ಬಲಾತ್ಕಾರ ನಡೆಸಿ ಬರ್ಬರವಾಗಿ ಹತ್ಯೆ ಮಾಡಿರುವುದಾಗಿ ಕುಟುಂಬದ ಆರೋಪ
ಮಾಲದಾ (ಬಂಗಾಳ) – ಮಾಲದಾ ಜಿಲ್ಲೆಯಲ್ಲಿನ ಮೋಥಾಬಾರಿ ಪರಿಸರದಲ್ಲಿ ಫೆಬ್ರವರಿ ೧೫ ರಂದು ತಮ್ಮ ಮನೆಯಿಂದ ಕೆಲವು ಅಂತರದಲ್ಲಿರುವ ಮೆಕ್ಕೆಜೋಳದ ಹೊಲದಲ್ಲಿ ೨೫ ವರ್ಷದ ಯುವತಿಯ ಅರಬೆತ್ತಲೆ ಅವಸ್ಥೆಯಲ್ಲಿ ಶವ ಕಂಡು ಬಂದಿದೆ. ಸಂತ್ರಸ್ತೆಯ ಹೆಸರು ಕಲ್ಪನಾ ಮಂಡಲ್ ಎಂದಾಗಿದೆ. ಶ್ರೀ ಸರಸ್ವತಿ ದೇವಿಯ ಪೂಜೆ ಎಂದರೆ ಫೆಬ್ರುವರಿ ೧೪ ರಂದು ಸಂಜೆ ಆಕೆ ನಾಪತ್ತೆಯಾಗಿದ್ದಳು. ಈ ಯುವತಿಯ ಮೇಲೆ ಬಲಾತ್ಕಾರ ನಡೆಸಿ ಬರ್ಬರವಾಗಿ ಹತ್ಯೆ ಮಾಡಿರುವುದಾಗಿ ಆಕೆಯ ಕುಟುಂಬದವರಿಗೆ ಅನುಮಾನ ಇದೆ. ಮೃತಳ ದೇಹದ ಮೇಲೆ ಹಲ್ಲೆಯ ಗುರುತು ಮತ್ತು ಚಾಕುವಿನಿಂದ ಇರಿತದ ಅನೇಕ ಗಾಯಗಳು ಇವೆ ಎಂದು ಕುಟುಂಬದವರ ಹೇಳಿಕೆ ಆಗಿದೆ. ಈ ಘಟನೆಯ ಬಗ್ಗೆ ಭಾಜಪದ ಐಟಿ ಶಾಖೆಯ ಮುಖ್ಯಸ್ಥ ಅಮಿತ ಮಾಲವಿಯ ಇವರು ‘ಎಕ್ಸ್’ ನಲ್ಲಿ ಪ್ರಸಾರ ಮಾಡಿರುವ ಪೋಸ್ಟ್ ನಲ್ಲಿ, ಮಮತಾ ಬ್ಯಾನರ್ಜಿ ಇವರ ನೇತೃತ್ವದಲ್ಲಿನ ಬಂಗಾಳ ಮಹಿಳೆಯರಿಗಾಗಿ ನರಕವಾಗಿದೆ. ಅಲ್ಲಿ ಯಾವುದಾದರೂ ಮಹಿಳೆಯ ಮೇಲೆ ಬಲತ್ಕಾರ ನಡೆದು ಆಕೆಯ ಹತ್ಯೆ ಆಗಿಲ್ಲ ಎಂಬುದು ಒಂದೇ ಒಂದು ದಿನ ನಡೆದಿಲ್ಲ. ಅಪರಾಧದ ಕ್ರೂರತೆ ಅನೇಕ ಬಾರಿ ಬಹಳ ಭಯಾನಕವಾಗಿರುತ್ತದೆ, ಅನೇಕ ದಿನಗಳ ಕಾಲ ನಿದ್ದೆ ಬರುವುದಿಲ್ಲ; ಆದರೆ ಎಲ್ಲಿಯವರೆಗೆ ಮಮತಾ ಬ್ಯಾನರ್ಜಿ ಇವರಿಗೆ ಮತಗಳ ದೊರೆಯುತ್ತವೆ ಅಲ್ಲಿಯವರೆಗೆ ಅವರ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ. ಯಾವುದೇ ಅಪರಾಧಿಗಳ ಮೇಲೆ ಯಾವುದೇ ರೀತಿಯ ಕ್ರಮ ಕೈಗೊಳ್ಳಲಾಗುವುದಿಲ್ಲ; ಕಾರಣ ಅವರು ಯಾವಾಗಲೂ ಅಧಿಕಾರದಲ್ಲಿರುವ ತೃಣಮೂಲ ಕಾಂಗ್ರೆಸ್ಸಿನ ಜೊತೆಗೆ ಜೋಡಣೆ ಆಗಿರುತ್ತಾರೆ. ಮಮತಾ ಬ್ಯಾನರ್ಜಿ ಬಂಗಾಳದ ಮಹಿಳೆಯರಿಗಾಗಿ ಶಾಪವಾಗಿ ಪರಿಣಮಿಸಿದ್ದಾರೆ ಎಂದು ಅವರು ಆರೋಪಿಸಿದರು.
West Bengal, under Mamata Banerjee, has become hell for women… Not a day goes when a woman is not raped and murdered. The brutality of the crime is often so spine chilling that one can’t sleep for days. But nothing affects Mamata Banerjee, as long as she keeps getting the… pic.twitter.com/bREGJop4Mb
— Amit Malviya (@amitmalviya) February 15, 2024
ಸಂಪಾದಕೀಯ ನಿಲುವುತೃ, ಇದರಿಂದ ಹಿಂದೂ ಮಹಿಳೆಯರಿಗೆ ಬಂಗಾಳವು ಪಾಕಿಸ್ತಾನ ಮತ್ತು ಬಾಂಗ್ಲಾದೇಶವಾಗಿದೆ ಇದೆ ಇದರಿಂದ ಸ್ಪಷ್ಟವಾಗುತ್ತದೆ ! |