|
ಕೋಲಕಾತಾ (ಬಂಗಾಳ) – ಪೌರತ್ವ ತಿದ್ದುಪಡಿ ಕಾನೂನು ದೇಶಾದ್ಯಂತ ಮುಂದಿನ ೭ ದಿನದಲ್ಲಿ ಜಾರಿ ಆಗುವುದು ಎಂದು ನಾನು ಭರವಸೆ ನೀಡುತ್ತೇನೆ. ಈಗ ನಾನು ಕೇವಲ ಬಂಗಾಳದಲ್ಲಿ ಅಷ್ಟೇ ಅಲ್ಲದೆ, ಸಂಪೂರ್ಣ ದೇಶದಲ್ಲಿ ಜಾರಿಯಾಗುವುದು ಸ್ಪಷ್ಟಪಡಿಸುತ್ತೇನೆ, ಎಂದು ಕೇಂದ್ರ ಸಚಿವ ಶಾಂತನೂ ಠಾಕೂರ್ ಇವರು ದಾವೆ ಮಾಡಿದರು. ಠಾಕೂರ್ ಇವರು ಬಂಗಾಳದ ಬನಗಾವದ ಭಾಜಪದ ಸಂಸದರಾಗಿದ್ದು ಅವರು ದಕ್ಷಿಣ ೨೪ ಪರಗಣದಲ್ಲಿನ ಕಾಕದ್ವಿಪದಲ್ಲಿನ ಒಂದು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
‘CAA will be implemented across India within 7 days’: Union minister Shantanu Thakur pic.twitter.com/UGsPp2Ere0
— The Times Of India (@timesofindia) January 29, 2024
೧. ಠಾಕೂರ್ ಇವರ ಹೇಳಿಕೆಯ ಬಗ್ಗೆ ರಾಜ್ಯದಲ್ಲಿನ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮತ್ತೊಮ್ಮೆ ಪುನರುಚ್ಚರಿಸುತ್ತಾ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಪೌರತ್ವ ತಿದ್ದುಪಡಿ ಕಾನೂನು ಜಾರಿಗೊಳಿಸಲಾಗುವುದಿಲ್ಲ. ‘ಲೋಕಸಭಾ ಚುನಾವಣೆಯ ಮೊದಲು ಜನರನ್ನು ದಾರಿ ತಪ್ಪಿಸಲು ಕೇಂದ್ರ ಸರಕಾರ ಈ ರೀತಿಯ ವಾರ್ತೆ ಪ್ರಸಾರ ಮಾಡುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ಸಿನ ವಕ್ತಾರರಾದ ಕುನಾಲ್ ಘೋಷ್ ಇವರು ಆರೋಪಿಸಿದರು.
೨. ಕಳೆದ ತಿಂಗಳಲ್ಲಿ ಕೊಲಕಾತಾದಲ್ಲಿ ನಡೆದಿರುವ ಒಂದು ಸಭೆಯ ಸಮಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ ಶಾಹ ಇವರು ಕೂಡ ಪೌರತ್ವ ತಿದ್ದುಪಡಿ ಕಾನೂನ ಜಾರಿಗೊಳಿಸುವುದನ್ನು ಯಾರು ತಡೆಯಲು ಸಾಧ್ಯವಿಲ್ಲ’, ಎಂದು ಹೇಳಿದ್ದರು.
೩. ಇದರ ಬಗ್ಗೆ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇವರು, ಶಾಹ ಇವರು ಜನರಲ್ಲಿ ಬಿರುಕು ಮೂಡಿಸುತ್ತಿದ್ದಾರೆ. ಹಿಂದೆ ನಾಗರಿಕತ್ವ ಕಾರ್ಡ ಇದು ಜಿಲ್ಲಾಧಿಕಾರಿಗಳ ಜವಾಬ್ದಾರಿ ಆಗಿತ್ತು; ಆದರೆ ಈಗ ಅದು ಕೇವಲ ರಾಜಕಾರಣಕ್ಕಾಗಿ ಕಸಿದುಕೊಳ್ಳಲಾಗಿದೆ. ಅವರಿಗೆ ಇದು ಕೆಲವರಿಗೆ ನೀಡುವುದು ಮತ್ತು ಇತರರಿಗೆ ವಂಚಿಸುವುದಾಗಿದೆ. ಯಾವುದೋ ಸಮಾಜಕ್ಕೆ ನಾಗರೀಕತ್ವ ದೊರೆಯುತ್ತಿದ್ದರೆ ಅದು ಇತರರಿಗೂ ಸಿಗಬೇಕು ಎಂದು ಹೇಳಿದರು.
ಸಂಪಾದಕೀಯ ನಿಲುವುಮುಸಲ್ಮಾನರ, ವಿಶೇಷವಾಗಿ ಬಾಂಗ್ಲಾದೇಶದಲ್ಲಿನ ನುಸುಳುಕೋರರ ಓಲೈಕೆಯ ರಾಜಕಾರಣ ಮಾಡುತ್ತಿರುವ ತೃಣಮೂಲ ಕಾಂಗ್ರೆಸ್ಸಿನಿಂದ ಇದೇ ನಿಲುವು ಇರುವುದು ಇದರಲ್ಲಿ ಆಶ್ಚರ್ಯ ಏನು ಇಲ್ಲ ? |