ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರೇ ಮತಾಂತರಕ್ಕೆ ದೊಡ್ಡ ಬಲಿಪಶು !
- ಇದರಿಂದ ದೇಶಾದ್ಯಂತ ಮತಾಂತರ ನಿಷೇಧ ಕಾನೂನನ್ನು ಜಾರಿಗೊಳಿಸುವ ಅವಶ್ಯಕತೆಯು ಸ್ಪಷ್ಟವಾಗುತ್ತದೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮತಾಂತರಗಳು ನಡೆಯುತ್ತಿರುವಾಗ ಸರಕಾರಿ ವ್ಯವಸ್ಥೆಗಳು ನಿದ್ರಿಸುತ್ತಿದ್ದವೇ ?
- ಬಿಹಾರದಲ್ಲಿ ಜನತಾ ದಳ (ಸಂಯುಕ್ತ) ಮತ್ತು ಭಾಜಪ ಸರಕಾರವಿದೆ. ಇಂತಹ ಘಟನೆಗಳನ್ನು ತಡೆಯಲು ಸರಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು !
ಪಾಟ್ನಾ : ಬಿಹಾರದ ಗ್ರಾಮೀಣ ಪ್ರದೇಶಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೈಸ್ತ ಧರ್ಮಪ್ರಚಾರಕರಿಂದ ಮತಾಂತರಗೊಳ್ಳುತ್ತಿದ್ದಾರೆ. ಬಾಂಕಾ ಜಿಲ್ಲೆಯ ಚಂದನ್, ಕಟೋರಿಯಾ ಮತ್ತು ಬಾನ್ಸಿಯಲ್ಲಿನ ಗ್ರಾಮಸ್ಥರು ಮತಾಂತರಕ್ಕೆ ಬಲಿಯಾಗಿದ್ದು ಜೈಪುರ, ಭೈರವಗಂಜ್, ಬಾಬುಮಹಲ್, ಬೆಲಹರಿಯಾ, ಅಮಗಾಛಿ, ಬಸಮತ್ತಾ, ಸೇರಿದಂತೆ ವಿವಿಧ ಪ್ರದೇಶಗಳಲ್ಲಿನ ಚರ್ಚ್‌ಗಳು ಮತಾಂತರದ ಕೇಂದ್ರಗಳಾಗಿವೆ.
೧. ಹಿಂದೂಗಳಿಗೆ ಅವರ ಧರ್ಮಗ್ರಂಥಗಳ ಬಗ್ಗೆ ತಪ್ಪು ಮಾಹಿತಿ ನೀಡುವ ಮೂಲಕ ಅವರ ಮನಸ್ಸಿನಲ್ಲಿ ಕ್ರೈಸ್ತ ಪಂಥದ ಬಗ್ಗೆ ಆಕರ್ಷಣೆ ಮೂಡಿಸಲಾಗುತ್ತದೆ. ಅದರಲ್ಲೂ ಗ್ರಾಮೀಣ ಪ್ರದೇಶದ ಬಡ ಜನರಿಗೆ ಆಮೀಷ ತೋರಿಸಿ ಅವರನ್ನು ಮತಾಂತರಿಸಲಾಗುತ್ತದೆ. ಇತ್ತೀಚೆಗೆ ಗಯಾ ಮತ್ತು ಸರನ್‌ನಲ್ಲಿ ಇದೇ ರೀತಿಯ ಘಟನೆಗಳು ನಡೆದಿವೆ.
೨. ಈ ಬಗ್ಗೆ ದೈನಿಕ ‘ಜಾಗರಣ’ ಪತ್ರಿಕೆಯು ಡಾ. ರಾಹುಲ್ ಕುಮಾರ್ ಅವರ ವಿವರವಾದ ವರದಿಯನ್ನು ಪ್ರಕಟಿಸಿದೆ. ಅದರಲ್ಲಿ ಉಲ್ಲೇಖಿಸಿದಂತೆ, ಹಿಂದುಳಿದ ಪ್ರದೇಶಗಳಲ್ಲಿ ಪ್ರತಿ ಭಾನುವಾರ ಚರ್ಚ್ ಪ್ರತಿನಿಧಿಗಳು ಒಂದು ಸಭೆಯನ್ನು ನಡೆಸುತ್ತಾರೆ ಮತ್ತು ಮತಾಂತರಗೊಳ್ಳುವರಿಗೆ ಪ್ರತಿ ಭಾನುವಾರ ಯೇಸುವಿನ ಪ್ರಾರ್ಥನೆ ಇಡಲಾಗುತ್ತದೆ. ಕಳೆದ ೨-೩ ವರ್ಷಗಳಲ್ಲಿ ಸುಮಾರು ೧೦ ಸಾವಿರಕ್ಕೂ ಹೆಚ್ಚು ಜನರನ್ನು ಮತಾಂತರ ಮಾಡಲಾಗಿದೆ.
೩. ಸಂಚಾರ ನಿಷೇಧದ ಸಮಯದಲ್ಲಿ ಈ ಪ್ರದೇಶದಲ್ಲಿ ಹ್ಯಾಂಡ್ ಪಂಪ್‌ಗಳನ್ನು ನಿರ್ಮಿಸಲಾಗಿದೆ. ಅದಕ್ಕೆ ‘ಜೀಸಸ್ ವೆಲ್’ ಎಂದು ನಾಮಕರಣ ಮಾಡಲಾಯಿತು. ಜೀಸಸ್ ಅಂತಹ ಹ್ಯಾಂಡ್ ಪಂಪ್‌ಗಳಲ್ಲಿ ಪ್ರವೇಶಿಸಿದ್ದಾರೆ. ಆದ್ದರಿಂದ ಇದು ನೀರಿನ ಒಂದು ನೈಸರ್ಗಿಕ ಮಾಧ್ಯಮವಾಗಿ ಮಾರ್ಪಟ್ಟಿದೆ’, ಎಂದು ಜನರಿಗೆ ತಿಳಿಸಲಾಯಿತು. ಮತಾಂತರಗೊಂಡ ಕುಟುಂಬಗಳಿಗೆ ಹ್ಯಾಂಡ್ ಪಂಪ್‌ಗಳನ್ನು ನಿರ್ಮಿಸಲಾಗುತ್ತದೆ.
೪. ಕ್ರೈಸ್ತರಾದ ಕುಟುಂಬಗಳ ಮಕ್ಕಳನ್ನು ಕಲಿಯಲು ಚರ್ಚ್‌ಗೆ ಕರೆಯಲಾಗುತ್ತದೆ. ಅಲ್ಲಿ ಅವರಿಗೆ ಸ್ವಲ್ಪ ಸಾಹಿತ್ಯಗಳನ್ನು ನೀಡಲಾಗುತ್ತದೆ. ಅಲ್ಲದೆ, ಹುಡುಗಿಯರ ಮದುವೆಗೆ ಹಣವನ್ನು ನೀಡಲಾಗುತ್ತದೆ.
೫. ಕೆಲವು ದಿನಗಳ ಹಿಂದೆ ಬಿಹಾರದ ಸಾರಣನಲ್ಲಿ ಮತಾಂತರ ಆಗುತ್ತಿರುವ ಸುದ್ದಿ ಪ್ರಸಾರವಾಯಿತು. ಕ್ರೈಸ್ತ ಮಿಷನರಿಗಳು ಆಮಿಷ ತೋರಿಸಿ ಹಿಂದೂಗಳ ಮತಾಂತರ ಮಾಡುತ್ತಿದ್ದಾರೆ. ಗ್ರಾಮಸ್ಥರ ಪ್ರಕಾರ, ಒಂದು ವರ್ಷದಲ್ಲಿ ೫೦೦ ಕ್ಕೂ ಹೆಚ್ಚು ಜನರು ಮತಾಂತರಗೊಂಡಿದ್ದಾರೆ. ಇದರಲ್ಲಿ ಹೆಚ್ಚಾಗಿ ಮಹಿಳೆಯರಿದ್ದಾರೆ. ಜುಲೈ ೨೦೨೧ ರಲ್ಲಿ ದೈನಿಕ ‘ಭಾಸ್ಕರ್’ ನೀಡಿದ ಮಾಹಿತಿಯ ಪ್ರಕಾರ, ಗಯಾದಲ್ಲಿ ಕಳೆದ ೨ ವರ್ಷಗಳಲ್ಲಿ, ಅಂದಾಜು ೬ ಗ್ರಾಮಗಳನ್ನು ಮತಾಂತರಿಸಲಾಗಿದೆ.
೬. ದೈನಿಕ ‘ಭಾಸ್ಕರ್’ ಪ್ರಕಟಿಸಿದ ವರದಿಯಲ್ಲಿ, ಬಾಂಕಾದ ಪೊಲೀಸ್ ವರಿಷ್ಠಾಧಿಕಾರಿ ಅರವಿಂದ ಗುಪ್ತಾ ಅವರ ಅಭಿಪ್ರಾಯವನ್ನು ದಾಖಲಿಸಲಾಗಿದೆ. ಅವರು, ‘ಪ್ರಜಾಪ್ರಭುತ್ವವು ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ನೀಡುತ್ತದೆ. ಆದ್ದರಿಂದ ಯಾವುದೇ ವ್ಯಕ್ತಿಯು ಯಾವುದೇ ಧರ್ಮವನ್ನು ಸ್ವೀಕರಿಸಲು ಸ್ವತಂತ್ರನಾಗಿರುತ್ತಾನೆ.’ ಮತಾಂತರದ ಸಂದರ್ಭದಲ್ಲಿ ಅವರು ‘ಬಲವಂತವಾಗಿ ಮತಾಂತರ ಮಾಡುವುದು ಅಪರಾಧ; ಆದರೆ ಇದುವರೆಗೂ ಈ ರೀತಿಯ ವರದಿಯಾಗಿಲ್ಲ. ದೂರು ಬಂದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು. (ಆಮಿಷಗಳನ್ನು ತೋರಿಸಿ ಮತಾಂತರವಾಗುತ್ತಿರುವ ಬಗ್ಗೆ ೨ ದೊಡ್ಡ ವಾರ್ತಾಪತ್ರಿಕೆಗಳು ಹೇಳುತ್ತಿವೆ. ಹೀಗಿರುವಾಗ ಪೊಲೀಸರು ಆ ಕಡೆ ದುರ್ಲಕ್ಷ ಮಾಡುತ್ತಾರೆ, ಇದು ಖೇದಕರವಾಗಿದೆ. ಇಂತಹ ಪೊಲೀಸರು ಹಿಂದೂಗಳನ್ನು ಹೇಗೆ ರಕ್ಷಿಸುವರು ? – ಸಂಪಾದಕರು)