House Converted Mosque : ಉತ್ತರಪ್ರದೇಶದಲ್ಲಿ ಮನೆಯನ್ನು ಮಸೀದಿಯನ್ನಾಗಿ ಮಾಡಿದ್ದರಿಂದ ಆಡಳಿತದಿಂದ ಬೀಗ !

ಬದಾಯೂ (ಉತ್ತರಪ್ರದೇಶ) – ಇಲ್ಲಿ ಕಾಕರಾಲದಲ್ಲಿ ಮನೆಯೊಂದನ್ನು ಮಸೀದಿಯಾಗಿ ಪರಿವರ್ತಿಸಿದ ಘಟನೆ ಬೆಳಕಿಗೆ ಬಂದಿದೆ. ಈ ವಿಷಯ ತಿಳಿದ ತಕ್ಷಣ ಆಡಳಿತಾಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದರು. ಮಾಹಿತಿ ಸಂಗ್ರಹಿಸಿದ ನಂತರ ಮನೆಗೆ ಬೀಗ ಜಡಿಯಲಾಯಿತು. ಈ ಸಂಬಂಧ ಪೊಲೀಸರು ಓರ್ವ ವ್ಯಕ್ತಿಯನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ. ವಾರ್ಡ್ ನಂಬರ್ 4ರ ನಿವಾಸಿ ಡಾ. ಮುಂತಝೀರ್ ಅವರು ಈ ಮಸೀದಿಯನ್ನು ನಿರ್ಮಿಸಿದ್ದಾರೆ. ಪೊಲೀಸರು, ಈವರೆಗೆ ನಿರ್ಮಾಣ ಮಾಡಿದ ಡಾ. ಮುಂತಝೀರ್ ಯಾವುದೇ ಅಧಿಕೃತ ದಾಖಲೆಗಳನ್ನು ತೋರಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ. ಈ ಪ್ರಕರಣದ ತನಿಖೆ ನಡೆಯುತ್ತಿದೆ.

ತಮ್ಮ ಜಮೀನಿನಲ್ಲಿ ಮಸೀದಿ ನಿರ್ಮಿಸಬೇಕೆಂಬುದು ತಮ್ಮ ತಾಯಿ ನಸೀಮ್ ಬಾನೋ ಅವರ ಆಸೆಯಾಗಿತ್ತು. ಹೀಗಾಗಿ 2020ರಲ್ಲಿ ಮಸೀದಿ ನಿರ್ಮಾಣ ಕಾರ್ಯ ಆರಂಭವಾಗಿ 2025ರ ಫೆಬ್ರವರಿಯಲ್ಲಿ ಪೂರ್ಣಗೊಂಡಿತು ಎಂದು ಡಾ. ಮುಂತಝೀರ್ ತಿಳಿಸಿದ್ದಾರೆ. ಮಸೀದಿಯ ನಾಮಫಲಕ ನೋಡಿದ ನಂತರ ಜನರಿಗೆ ಇದರ ಮಾಹಿತಿ ಸಿಕ್ಕಿತು. ನಸೀಮ್ ಬಾನೋ ಅವರ ಸಮ್ಮುಖದಲ್ಲಿಯೇ ಮಸೀದಿ ನಿರ್ಮಾಣ ಕಾರ್ಯ ಆರಂಭವಾಗಿತ್ತು; ಆದರೆ ನಂತರ ಅವರು ನಿಧನರಾದರು, ಎಂದು ಹೇಳಿದರು.