‘ದಿ ಟೆಲಿಗ್ರಾಫ್’ ಮತ್ತು ಇತರ ಮಾಧ್ಯಮಗಳು ‘ದೀದಿ ಮೀಡಿಯಾ’ ಪಾತ್ರವನ್ನು ನಿರ್ವಹಿಸುತ್ತಿವೆ ! – ವಿಜ್ಞಾನಿ ಮತ್ತು ಚಿಂತಕ ಡಾ. ಆನಂದ್ ರಂಗನಾಥನ್

ವಿಜ್ಞಾನಿ ಮತ್ತು ಚಿಂತಕ ಡಾ. ಆನಂದ್ ರಂಗನಾಥನ್ ಇವರಿಂದ ಛೀಮಾರಿ !

(ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ‘ದೀದಿ’ ಎಂದು ಕರೆಯಲಾಗುತ್ತದೆ. ಹಾಗಾಗಿ ಅವರ ಪರವಾಗಿರುವ ಪ್ರಸಾರ ಮಾಧ್ಯಮಗಳನ್ನು ‘ದೀದಿ ಮೀಡಿಯಾ’ ಎಂದು ಕರೆಯಲಾಗುತ್ತದೆ.)

ಕೋಲಕಾತಾ – ವಿಜ್ಞಾನಿ ಮತ್ತು ಲೇಖಕ ಡಾ. ಆನಂದ ರಂಗನಾಥನ್ ಇವರಿಗೆ ನಗರದಲ್ಲಿ ‘ದಿ ಟೆಲಿಗ್ರಾಫ್’ ಆಯೋಜಿಸಿದ್ದ ವಿಚಾರ ಸಂಕಿರಣಕ್ಕೆ ಆಹ್ವಾನಿಸಲಾಗಿತ್ತು. ಆ ಸಮಯದಲ್ಲಿ ರಂಗನಾಥನ್ ಅವರು ‘ದಿ ಟೆಲಿಗ್ರಾಫ್’ ಮತ್ತು ಇತರ ಮಾಧ್ಯಮಗಳನ್ನು ಉಲ್ಲೇಖಿಸಿ ‘ದೀದಿ ಮೀಡಿಯಾ’ ಎಂದು ಕರೆದರು. ಅವರು, ‘ದಿ ಟೆಲಿಗ್ರಾಫ್’ ಮತ್ತು ಇತರ ಮಾಧ್ಯಮಗಳು ಕೇಂದ್ರದ ಮೋದಿ ಸರಕಾರದ ವಿರುದ್ಧ ಬಹಳಷ್ಟು ಬರೆಯುತ್ತವೆ; ಆದರೆ ಬಂಗಾಳದ ಮಮತಾ ಬ್ಯಾನರ್ಜಿ ಸರಕಾರದ ಗಂಭೀರ ತಪ್ಪುಗಳನ್ನು ನಿರ್ಲಕ್ಷಿಸುವುದು ಅವರ ಸ್ವಭಾವ ಆಗಿಬಿಟ್ಟಿದೆ. ಈ ವೇಳೆ ‘ದಿ ಟೆಲಿಗ್ರಾಫ್’ ಸಂಘಟಕರು ರಂಗನಾಥನ್ ಅವರ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸಿದರು; ಆದರೆ ರಂಗನಾಥನ್ ಸಭಿಕರನ್ನು, ‘ನನಗೆ ಮಾತನಾಡಲು 30 ಸೆಕೆಂಡುಗಳು ಸಿಗಬಹುದೇ?’ ಎಂದು ಕೇಳಿದಾಗ ಪ್ರೇಕ್ಷಕರು ಉತ್ಸಾಹದಿಂದ ‘ಹೌದು’ ಎಂದರು. ಆನಂದ ರಂಗನಾಥನ್ ಇವರು, ‘ದೀದಿ ಮೀಡಿಯಾ’ದ ಚರ್ಚೆಯಿಲ್ಲದೆ ವಿಷಯ ಅಪೂರ್ಣವಾಗಿ ಉಳಿಯುತ್ತದೆ.’ ಎಂದು ಹೇಳಿದರು. ರಂಗನಾಥನ್ ಈ ಮಾತನ್ನು ಹೇಳುತ್ತಿದ್ದಂತೆಯೇ ಪ್ರೇಕ್ಷಕರು ಚಪ್ಪಾಳೆ ತಟ್ಟಿದರು. ‘ಈ ವಿಚಾರ ಸಂಕಿರಣ ಆಯೋಜಿಸಿರುವ ಪತ್ರಿಕೆ ಈ ಎಲ್ಲ ಪ್ರಶ್ನೆಗಳ ಬಗ್ಗೆ ಮಾತನಾಡದೆ ಪತ್ರಕರ್ತರನ್ನು ಸುಮ್ಮನಿರಿಸುವ ಉದ್ದೇಶದಿಂದ ಚರ್ಚೆಯನ್ನು ಆಯೋಜಿಸಿದೆ’ ಎಂದು ಬಹಿರಂಗವಾಗಿಯೇ ‘ದಿ ಟೆಲಿಗ್ರಾಫ್’ ಅನ್ನು ರಂಗನಾಥನ್ ಟೀಕಿಸಿದರು.

ರಂಗನಾಥನ್ ಮುಂದುವರಿಸಿದರು …

1. ಕಳೆದ ಕೆಲವು ವರ್ಷಗಳಿಂದ ರಾಜ್ಯ ಸರಕಾರಕ್ಕೆ ಸಂಬಂಧಿಸಿದ ಯಾವುದೇ ಅಹಿತಕರ ಸುದ್ದಿ ಬಂದರೂ ಮೌನವಹಿಸುವ ಕಲೆ ಇಲ್ಲಿನ ಮಾಧ್ಯಮಗಳಿಗೆ ಕರಗತವಾಗಿದೆ ಅಥವಾ ಪತ್ರಿಕೆಯ 20ನೇ ಪುಟದ ಮೂಲೆಯಲ್ಲಿ ಎಲ್ಲೋ ಸುದ್ದಿ ಮುದ್ರಿಸಿ ಹತ್ತಿಕ್ಕಲಾಗುತ್ತಿದೆ.

2. ಬಂಗಾಳದಲ್ಲಿ, ಸರಕಾರದ ವಿರುದ್ಧ ಕಾರ್ಟೂನ್ ಪ್ರಸಾರ ಮಾಡಿದ ನಂತರ ಪ್ರಾಧ್ಯಾಪಕರೊಬ್ಬರಿಗೆ ಕಪಾಳಮೋಕ್ಷ ಮಾಡಿ ಬಂಧಿಸಲಾಯಿತು.

3. ಒಬ್ಬ ಪತ್ರಕರ್ತನನ್ನು ಮಧ್ಯರಾತ್ರಿ ಎತ್ತಿಕೊಂಡು ಜೈಲಿಗೆ ಹಾಕಲಾಯಿತು.

4. ಇಲ್ಲಿ 20 ಸಾವಿರ ಪಂಚಾಯತಿ ಸ್ಥಾನಗಳಿಗೆ ವಿರೋಧ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧಿಸದಂತೆ ಕೊಲೆ, ಸುಟ್ಟು, ಲೂಟಿಯ ಮೂಲಕ ತಡೆಯಲಾಯಿತು. ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಮತಪೆಟ್ಟಿಗೆಗಳಲ್ಲಿ ಹಗರಣ ಮಾಡುವುದನ್ನು ಜನರು ನೋಡಿದ್ದಾರೆ.

5. ರಾಜ್ಯದಲ್ಲಿ 60 ರಷ್ಟು ಚುನಾವಣೋತ್ತರ ಹಿಂಸಾಚಾರ ಪ್ರಕರಣಗಳಲ್ಲಿ ಅಪರಾಧಗಳು ದಾಖಲಾಗಿಲ್ಲ ಎಂದು ಹೈಕೋರ್ಟ್ ಹೇಳುತ್ತದೆ.

6. ರಾಜ್ಯದಲ್ಲಿ ಬೆದರಿಕೆಗೆ ಹೆದರಿ ನ್ಯಾಯಾಧೀಶರು ಪ್ರಕರಣಗಳ ವಿಚಾರಣೆಯನ್ನು ತಪ್ಪಿಸುತ್ತಾರೆ.

7. ತೃಣಮೂಲ ಕಾಂಗ್ರೆಸ್‌ಗೆ ಸಂಬಂಧಿಸಿದವರ ಮನೆಗಳಲ್ಲಿ 40 ಕೋಟಿ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಪ್ರಸಾರ ಮಾಧ್ಯಮಗಳಿಗೆ ಛೀಮಾರಿ ಹಾಕಿದ ಡಾ. ರಂಗನಾಥನ್ ಅವರಿಗೆ ಅಭಿನಂದನೆಗಳು !