ ಜನಮುಕ್ತಿ ಛಾಪಾಕಾರ ಸೇನಾ, ಮಧ್ಯ ವಿಭಾಗ ಜಾರ್ಖಂಡ್, ಸಿಪಿಐ (ಮಾವೋವಾದಿ) ಈ ಹೆಸರಿನಿಂದ ಹಚ್ಚಲಾಗಿದೆ. ಈ ಘಟನೆಯ ನಂತರ ಇಡೀ ಪರಿಸರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಈ ವಿಷಯವಾಗಿ ಯಾರು ಹೆಚ್ಚಾಗಿ ಮಾತನಾಡಲು ಸಿದ್ಧರಿಲ್ಲ.