ಜನರಿಗೆ ಬಹಳಷ್ಟು ವಿಷಯ ಹೇಳುವುದಿದೆ, ಆದರೆ ಅವರಿಗೆ ಮಾತನಾಡಲು ಬಿಡುತ್ತಿಲ್ಲ ! – ರಾಷ್ಟ್ರೀಯ ಪರಿಶಿಷ್ಟ ಬುಡಕಟ್ಟು ಆಯೋಗ

  • ಬಂಗಾಳದ ಸಂದೇಶಖಾಲಿಯ ಹಿಂದೂ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕಾರಣ

  • ಸಂದೇಶಖಾಲಿಯಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕೆಂದು ಆಗ್ರಹ !

ಕೋಲಕಾತಾ (ಬಂಗಾಳ) – ರಾಜ್ಯದಲ್ಲಿನ ಉತ್ತರ ೨೪ ಪರಗಣ ಜಿಲ್ಲೆಯಲ್ಲಿರುವ ಸಂದೇಶಖಾಲಿ ಇಲ್ಲಿ ರಾಷ್ಟ್ರೀಯ ಪರಿಶಿಷ್ಟ ಬುಡಕಟ್ಟು ಆಯೋಗದ ತಂಡ ತಲುಪಿದೆ. ಈ ತಂಡದಿಂದ ಸಂತ್ರಸ್ತರನ್ನು ಭೇಟಿಯಾಗಿದ್ದು ಅವರು ರಾಷ್ಟ್ರಪತಿಗಳಿಗೆ ವರದಿ ಸಲ್ಲಿಸುವರು. ರಾಷ್ಟ್ರೀಯ ಪರಿಶಿಷ್ಟ ಬುಡಕಟ್ಟು ಆಯೋಗದ ಸದಸ್ಯ ಅಂಜು ಬಾಲಾ ಇವರು, ಸರಕಾರವು ಸಂತ್ರಸ್ತರ ದೂರು ಕೂಡ ದಾಖಲಿಸಿಕೊಂಡಿಲ್ಲ. ಇಂದಿಗೂ ಮಹಿಳೆಯರ ಕುರಿತು ಈ ರೀತಿ ನಡೆಯುವುದು ಇದು ಲಜ್ಜಾಸ್ಪದ ಘಟನೆ ಆಗಿದೆ.

ಯಾರಿಗಾದರೂ (ತೃಣಮೂಲ ಕಾಂಗ್ರೆಸ್ಸಿನ ಕಾರ್ಯಕರ್ತನಿಗೆ) ಯಾವುದಾದರೂ ಮಹಿಳೆ ಇಷ್ಟವಾದರೆ, ಆಗ ಅವನು ಆಕೆಯನ್ನು ಬಲವಂತವಾಗಿ ಎಳೆದುಕೊಂಡು ಹೋಗುತ್ತಿದ್ದನು. ಇಲ್ಲಿ ರಾಜಕಾರಣಿಗಳಿಂದ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದರು ಮೇಲಿಂದ ಮೇಲೆ ಅವರನ್ನು ಬಿಟ್ಟು ಬಿಡಲಾಗುತ್ತದೆ. ಇದರಿಂದ ಇಲ್ಲಿ ರಾಜಕಾರಣ ಎಷ್ಟು ಕೆಳಮಟ್ಟಕ್ಕೆ ಇಳಿದಿದೆ, ಇದು ನಮ್ಮ ಗಮನಕ್ಕೆ ಬರುತ್ತದೆ, ಈ ರೀತಿ ರಾಜಕಾರಣ ನಡೆಯಬಾರದು. ಸಂದೇಶಖಾಲಿಯಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಗೊಳಿಸಬೇಕೆಂದು ನಮ್ಮ ಇಚ್ಛೆ ಇದೆ; ಕಾರಣ ಇಲ್ಲಿಯ ಜನರು ಸುರಕ್ಷಿತವಾಗಿ ಇಲ್ಲ.

ಮುಖ್ಯಮಂತ್ರಿಗಳ ಮನಸ್ಸಿನಲ್ಲಿ ‘ಮಮತಾ’ ಇಲ್ಲ !

ಬಾಲಾ ಮಾತು ಮುಂದುವರೆಸುತ್ತಾ, ಬಂಗಾಳದ ಮುಖ್ಯಮಂತ್ರಿ ಸ್ವತಃ ಒಬ್ಬರು ಮಹಿಳೆ ಆಗಿದ್ದಾರೆ. ಅವರ ಹೆಸರು ಮಮತಾ ಇದೆ; ಆದರೆ ಅವರ ಮನಸ್ಸಿನಲ್ಲಿ ‘ಮಮತೆ’ ಕಾಣುವುದಿಲ್ಲ. ಅವರು ಯಾವುದು ಬಹಿರಂಗಪಡಿಸಲು ಇಚ್ಚಿಸುವುದಿಲ್ಲ. ಅವರು ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ದೂರು ಕೂಡ ದಾಖಲಿಸಿ ಕೊಳ್ಳುವುದಿಲ್ಲ. ದೇಶವು ಅವರನ್ನು ಕ್ಷಮಿಸುವುದಿಲ್ಲ ಎಂದು ಹೇಳಿದರು.

‘ರಾಜ್ಯ ಸರಕಾರ ಒಂದೆಪರವಾಗಿ ಕಾರ್ಯ ಮಾಡುತ್ತಿದೆ. ಇದರ ಬಗ್ಗೆ ವಿಶ್ವಾಸ ಇಲ್ಲ ! – ಆಯೋಗದ ಅಧ್ಯಕ್ಷ ಅರುಣ ಹಲದರ

ರಾಷ್ಟ್ರೀಯ ಪರಿಶಿಷ್ಟ ಬುಡಕಟ್ಟು ಆಯೋಗದ ಅಧ್ಯಕ್ಷ ಅರುಣ ಹಲದರ ಇವರು ಮಾತನಾಡಿ, ನನಗೆ ಸಂದೇಶಖಾಲಿಯ ವರದಿ ದೊರೆತಿದೆ. ಸಂತ್ರಸ್ತ ಮಹಿಳೆಯರು ಹಿಂದುಳಿದ ವರ್ಗದವರಾಗಿದ್ದಾರೆ. ಅವರ ಅಭಿಪ್ರಾಯ ಕೇಳುವುದಕ್ಕಾಗಿ ಸಂಪೂರ್ಣ ಆಯೋಗ ಬಂಗಾಳಕ್ಕೆ ಹೋಗಿತ್ತು. ಈ ಜನರ ಹೇಳಿಕೆ ಕೇಳಿ ನಾನು ರಾಷ್ಟ್ರಪತಿಗಳಿಗೆ ವರದಿ ನೀಡುವೆನು. ಜನರ ಮಾತಿನಿಂದ ಸತ್ಯ ಮತ್ತು ಅಸತ್ಯ ಬೆಳಕಿಗೆ ಬರುವುದು. ‘ರಾಜ್ಯ ಸರಕಾರ ಒಂದರ ಪರವಾಗಿ ಕಾರ್ಯ ಮಾಡುತ್ತಿದೆ, ಇದರ ಕುರಿತು ವಿಶ್ವಾಸ ಮೂಡುತ್ತಿಲ್ಲ. ಈ ಆಯೋಗ ರಾಜಕೀಯವಾಗಿ ಇಲ್ಲ, ಅದು ಸಾಂವಿಧಾನಿಕವಾಗಿದೆ. ನಾವು ಇಲ್ಲಿ ರಾಜಕಾರಣ ಮಾಡುವುದಕ್ಕಾಗಿ ಬಂದಿಲ್ಲ, ಜನರ ಸಮಸ್ಯೆಗಳನ್ನು ಆಲಿಸಲು ಬಂದಿದ್ದೇವೆ ಎಂದು ಹೇಳಿದರು.

(ಸೌಜನ್ಯ – ZEE NEWS)

ಏನಿದು ಪ್ರಕರಣ ?

ಸಂದೇಶಕಾಲಿಯಲ್ಲಿ ಮಹಿಳೆಯರು ತೃಣಮೂಲ ಕಾಂಗ್ರೆಸ್ಸಿನ ನಾಯಕ ಶೇಖ ಶಾಹಜಹಾನ್ ಮತ್ತು ಅವನ ಬೆಂಬಲಿಗರ ಮೇಲೆ ಲೈಂಗಿಕ ಕಿರುಕುಳ ಮತ್ತು ಭೂಮಿ ಕಬಳಸಿರುವ ಆರೋಪ ಮಾಡಿದ್ದಾರೆ. ಕಳೆದ ಕೆಲವು ದಿನಗಳಿಂದ ಸ್ಥಳೀಯ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಶೇಖ ಶಾಹಜಹಾನ್ ಇವನನ್ನು ಬಂಧಿಸಲು ಮಹಿಳೆಯರು ಒತ್ತಾಯಿಸುತ್ತಿದ್ದಾರೆ. ಮಹಿಳೆಯರು ತೃಣಮೂಲ ಕಾಂಗ್ರೆಸ್ಸಿನ ಇನ್ನೋರ್ವ ನಾಯಕ ಶಿವಪ್ರಸಾದ ಹಾಜರಾ ಇವರ ಹೊಲ ಮತ್ತು ಹೊಲದಲ್ಲಿನ ಮನೆಗೆ ಬೆಂಕಿ ಹಚ್ಚಿದರು.

ಸಂಪಾದಕೀಯ ನಿಲುವು

ಯಾವುದಾದರೂ ಸಾಂವಿಧಾನಿಕ ಆಯೋಗದಿಂದ ಈ ರೀತಿ ಒತ್ತಾಯ ಆಗುವುದು ಇದು ಬಹಳ ಗಂಭೀರವಾಗಿದೆ. ಕೇವಲ ಸಂದೇಶಖಾಲಿ ಅಷ್ಟೇ ಅಲ್ಲದೆ ಸಂಪೂರ್ಣ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕೆಂದು ಹಿಂದೂಗಳಿಗೆ ಅನಿಸುತ್ತದೆ !

ಹಿಂದುಳಿದ ಜಾತಿ ಮತ್ತು ಜನಾಂಗದ ಸಲ್ಲದ ರಕ್ಷಕರು ಈಗ ಮೌನ ಏಕೆ ?