ಮಣಿಪುರದಲ್ಲಿ ಘಟನೆ ಬಗ್ಗೆ ಸಂಸತ್ತಿನಲ್ಲಿ ಕೋಲಾಹಲ
ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ ಪ್ರಕರಣದಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ ಕೋಲಾಹಲ ಉಂಟಾಯಿತು. ಇದರಿಂದ ಸದನವನ್ನು ಕೆಲಕಾಲ ಸ್ಥಗಿತಗೊಳಿಸಲಾಯಿತು.
ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ ಪ್ರಕರಣದಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ ಕೋಲಾಹಲ ಉಂಟಾಯಿತು. ಇದರಿಂದ ಸದನವನ್ನು ಕೆಲಕಾಲ ಸ್ಥಗಿತಗೊಳಿಸಲಾಯಿತು.
ಜುಲೈ 18 ರಂದು ಭಾಜಪ ವಿರೋಧಿ ಪಕ್ಷಗಳ ಸಭೆ ನಡೆಯಿತು. ಈ ಸಭೆಯಲ್ಲಿ 26 ರಾಜಕೀಯ ಪಕ್ಷಗಳ ಮುಖಂಡರು, ನಾಯಕರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬಂಗಾಳದಲ್ಲಿನ ಗ್ರಾಮ ಪಂಚಾಯತ, ಪಂಚಾಯತ ಸಮಿತಿ ಮತ್ತು ಜಿಲ್ಲಾ ಪರಿಷತ್ತಿನ ಚುನಾವಣೆಯ ಫಲಿತಾಂಶವು ಪ್ರಕಟವಾಗಿದ್ದು, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗಳಿಸಿದೆ.
ತೃಣಮೂಲ ಕಾಂಗ್ರೆಸ್ ನಡೆಸಿದ ಭೀಕರ ಹಿಂಸಾಚಾರದ ಬಗ್ಗೆ ಅಂಜನಿ ಪುತ್ರ ಸೇನೆಯ ಸಂಸ್ಥಾಪಕ ಹಾಗೂ ಸಚಿವ ಶ್ರೀ. ಸುರೇಂದ್ರ ಕುಮಾರ ವರ್ಮಾ ಇವರು ರಾಜ್ಯದಲ್ಲಿ ಪ್ರಜಾಪ್ರಭುತ್ವವನ್ನು ಕಾಪಾಡಲು ರಾಜ್ಯ ಸರಕಾರವನ್ನು ವಿಸರ್ಜಿಸಿ ಕಲಂ 356 ಅಂದರೆ ರಾಜ್ಯಪಾಲ ಆಡಳಿತ ಜಾರಿಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ಬಂಗಾಳದಲ್ಲಿ ಜುಲೈ ೮ ರಂದು ೨೨ ಜಿಲ್ಲೆಗಳಲ್ಲಿ ೬೪ ಸಾವಿರ ೮೭೪ ಗ್ರಾಮ ಪಂಚಾಯತಿ ಸ್ಥಾನಕ್ಕಾಗಿ ಚುನಾವಣೆ ನಡೆಯಿತು. ಈ ಚುನಾವಣೆ ಘೋಷಣೆ ಆದಾಗಿನಿಂದ ಇಲ್ಲಿ ಹಿಂಸಾಚಾರ ಆರಂಭವಾಗಿತ್ತು ಮತ್ತು ಅದು ಪ್ರತ್ಯಕ್ಷ ಮತದಾನದ ದಿನದಂದು ಕೂಡ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿತು.
ಬಂಗಾಳದ ಉತ್ತರ 24 ಪರಗಣಾದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ತೃಣಮೂಲ ಕಾಂಗ್ರೆಸ್‌ನ 17 ವರ್ಷದ ಕಾರ್ಯಕರ್ತ ಇಮ್ರಾನ್ ಹಾಸನ್ ಸಾವನ್ನಪ್ಪಿದ್ದಾನೆ. ಇಲ್ಲಿ ನಡೆದ ಸಭೆಯಲ್ಲಿ ಈ ಸ್ಫೋಟ ಸಂಭವಿಸಿದೆ.
ಮಾಲಾದಾ ಜಿಲ್ಲೆಯ ಕಾಲಿಯಾಚಕ್‌ನ ಇಲ್ಲಿನ ಭಾಂಗಾರ್‌ದಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ‘ಇಂಡಿಯನ್ ಸೆಕ್ಯುಲರ್ ಫ್ರಂಟ್’ ಕಾರ್ಯಕರ್ತರ ನಡುವೆ ನಡೆದ ಹೊಡೆದಾಟದಲ್ಲಿ ತೃಣಮೂಲ ಕಾಂಗ್ರೆಸಿನ ಕಾರ್ಯಕರ್ತ ಸಾವನ್ನಪ್ಪಿದ್ದಾನೆ.
ಬಂಗಾಳದಲ್ಲಿ ಜುಲೈ 8 ರಂದು ಪಂಚಾಯತ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈ ಹಿಂಸಾಚಾರ ನಡೆದಿದೆ.
ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯ ಕಾಂಗ್ರೆಸ್ ನ ಸ್ಥಳೀಯ ನಾಯಕ ಫುಲಚಂದ ಶೇಖ (೪೨ ವರ್ಷ)ನನ್ನು ಗುಂಡಿಕ್ಕಿ ಕೊಲೆ ಮಾಡಲಾಯಿತು. ರಾಜ್ಯದಲ್ಲಿ ಪಂಚಾಯತ ಚುನಾವಣೆಯ ಘೋಷಣೆ ಬಳಿಕ ಕೆಲವು ಸ್ಥಳಗಳಲ್ಲಿ ಹಿಂಸಾಚಾರ ನಡೆದಿದೆ. ಅದರಲ್ಲಿ ಈ ಕೊಲೆ ನಡೆದಿದೆ.
ಬಂಗಾಳದ ತೃಣಮೂಲ ಕಾಂಗ್ರೆಸ್ ಸರಕಾರವು ‘ದ ಡೈರಿ ಆಫ್ ವೇಸ್ಟ್ ಬಂಗಾಲ’ ಈ ಸಿನೆಮಾದ ಸಹ ನಿರ್ಮಾಪಕರು ಮತ್ತು ನಿರ್ದೇಶಕರಾದ ಸನೋಜ ಮಿಶ್ರಾ ಇವರ ವಿರುದ್ಧ ದೂರು ದಾಖಲಾಗಿದೆ.