ಸಂದೇಶಖಾಲಿ (ಬಂಗಾಲ) ಇಲ್ಲಿ ಏನೆಲ್ಲಾ ಘಟಿಸುತ್ತಿದೆ ಅದು ಆಘಾತಕಾರಿ ಆಗಿದೆ ! – ಕೋಲಕಾತಾ ಉಚ್ಚ ನ್ಯಾಯಾಲಯ

ತೃಣಮೂಲ ಕಾಂಗ್ರೆಸ್ಸಿನ ಗೂಂಡಾಗಳಿಂದ ಹಿಂದೂ ಮಹಿಳೆಗೆ ಲೈಂಗಿಕ ಕಿರುಕುಳ ಮತ್ತು ಭೂಮಿ ಕಬಳಿಸಿದ ಪ್ರಕರಣ

ಕೊಲಕಾತಾ (ಬಂಗಾಳ ) – ರಾಜ್ಯದ ಸಂದೇಶಖಾಲಿಯಲ್ಲಿ ಏನೆಲ್ಲ ನಡೆಯುತ್ತಿದೆ ಅದು ಆಘಾತಕಾರಿಯಾಗಿದೆ. ಬಂದುಕಿನ ಭಯ ತೋರಿಸಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಮಾಧ್ಯಮದಲ್ಲಿ ತೋರಿಸಲಾಗಿದೆ. ಇದು ಆಘಾತಕಾರಿ ಆಗಿದೆ ಎಂದು ಕೊಲಕಾತಾ ಉಚ್ಚ ನ್ಯಾಯಾಲಯ ಈ ಘಟನೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದೆ. ಹಾಗೂ ನ್ಯಾಯಾಲಯವು ಈ ಪ್ರಕರಣದ ಬಗ್ಗೆ ಬಂಗಾಳ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಇದರ ಕುರಿತು ಮತ್ತು ಫೆಬ್ರುವರಿ ೨೦ ರಂದು ವಿಚಾರಣೆಗಾಗಿ ಈ ಪ್ರಕರಣ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದಲ್ಲದೆ ಸಂದೇಶಖಾಲಿಯ ಬಸಿರಹಾಟದಲ್ಲಿ ಜಾರಿಗೊಳಿಸಲಾದ ಕಲಂ ೧೪೪ ತೆರವುಗೊಳಿಸುವ ಆದೇಶ ಕೂಡ ನ್ಯಾಯಾಲಯದಿಂದ ನೀಡಿದೆ.

ಏನು ಈ ಪ್ರಕರಣ ?

ಬಂಗಾಲದ ದಕ್ಷಿಣ ೨೪ ಪರಗಣಾ ಜಿಲ್ಲೆಯಲ್ಲಿನ ಸಂದೇಶಖಾಲಿಯಲ್ಲಿ ಮಹಿಳೆಯರು ತೃಣಮೂಲ ಕಾಂಗ್ರೆಸ್ಸಿನ ನಾಯಕ ಶೇಖ ಶಹಾಜಹಾನ್ ಮತ್ತು ಅವನ ಬೆಂಬಲಿಗರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಭೂಮಿ ಕಬಳಿಸುವ ಆರೋಪ ಮಾಡಿದ್ದಾರೆ. ಕಳೆದ ಕೆಲವು ದಿನಗಳಿಂದ ಸ್ಥಳಿಯ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಶೇಖ ಶಹಾಜಹಾನ್ ಇವನ ಬಂಧನಕ್ಕೂ ಮಹಿಳೆಯರು ಒತ್ತಾಯಿಸುತ್ತಿದ್ದಾರೆ. ಅವರು ತೃಣಮೂಲ ಕಾಂಗ್ರೆಸ್ಸಿನ ಇನ್ನೊಬ್ಬ ನಾಯಕ ಶಿವಪ್ರಸಾದ ಹಾಜರಾ ಇವರ ಹೊಲ ಮತ್ತು ಹೊಲದ ಮನೆಗೆ ಬೆಂಕಿ ಹಚ್ಚಿದ್ದಾರೆ. ಈ ಪ್ರಕರಣದಲ್ಲಿ ಕೊಲಕಾತಾ ಉಚ್ಚ ನ್ಯಾಯಾಲಯವು ಸ್ವತಃ ವಿಚಾರಣೆ ನಡೆಸುವಾಗ ಮೇಲಿನ ಆದೇಶ ನೀಡಿದೆ.

ಈ ಪ್ರಕರಣದಲ್ಲಿ ಭಾಜಪವು ಬಸೀರಹಾಟದ ಪೊಲೀಸ ಅಧಿಕಾರಿ ಹುಸೇನ ಮೆಹದಿ ಇವರ ವಿರುದ್ಧ ಪ್ರತಿಭಟನೆ ನಡೆಸುವ ನಿರ್ಣಯ ತೆಗೆದುಕೊಂಡರು. ಅವರು ಅಧಿಕಾರಿಯ ಕಾರ್ಯಾಲಯದ ಕಡೆಗೆ ಮೋರ್ಚಾ ತೆಗೆದರು; ಅಲ್ಲಿ ಕಲಂ ೧೪೪ (ನಿಷೇಧ ಆಜ್ಞೆ) ಜಾರಿಗೊಳಿಸಿದ್ದರಿಂದ ಭಾಜಪದ ಕಾರ್ಯಕರ್ತರನ್ನು ದಾರಿಯಲ್ಲಿಯೇ ತಡೆದಿದ್ದಾರೆ. ಈ ಸಮಯದಲ್ಲಿ ನಡೆದಿರುವ ಘರ್ಷಣೆಯಲ್ಲಿ ಭಾಜಪದ ಪ್ರದೇಷಾಧ್ಯಕ್ಷ ಸುಕಾಂತು ಮುಜುಮದಾರ ಗಾಯಗೊಂಡಿರುವುದರಿಂದ ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.

ತೃಣಮೂಲ ಕಾಂಗ್ರೆಸ್ಸಿನ ಗೂಂಡಾಗಳು ಹಿಂದೂ ಮಹಿಳೆಯರನ್ನು ಗುರಿ ಮಾಡುತ್ತಿದ್ದಾರೆ ! – ಕೇಂದ್ರ ಸಚಿವೆ ಸ್ಮೃತಿ ಇರಾನಿ

ಈ ಹಿಂದೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಇವರು ಈ ಪ್ರಕರಣದಲ್ಲಿ, ತೃಣಮೂಲ ಕಾಂಗ್ರೆಸ್ಸಿನ ಸರಕಾರ ಪಕ್ಷದ ಗೂಂಡಾಗಳಿಗೆ ರಕ್ಷಣೆ ನೀಡುತ್ತಿದೆ ಎಂದು ಆರೋಪಿಸಿದ್ದಾರೆ. ಸಂದೇಶಖಾಲಿ ಇಲ್ಲಿಯ ಹಿಂದೂ ಮಹಿಳೆಯರು, ತೃಣಮೂಲದ ಗೂಂಡಾಗಳು ಮನೆ ಮನೆಗೆ ತೆರಳಿ ‘ಯಾವ ಮನೆಯಲ್ಲಿ ಸುಂದರ ಮಹಿಳೆಯರು ಇದ್ದಾರೆ, ಯುವ ವಯಸ್ಸಿನವರಾಗಿದ್ದಾರೆ ?’, ಎಂದು ನೋಡುತ್ತಿದ್ದರು. ಅವರು ವಿವಾಹಿತವಾಗಿದ್ದರೆ, ಆಗ ‘ಅದು ನಮ್ಮ ಆಸ್ತಿ’, ಎಂದು ಆ ಗೂಂಡಾಗಳು ಹೇಳುತ್ತಿದ್ದರು. ಮಮತಾ ಬ್ಯಾನರ್ಜಿ ಹಿಂದೂಗಳ ನರಸಂಹಾರಕ್ಕಾಗಿಯೇ ಪರಿಚಿತರು. ಅವರು ಅವರ ಪಕ್ಷದಲ್ಲಿನ ಪುರುಷರಿಗೆ ಮಹಿಳೆಯರ ಜೊತೆಗೆ ಅಸಭ್ಯವಾಗಿ ವರ್ತಿಸಲು ಅನುಮಾಡಿಕೊಡುತ್ತಾರೆ. ದೇಶದಲ್ಲಿನ ಜನರು ಇದನ್ನು ಶಾಂತವಾಗಿ ಹೇಗೆ ನೋಡುವರು ?

ರಾಜ್ಯಪಾಲರು ವರದಿ ಕೇಳಿದ್ದಾರೆ !

ಇನ್ನೊಂದು ಕಡೆ ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಇವರು, ಸಂದೇಶಖಾಲಿಯಲ್ಲಿನ ಪರಿಸ್ಥಿತಿ ಭಯಾನಕ ಮತ್ತು ಆಘಾತಕಾರಿ ಆಗಿದೆ. ಯಾವಾಗ ಬೋಸ್ ಇವರು ಸಂದೇಶಖಾಲಿಗೆ ತಲುಪಿದರು ಆಗ ತೃಣಮೂಲದ ಕಾರ್ಯಕರ್ತರು ಕೈಯಲ್ಲಿ ಫಲಕ ಹಿಡಿದು ಅವರಿಗೆ ವಿರೋಧ ವ್ಯಕ್ತಪಡಿಸಿದರು, ಎಂದು ಹೇಳಿದರು. ಬೋಸ್ ಇವರು ಸಂದೇಶಖಾಲಿಯ ಕುರಿತು ರಾಜ್ಯ ಸರಕಾರದಿಂದ ವರದಿ ಕೇಳಿದ್ದಾರೆ.

ಯಾವುದೇ ಅಯೋಗ್ಯ ಘಟನೆ ನಡೆದಿಲ್ಲವಂತೆ ! – ಪೊಲೀಸರ ದಾವೆ

ಸಂದೇಶಖಾಲಿ ಘಟನೆಯ ಬಗ್ಗೆ ಬಂಗಾಳ ಪೊಲೀಸರು, ಇಲ್ಲಿಯ ಪರಿಸ್ಥಿತಿ ಶಾಂತಿಯುತವಾಗಿ ಇದೆ. ಇಲ್ಲಿ ಯಾವುದೇ ಅಯೋಗ್ಯ ಘಟನೆ ನಡೆದಿಲ್ಲ. ನಾವು ಯಾರಿಗೂ ಇಲ್ಲಿಯ ಕಾನೂನು ಮತ್ತು ಸುವ್ಯವಸ್ಥೆ ಹದಗೆಡಿಸಲು ಬಿಡುವುದಿಲ್ಲ. ಕಾನೂನಿನ ಉಲ್ಲಂಘನೆ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳುವೆವು ಎಂದು ಹೇಳಿದೆ.

ಕಳೆದ ತಿಂಗಳಲ್ಲಿ ಶೇಖ ಶಹಾಜಹಾನ್ ಇವರ ಕಾರ್ಯಕರ್ತರಿಂದ ಈಡಿ ಅಧಿಕಾರಿಗಳ ಮೇಲೆ ಹಲ್ಲೆ !

ಜನವರಿ ೫ ರಂದು ಈಡಿ ಅಧಿಕಾರಿಗಳು ತೃಣಮೂಲ ನಾಯಕ ಶೇಖ ಶಹಾಜಹಾನ್ ಇವರ ಮನೆಯ ಮೇಲೆ ದಾಳಿ ನಡೆಸಿದಾಗ ತೃಣಮೂಲ ಕಾಂಗ್ರೆಸ್ಸಿನ ರೌಡಿಗಳು ಈ ತಂಡದ ಮೇಲೆ ದಾಳಿ ನಡೆಸಿದ್ದರು. ಇದರಲ್ಲಿ ೩ ಅಧಿಕಾರಿಗಳು ಗಾಯಗೊಂಡಿದ್ದರು, ಆಗಿನಿಂದ ಶಹಾಜಹಾನ್ ಫರಾರಿ ಆಗಿದ್ದಾನೆ. ಅವನ ಮೇಲೆ ರಾಜ್ಯದ ಕೊರೋನಾ ಸಮಯದಲ್ಲಿ ಸಾವಿರಾರು ಕೋಟಿ ರೂಪಾಯಿಯ ರೇಷನ್ ಹಗರಣದ ಆರೋಪವಿದೆ.

ಸಂಪಾದಕೀಯ ನಿಲುವು

ಉಚ್ಚ ನ್ಯಾಯಾಲಯಕ್ಕೆ ಹೀಗೆ ಅನಿಸಬೇಕಾದರೆ, ಬಂಗಾಳದಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯ ಸ್ಥಿತಿ ಗಮನಕ್ಕೆ ಬರುತ್ತದೆ ! ರಾಜ್ಯ ಸರಕಾರ ವಿಸರ್ಜಿತಗೊಳಿಸಿ ಅಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕೆಂದು ಹಿಂದೂಗಳ ಮತ್ತು ದೇಶದ ರಕ್ಷಣೆಗೆ ಪರ್ಯಾಯವಿಲ್ಲ !