ಸಂದೇಶಖಾಲಿಯಲ್ಲಿ ಗ್ರಾಮಸ್ಥರಿಂದ ತೃಣಮೂಲ ಕಾಂಗ್ರೆಸ್ ನಾಯಕ ಅಜಿತ್ ಮೈತಿಯ ಮೇಲೆ ಹಲ್ಲೆ!

ಹಿಂದೂ ಮಹಿಳೆಯರ ಮೇಲಿನ ಲೈಂಗಿಕ ಶೋಷಣೆಯ ಮುಖ್ಯ ಸೂತ್ರಧಾರ ಶಹಜಹಾನ ಶೇಖ ಜೊತೆ ಶಾಮೀಲಾಗಿರುವ ಆರೋಪ!

ಕೋಲಕಾತಾ – ಬಂಗಾಳ ರಾಜ್ಯದ ಉತ್ತರ 24 ಪರಗಣ ಜಿಲ್ಲೆಯ ಸಂದೇಶಖಾಲಿಯಲ್ಲಿ ಫೆಬ್ರವರಿ 23 ರಂದು ತೃಣಮೂಲ ಕಾಂಗ್ರೆಸ್ ನಾಯಕ ಅಜಿತ್ ಮೈತಿ ಮೇಲೆ ಗ್ರಾಮಸ್ಥರು ದಾಳಿ ಮಾಡಿದರು. ಆ ಸಮಯದಲ್ಲಿ ಮೈತಿಗೆ ಚೆನ್ನಾಗಿ ಥಳಿಸಿದರು.. ಅವರನ್ನು ಅಕ್ಷರಶಃ ಚಪ್ಪಲಿಯಿಂದ ಥಳಿಸಲಾಯಿತು ಹಾಗೂ ಆಕ್ರೋಶಗೊಂಡ ಗ್ರಾಮಸ್ಥರು ಅವರ ಮನೆಯನ್ನು ಧ್ವಂಸಗೊಳಿಸಿದರು. ಇದಲ್ಲದೇ ಜನರು ಅವರ ದ್ವಿಚಕ್ರವಾಹನ ಮತ್ತು ಅವರ ಮನೆಯ ಬೇಲಿಯ ಕೆಲವು ಭಾಗವನ್ನು ಮುರಿದರು. ಮೈತಿ ಗ್ರಾಮದ ಭೂಮಿಯನ್ನು ಕಬಳಿಸಿರುವ, ಹಾಗೆಯೇ ಹಿಂದೂ ಮಹಿಳೆಯರ ಮೇಲಿನ ಲೈಂಗಿಕ ಶೋಷಣೆಯ ಮುಖ್ಯ ಸೂತ್ರಧಾರ ತೃಣಮೂಲ ಕಾಂಗ್ರೆಸ ನಾಯಕ ಷಹಜಹಾನ ಶೇಖನೊಂದಿಗೆ ಶಾಮೀಲಾಗಿದ್ದಾನೆಂದು ಗ್ರಾಮಸ್ಥರು ಆರೋಪಿಸಿದರು. ಘಟನೆಯ ಮಾಹಿತಿ ಸಿಗುತ್ತಲೇ, ಪೊಲೀಸರು ಘಟನಾಸ್ಥಳಕ್ಕೆ ಧಾವಿಸಿ, ಗ್ರಾಮಸ್ಥರನ್ನು ಶಾಂತಗೊಳಿಸಿದರು.

(ಸೌಜನ್ಯ – The Economic Times)

ಶಹಾಜಹಾನ ಶೇಖ ವಿರುದ್ಧ ಭೂಮಿ ಕಬಳಿಸಿರುವ, ಮಹಿಳೆಯರ ಲೈಂಗಿಕ ಶೋಷಣೆ ಮುಂತಾದ ಕೃತ್ಯಗಳ ಒಟ್ಟು 100 ಪ್ರಕರಣಗಳು ದಾಖಲಾಗಿವೆ. ಶೇಕನು ಕಳೆದ 55 ದಿನಗಳಿಂದ ಪರಾರಿಯಾಗಿದ್ದಾನೆ.

ಶೇಖ ಷಹಜಹಾನ ಅವನ ಸಹೋದರನ ಮನೆಗೆ ಬೆಂಕಿ !

ಶೇಖ ಷಹಜಹಾನ ಅವರ ಸಹೋದರ ಶಿರಾಜುದ್ದೀನ ಅವನು 142 ಬಿಘಾಸ್ (88 ಎಕರೆ) ಭೂಮಿಯನ್ನು ಕಬಳಿಸಿದ ಆರೋಪವಿದೆ. ಇಲ್ಲಿಯೂ ಪೊಲೀಸರು ಸ್ಥಳಕ್ಕೆ ಧಾವಿಸಿ ಘಟನೆಯನ್ನು ಶಾಂತಗೊಳಿಸಿದರು. ಸಂದೇಶಖಾಲಿಯ ಎರಡೂ ಪೊಲೀಸ್ ಠಾಣೆಗಳ ಸರಹದ್ದಿನಲ್ಲಿ ಸಧ್ಯಕ್ಕೆ ಕಲಂ 144 ಅನ್ನು ಜಾರಿಗೊಳಿಸಿ, ಹೆಚ್ಚುವರಿ ಪೊಲೀಸ್ ಬಂದೋಬಸ್ತ ಅನ್ನು ನಿಯೋಜಿಸಿದೆ.

ಅಜಿತ ಮೈತಿಯ ನೀಚತನ !

ಅಜಿತ್ ಮೈತಿ ಮಾತನಾಡಿ, ನನ್ನ ದ್ವಿಚಕ್ರ ವಾಹನವನ್ನು ಧ್ವಂಸಗೊಳಿಸಿದ್ದಾರೆ, ನನ್ನ ಪತ್ನಿಯ ಮೇಲೆಯೂ ಹಲ್ಲೆ ನಡೆಸಿದರು. ನನ್ನ ಮಗಳ ಪರೀಕ್ಷೆ ನಡೆದಿದೆ. ಅವಳ ಮೇಲೆಯೂ ಹಲ್ಲೆಯಾಗುವ ಭೀತಿಯಿದೆಯೆಂದು ಹೇಳಿದ್ದಾರೆ.

ಮೂಲದಲ್ಲಿ ಹಿಂದೂ ಮಹಿಳೆಯರ ಶೀಲ ರಕ್ಷಣೆಯ ವಿಷಯದಲ್ಲಿ ಯಾಗುದೇ ಸಂವೇದನಶೀಲನೆ ಇಲ್ಲದಿರುವ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈಗ ಈ ದಾಳಿಯ ಹಿಂದೆ ಹಿಂದುತ್ವವಾದಿ ಶಕ್ತಿ ಇದೆ ಎಂದು ಹೇಳಿದರೆ ಆಶ್ಚರ್ಯ ಪಡಬಾರದು !

ದಿಗಿಲುಗೊಂಡಿರುವ ಬಂಗಾಳದ ಹಿಂದೂಗಳ ಈ ರೋಷಕ್ಕೆ ಅಲ್ಲಿಯ ಸರಕಾರ ಮತ್ತು ಪೊಲೀಸ ಇಲಾಖೆ ಜವಾಬ್ದಾರರಾಗಿರುತ್ತಾರೆ. ಇದಕ್ಕಾಗಿ ಕೇಂದ್ರ ಸರಕಾರ ಈಗಲಾದರೂ ರಾಜ್ಯ ಸರಕಾರವನ್ನು ವಿಸರ್ಜಿಸಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು.