ತೃಣಮೂಲ ಕಾಂಗ್ರೆಸ್ಸಿನ ಶಾಸಕ ಶತಾಬ್ದಿ ರಾಯ ಇವರ ಖೇದಕರ ಹೇಳಿಕೆ

ಕೋಲಕಾತಾ – ತೃಣಮೂಲ ಕಾಂಗ್ರೆಸ್ಸಿನ ಶಾಸಕ ಶತಾಬ್ದಿ ರಾಯ ಇವರು, ರಾಮ ಬಹುತೇಕ ಬಡತನ ರೇಖೆಯ ಕೆಳಗೆ ಜೀವನ ನಡೆಸುತ್ತಿದ್ದಾನೆ. ಆದ್ದರಿಂದ ಹೇಗೆ ಬಿಪಿಎಲ್ (ಬಿಲೋ ಪಾವರ್ಟಿ ಲೈನ್ ಅಂದರೆ ಬಡತನ ರೇಖೆಯ ಕೆಳಗೆ) ಕಾರ್ಡ್ ಇರುವ ಬಡವರಿಗಾಗಿ ಮನೆ ಕಟ್ಟಿ ಕೊಡಲಾಗುತ್ತದೆ, ಅದೇ ರೀತಿ ಈ ಯೋಜನೆಯ ಅಡಿಯಲ್ಲಿ ಭಾಜಪ ಅವನಿಗೆ ಮನೆ ಕಟ್ಟಿ ಕೊಡುತ್ತಿದ್ದಾರೆ. ಭಾಜಪದವರು ಎಷ್ಟು ಶಕ್ತಿಶಾಲಿಗಳಾಗಿದ್ದಾರೆ ಅಂದರೆ, ಅವರು ಈಗ ರಾಮನಿಗೂ ಮನೆ ಕಟ್ಟಿಸಿ ಕೊಡುತ್ತಿದ್ದಾರೆ. ರಾಮನ ಪುತ್ರರು ಲವ ಮತ್ತು ಕುಶ ಈ ಇಬ್ಬರಿಗೂ ಬೇರೆ ಬೇರೆ ಮನೆ ಕಟ್ಟಿಸಿ ಕೊಟ್ಟರೆ ಕೆಲಸ ಪೂರ್ಣವಾಗುವುದು ಎಂದು ಹೇಳಿದರು.
೧. ಅವರ ಈ ಹೇಳಿಕೆಯ ಕುರಿತು ಭಾಜಪದ ಪ್ರದೇಶಾಧ್ಯಕ್ಷ ಸುಕಾಂತ ಮುಜುಮಾದಾರ ಇವರು ಟೀಕಿಸಿದ್ದಾರೆ. ‘ಶತಾಬ್ದಿ ರಾಯ ಇವರ ಹೇಳಿಕೆಯಿಂದ ತೃಣಮೂಲ ಕಾಂಗ್ರೆಸ್ಸಿನ ಮಾನಸಿಕತೆ ತಿಳಿದು ಬರುತ್ತದೆ. ಇದರಿಂದ ಜಗತ್ತಿನಾದ್ಯಂತ ಇರುವ ಹಿಂದುಗಳ ಅವಮಾನವಾಗಿದೆ’, ಎಂದು ಅವರು ಹೇಳಿದರು.
೨. ತೃಣಮೂಲ ಕಾಂಗ್ರೆಸ್ಸಿನಲ್ಲಿ ಇರುವ ಹಿಂದೂ ದ್ವೇಷ ಹೊಸದೇನಲ್ಲ. ಈ ಹಿಂದೆ ೨೦೧೯ ರಲ್ಲಿ ತೃಣಮೂಲ ಕಾಂಗ್ರೆಸ್ಸಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇವರ ಕಾರ್ಯಕ್ರಮದಲ್ಲಿ ಕೆಲವರಿಂದ ‘ಜೈ ಶ್ರೀರಾಮ’ ಎಂದು ಘೋಷಣೆ ನೀಡಿದ ನಂತರ ಬ್ಯಾನರ್ಜಿ ಅದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅವರು, ‘ಜೈ ಶ್ರೀ ರಾಮ’ ಈ ಘೋಷಣೆ ನೀಡುವವರು ರೌಡಿಗಳಿದ್ದಾರೆ ಮತ್ತು ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು, ಎಂದು ಹೇಳಿದ್ದರು. ಅದರ ನಂತರ ಘೋಷಣೆ ನೀಡುವ ೧೨ ಜನರನ್ನು ಬಂಧಿಸಲಾಗಿತ್ತು.
(ಸೌಜನ್ಯ: India Today)
ಸಂಪಾದಕರ ನಿಲುವು* ಭಾಜಪ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ವಿರೋಧ ಮಾಡುವ ಭರದಲ್ಲಿ ತೃಣಮೂಲ ಕಾಂಗ್ರೆಸ್ಸಿಗರ ಬುದ್ಧಿ ಎಷ್ಟು ಭ್ರಷ್ಟವಾಗಿದೆ ಎಂದರೆ ಅವರು ಶ್ರೀರಾಮನ ಕುರಿತು ಕೀಳುಮಟ್ಟದ ಟೀಕೆಗಳನ್ನು ಮಾಡುತ್ತಿದ್ದಾರೆ ! * ಬಂಗಾಳದಲ್ಲಿನ ಹಿಂದುಗಳು ಬರುವ ಚುನಾವಣೆಯಲ್ಲಿ ಹಿಂದೂ ದ್ವೇಷಿಗಳು ತುಂಬಿರುವ ತೃಣಮೂಲ ಕಾಂಗ್ರೆಸ್ಸನ್ನು ಅಧಿಕಾರದಿಂದ ಕೆಳಗಿಳಿಸಿದರೆ ಆಶ್ಚರ್ಯ ಅನಿಸುವುದಿಲ್ಲ ! |
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
Mathura, Vrindavan : ಮಥುರಾ-ಬೃಂದಾವನ: ಬಹಿರಂಗ ಚರ್ಚೆಗೆ ಕರೆ ನೀಡಿದ ಯೋಗಿ ಆದಿತ್ಯನಾಥ್