ಆರೋಪಿ ಶೇಖ ಶಹಾಜಹಾನ ಇವನನ್ನು ಇಲ್ಲಿಯವರೆಗೆ ಏಕೆ ಬಂಧಿಸಿಲ್ಲ ? – ಕೋಲಕಾತಾ ಉಚ್ಚ ನ್ಯಾಯಾಲಯ

ಸಂದೇಶಖಾಲಿ ಪ್ರಕರಣದಿಂದ ಕೋಲಕಾತಾ ಉಚ್ಚ ನ್ಯಾಯಾಲಯವು ಬಂಗಾಳದ ತೃಣಮೂಲ ಕಾಂಗ್ರೆಸ್ ಸರಕಾರಕ್ಕೆ ತಪರಾಕೀ !

ಕೋಲಕಾತಾ (ಬಂಗಾಳ) – ತೃಣಮೂಲ ಕಾಂಗ್ರೆಸ್ಸಿನ ನಾಯಕ ಶೇಖ ಶಹಾಜಹಾನ ಇವನ ಮೇಲೆ ಬಂಗಾಳದ ಸಂದೇಶಖಾಲಿಯ ಹಿಂದೂ ಮಹಿಳೆಯರ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪ ಮಾಡಿದ್ದಾರೆ. ಈ ಪ್ರಕರಣದಲ್ಲಿ ಕೊಲಕಾತಾ ಉಚ್ಚ ನ್ಯಾಯಾಲಯವು ಬಂಗಾಳದ ತೃಣಮೂಲ ಕಾಂಗ್ರೆಸ್ಸಿಗೆ ತಪರಾಕಿ ನೀಡಿದೆ. ನ್ಯಾಯಾಲಯವು, ‘ಈ ಪ್ರಕರಣ ಬಹಿರಂಗವಾಗಿ ಸಂಪೂರ್ಣ ೧೮ ದಿನ ಕಳೆದಿದೆ. ಈ ಸಂಪೂರ್ಣ ಸಮಸ್ಯೆಯ ಮೂಲ ಕಾರಣವಾಗಿರುವ ಓರ್ವ ವ್ಯಕ್ತಿ ಈಗಲು ನಾಪತ್ತೆ ಆಗಿದ್ದಾನೆ. ಇದು ಆಘಾತಕಾರಿ ಆಗಿದೆ. ಅವನ ಮೇಲೆ ಆರೋಪ ಇದೆ. ಅವನನ್ನು ರಕ್ಷಿಸಲಾಗಿದೆಯೇ ಅಥವಾ ಇಲ್ಲ ಇದು ನನಗೆ ತಿಳಿದಿಲ್ಲ; ಆದರೆ ಅವನನ್ನು ಬಂಧಿಸಿಲ್ಲ ಇದು ಮಾತ್ರ ದೃಢವಾಗಿದೆ. ಶಹಾಜಹನ್‌ಗೆ ಈ ರೀತಿ ರಾಜ್ಯದಿಂದ ಪ್ರೋತ್ಸಾಹ ದೊರೆಯುವುದು ಸರಿಯಲ್ಲ. ನ್ಯಾಯಾಲಯವು ಈ ಸಮಯದಲ್ಲಿ ಬಂಗಾಲದ ವಿರೋಧಿ ಪಕ್ಷದ ನಾಯಕ ಸುವೇಂದು ಅಧಿಕಾರಿ ಇವರಿಗೆ ಹಿಂಸಾಚಾರ ನಡೆದ ಸಂದೇಶಖಾಲಿಗೆ ಹೋಗಲು ಅನುಮತಿ ನೀಡಿದೆ.

(ಸೌಜನ್ಯ – India Today)

ನ್ಯಾಯಾಲಯವು, ಶಹಾಜಹನ ಇವನು ಜನರಿಗೆ ಹಾನಿ ಮಾಡಿರುವುದು ಪ್ರಥಮ ನೋಟದಲ್ಲಿಯೇ ತಿಳಿಯುತ್ತದೆ. ಇಂತಹವನ ಮೇಲೆ ಇರುವ ಆರೋಪಗಳಲ್ಲಿ ಒಂದಾದರೂ ನಿಜವಿದ್ದರೆ ಅದರ ವಿಚಾರಣೆ ನಡೆಯಬೇಕು. ನೀವು ಜನರಿಗೆ ಕಾರಣ ಇಲ್ಲದೆ ತೊಂದರೆ ನೀಡುತ್ತಿದ್ದೀರಾ. ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಪ್ರಶ್ನೆ ನಿರ್ಮಾಣವಾಗಿದೆ. ಅವನು ಕಾನೂನನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಅವನು ನ್ಯಾಯಾಲಯದಲ್ಲಿ ಹಾಜರ ಆಗುವನು ಅಥವಾ ಇಲ್ಲವೋ ಅದನ್ನು ನಾವು ನೋಡುತ್ತೇವೆ. ನಾವು ಅವನಿಗೆ ಶರಣಾಗಲು ಹೇಳುತ್ತೇವೆ ಎಂದು ಹೇಳಿದ್ದಾರೆ.

(ಸೌಜನ್ಯ – DNAIndiaNews)

ಸಂಪಾದಕೀಯ ನಿಲುವು

ಇದರಿಂದ ಬಂಗಾಳದಲ್ಲಿ ಕಾನೂನಿನದಲ್ಲ, ಜಿಹಾದಿಗಳ ಆಡಳಿತ ನಡೆಯುತ್ತಿದೆ ಎಂಬುದು ಸ್ಪಷ್ಟವಾಗಿದೆ ! ಇದನ್ನು ಆಧರಿಸಿ ಈಗ ಕೇಂದ್ರ ಸರಕಾರವು ತೃಣಮೂಲ ಕಾಂಗ್ರೆಸ್ಸಿನ ಸರಕಾರ ವಿಸರ್ಜಿಸಿ ಅಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು !