
ಲಕ್ಷ್ಮಣಪುರಿ (ಉತ್ತರಪ್ರದೇಶ) – ಹರಿದ್ವಾರ ಧರ್ಮ ಸಂಸತ್ತಿನಲ್ಲಿ ಕುರಾನ್‌ನನ್ನು ಅವಮಾನಿಸಿದ ಆರೋಪದ ಪ್ರಕರಣದಲ್ಲಿ ಹರಿದ್ವಾರ ನ್ಯಾಯಾಲಯವು ಜಿತೇಂದ್ರ ನಾರಾಯಣ ತ್ಯಾಗಿ (ಹಿಂದಿನ ವಾಸೀಮ್ ರಿಜ್ವಿ) ಅವರನ್ನು ಖುಲಾಸೆ ಗೊಳಿಸಿದೆ. ಜಿತೇಂದ್ರ ನಾರಾಯಣ ತ್ಯಾಗಿ ಅವರು ಉತ್ತರಪ್ರದೇಶ ಶಿಯಾ ವಕ್ಫ್ ಮಂಡಳಿಯ ಅಧ್ಯಕ್ಷರಾಗಿದ್ದರು. ನಂತರ ಅವರು ಹಿಂದೂ ಧರ್ಮವನ್ನು ಸ್ವೀಕರಿಸಿದ್ದರು.
೧. ಖರಖಡಿಯ ನಿಕೇತನ ಆಶ್ರಮದಲ್ಲಿ ಧರ್ಮ ಸಂಸತ್ತನ್ನು ಆಯೋಜಿಸಲಾಗಿತ್ತು. ಈ ಸಮಯದಲ್ಲಿ ನಡೆದ ಭಾಷಣಗಳ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಮುಸ್ಲಿಮರು ‘ಜಿತೇಂದ್ರ ತ್ಯಾಗಿ ಅವರು ದ್ವೇಷಪೂರಿತ ಭಾಷಣ ಮಾಡಿದ್ದಾರೆ’ ಎಂದು ಆರೋಪಿಸಿದ್ದರು.
೨. ನದೀಮ್ ಅಲಿಯು ಡಿಸೆಂಬರ್ ೨೦೨೧ ರಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದನು. ಈ ಪ್ರಕರಣದಲ್ಲಿ ೯ ಜನರ ವಿರುದ್ಧ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ ಆರೋಪವಿತ್ತು.
೩. ಈ ಪ್ರಕರಣದಲ್ಲಿ ಭಾರತೀಯ ದಂಡ ಸಂಹಿತೆಯ ಕಲಂ ೧೫೩ ಎ (ವಿವಿಧ ಸಮುದಾಯಗಳ ನಡುವೆ ವೈಷಮ್ಯವನ್ನು ಉಂಟುಮಾಡುವುದು) ಮತ್ತು ಕಲಂ ೨೯೮ (ಪೂಜಾ ಸ್ಥಳವನ್ನು ಅಪಮಾನಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
೪. ಇದೇ ಪ್ರಕರಣದಲ್ಲಿ ಡಾಸನಾ ಪೀಠದ ಮಹಂತ ಯತಿ ನರಸಿಂಹಾನಂದ ಸರಸ್ವತಿ ಮತ್ತು ‘ಸುದರ್ಶನ್ ನ್ಯೂಸ್’ ವಾಹಿನಿಯ ಸಂಪಾದಕ ಸುರೇಶ ಚವ್ಹಾಣಕೆ ಅವರ ಮೇಲೂ ಎಫ್.ಐ.ಆರ್ ದಾಖಲಿಸಲಾಗಿತ್ತು.
೫. ವಿಚಾರಣೆಯ ಸಮಯದಲ್ಲಿ, ಹರಿದ್ವಾರ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಅವಿನಾಶ ಶ್ರೀವಾಸ್ತವ ಅವರ ನ್ಯಾಯಾಲಯವು ‘ಜಿತೇಂದ್ರ ತ್ಯಾಗಿ ಅವರನ್ನು ಸಂಶಯದ ಲಾಭದ ಆಧಾರದ ಮೇಲೆ ಖುಲಾಸೆ ಗೊಳಿಸಲಾಗುತ್ತಿದೆ’ ಎಂದು ಹೇಳಿತು.
೬. ಜನವರಿ ೨೦೨೨ ರಲ್ಲಿ ಜಿತೇಂದ್ರ ತ್ಯಾಗಿ ಅವರನ್ನು ಬಂಧಿಸಲಾಗಿತ್ತು. ಅವರಿಗೆ ಮೇ ೨೦೨೨ ರಲ್ಲಿ ಜಾಮೀನು ದೊರೆತಿತ್ತು.
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನೌಕೆಯನ್ನು ವಶಕ್ಕೆ ತೆಗೆದುಕೊಂಡು ನಾವಿಕರನ್ನು ಒತ್ತೆಯಾಳಾಗಿರಿಸಿದ್ದ ಸೊಮಾಲಿಯಾದ 44 ನಾಗರಿಕರಿಗೆ ಜೀವಾವಧಿ ಶಿಕ್ಷೆ! : Somalians Get Life Imprisonment
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಬುಲ್ಡೋಜರ್ ಕ್ರಮಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ನ ವಿಭಜಿತ ತೀರ್ಪು! : Allahabad HC
ಬೀದಿ ನಾಯಿಯ ದಾಳಿಯಿಂದ ಗಾಯಗೊಂಡ ಬಾಲಕಿಗೆ ೧ ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶ
ಅಂದಿನ ಸಮಾಜವಾದಿ ಮತ್ತು ಕಾಂಗ್ರೆಸ್ ಸರಕಾರಗಳು ಗೋರಿಗಳ ಗೋಡೆಗಳ ಮೇಲೆ ಹಣ ವ್ಯಯ ಮಾಡುವುದನ್ನೇ ‘ಜಾತ್ಯತೀತತೆ’ ಎಂದು ಭಾವಿಸಿದ್ದವು!