(‘ಶಬ್-ಎ-ಬರಾತ್’ ಇದು ಮುಸ್ಲಿಮರು ರಾತ್ರಿಯಲ್ಲಿ ಆಚರಿಸುವ ಒಂದು ಹಬ್ಬವಾಗಿದ್ದು, ಇದರಲ್ಲಿ ತಮ್ಮಿಂದ ಆಗಿರುವ ಅಪರಾಧಗಳಿಗೆ ಅಲ್ಲಾನ ಬಳಿ ಕ್ಷಮೆ ಕೇಳಲಾಗುತ್ತದೆ)
ಕೋಲಕತ್ತಾ (ಬಂಗಾಳ) – ಬಂಗಾಳದ 2024 ರ ಸರಕಾರಿ ದಿನದರ್ಶಿಕೆಯಲ್ಲಿ ಮಕರಸಂಕ್ರಾಂತಿ ಮತ್ತು ಶ್ರೀ ರಾಮ ನವಮಿ ದಿನದಂದು ಇರುವ ರಜೆಯನ್ನು ರದ್ದುಗೊಳಿಸಲಾಗಿದೆ, ಆದರೆ ‘ಶಬ್-ಎ-ಬರಾತ್’ ಈ ಮುಸ್ಲಿಮರ ಹಬ್ಬಕ್ಕೆ ರಜೆಯನ್ನು ನೀಡಲಾಗಿದೆ. ಇದರಿಂದ ಭಾಜಪ ಟೀಕಿಸಿದೆ.
1. ರಾಜ್ಯ ವಿರೋಧ ಪಕ್ಷದ ನಾಯಕ ಮತ್ತು ಭಾಜಪ ಶಾಸಕ ಸುವೇಂದು ಅಧಿಕಾರಿ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಟೀಕಿಸುತ್ತಾ, ಮಮತಾ ಬ್ಯಾನರ್ಜಿ ಅವರು ಮುಸ್ಲಿಮರನ್ನು ಬಹಿರಂಗವಾಗಿ ಓಲೈಸಲು ಪ್ರಾರಂಭಿಸಿದ್ದಾರೆ. ಪಾಕಿಸ್ತಾನದಲ್ಲಿಯೂ ಶಬ್-ಎ-ಬರಾತ್ ಗೆ ರಜೆಯಿರುವುದಿಲ್ಲ ಆದರೆ ಮಮತಾ ಬ್ಯಾನರ್ಜಿ ಮಾತ್ರ ಮುಸ್ಲಿಮರ ಮತಗಳಿಗಾಗಿ ಪ್ರಜ್ಞಾಪೂರ್ವಕವಾಗಿ ಓಲೈಕೆಯನ್ನು ಮಾಡುತ್ತಿದ್ದಾರೆ.
2. ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನ ನಾಯಕ ಕುನಾಲ್ ಘೋಷ್ ಅವರು ಸರಕಾರವನ್ನು ಬೆಂಬಲಿಸಿ, ರಾಜ್ಯದಲ್ಲಿ ಹಿಂದೂಗಳು ಅಥವಾ ಮುಸ್ಲಿಮರು ಇರಲಿ, ಎಲ್ಲರೂ ಒಟ್ಟಿಗೆ ಸಾಮರಸ್ಯದಿಂದ ಬದುಕುತ್ತಿದ್ದಾರೆ ಎಂದು ಹೇಳಿದರು. ದಿನದರ್ಶಿಕೆಯ ಮೂಲಗಳು ಸರ್ಕಾರದ ಸೂತ್ರಗಳಾಗಿದ್ದು, ಭಾಜಪ ಪ್ರಜ್ಞಾಪೂರ್ವಕವಾಗಿ ಅಲ್ಲಿ ಧಾರ್ಮಿಕ ಉನ್ಮಾದ ಹರಡುತ್ತಿದೆ ಎಂದು ಹೇಳಿದ್ದಾರೆ.
The Queen of Appeasement Politics – Mamata Banerjee, strikes again.
Govt of WB Calendar; List of Holidays:
❌ Monday, 15 Jan, 2024 – Makar Sankranti. No Holiday.
❌ Wednesday, 17 Apr, 2024 – Shree Ram Navami. No Holiday.
🟢 Shab-e-Barat – Sunday, 25 Feb, 2024
Holiday 🔽… pic.twitter.com/gJRX0FvS3c— Suvendu Adhikari • শুভেন্দু অধিকারী (@SuvenduWB) January 15, 2024
ಸಂಪಾದಕರ ನಿಲುವು* ತೃಣಮೂಲ ಕಾಂಗ್ರೆಸ್‌ನ ರಾಜ್ಯದಲ್ಲಿ ಬಂಗಾಳ ಎರಡನೇ ಬಾಂಗ್ಲಾದೇಶವಾಗಿದೆ. ಬಂಗಾಳದಲ್ಲಿ ಹಿಂದೂ ಮತ್ತು ಧರ್ಮವನ್ನು ರಕ್ಷಿಸಲು ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವುದೊಂದೇ ಉಪಾಯವಾಗಿದೆ. |