ಚೀನಾದ ಗಡಿಯಲ್ಲಿ ೫೦ ಸಾವಿರ ಸೈನಿಕರನ್ನು ನೇಮಿಸಿದ ಭಾರತ !

ಲೇಹ ನ ಭಾರತ ಚೀನಾ ಗಡಿಯಲ್ಲಿ ಸುರಕ್ಷಾ ಪರಿಸ್ಥಿತಿಯ ವರದಿ ಪಡೆದು ಸೈನ್ಯ ದಳದ ಪ್ರಮುಖ ಜನರಲ ಮನೋಜ್ ಪಾಂಡೆ ಇವರು ದೊಡ್ಡ ನಿರ್ಣಯ ತೆಗೆದುಕೊಂಡಿದ್ದಾರೆ. ಅವರು ಅಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಿದ್ದಾರೆ.

ಕಾಶ್ಮೀರ ಬಿಟ್ಟು ಹೋಗಿ, ಇಲ್ಲ ಸಾಯಲು ಸಿದ್ಧರಾಗಿ !

ಕಾಶ್ಮೀರದಲ್ಲಿ ವಾಸಿಸುವ ಕಾಶ್ಮೀರಿ ಹಿಂದೂಗಳಿಗೆ ಲಷ್ಕರ್ ಎ ಇಸ್ಲಾಂ ಹೆಸರಿನ ಜಿಹಾದಿ ಉಗ್ರರ ಸಂಘಟನೆ ಕಾಶ್ಮೀರ ಬಿಟ್ಟುಬಿಡಿ ಇಲ್ಲವಾದರೆ ಸಾಯಲು ಸಿದ್ಧರಾಗಿ, ಎಂದು ಪತ್ರದ ಮೂಲಕ ಬೆದರಿಕೆ ಒಡ್ಡಿದ್ದಾರೆ. ಪುಲ್ವಾಮಾ ಜಿಲ್ಲೆಯಲ್ಲಿನ ಪುನರ್ವಸತಿ ಛಾವಣಿಯಲ್ಲಿರುವ ಕಾಶ್ಮೀರಿ ಹಿಂದೂಗಳಿಗೆ ಈ ಪತ್ರ ದೊರೆತಿದೆ.

ಶ್ರೀವೈಷ್ಣೋ ದೇವಿಗೆ ತೆರಳಿದ ಶ್ರದ್ಧಾಳುಗಳ ಬಸ್ಸಿಗೆ ಬೆಂಕಿ : ಭಯೋತ್ಪಾದಕ ದಾಳಿಯ ಸಾಧ್ಯತೆ !

ಇಲ್ಲಿಯ ಶ್ರೀವೈಷ್ಣೋ ದೇವಿಯ ದರ್ಶನಕ್ಕೆ ತೆರಳಿದ ಶ್ರದ್ಧಾಳುಗಳ ಬಸ್ಸಿಗೆ ಮೇ ೨೩ ರಂದು ಅಚಾನಕ್ಕಾಗಿ ಬೆಂಕಿ ಹೊತ್ತಿಕೊಂಡಿತು. ಈ ಬಸ್ಸು ಕಟರಾದಿಂದ ಜಮ್ಮು ಕಡೆಗೆ ಹೋಗುತ್ತಿತ್ತು. ಅಗ್ನಿ ಅನಾಹುತದಲ್ಲಿ ೪ ಜನರ ಮೃತಪಟ್ಟಿದ್ದಾರೆ. ಹಾಗೂ ೨೦ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರಕಾರಗಳು ರಕ್ಷಣೆ ನೀಡುವುದರಲ್ಲಿ ವಿಫಲ !

ಜಿಹಾದಿ ಉಗ್ರಗಾಮಿಗಳು ಕಾಶ್ಮೀರದ ಬಡಗಾವ ಜಿಲ್ಲೆಯಲ್ಲಿನ ಚದೂರಾದಲ್ಲಿ ರಾಹುಲ ಭಟ್ಟ ಎಂಬ ಹಿಂದೂ ಸರಕಾರಿ ನೌಕರನನ್ನು ತಹಸೀಲುದಾರರ ಕಛೇರಿಗೆ ನುಗ್ಗಿ ಕೊಲೆ ಮಾಡಿದ ನಂತರ ಅಲ್ಲಿ ಅಸಂತೋಷ ನಿರ್ಮಾಣವಾಗಿದೆ.

ಮೊಹಾಲಿ (ಪಂಜಾಬ) ಗ್ರೆನೇಡ ದಾಳಿ ಪ್ರಕರಣ ಖಲಿಸ್ತಾನಿ ಭಯೋತ್ಪಾದಕನ ಬಂಧನ

ಇಲ್ಲಿನ ಪಂಜಾಬ ಪೊಲೀಸರ ಗುಪ್ತಚರ ಇಲಾಖೆಯ ಕಚೇರಿಯಲ್ಲಿ ರಾಕೆಟ ಲಾಂಚರ ಮೂಲಕ ಗ್ರೆನೇಡ ಎಸೆದ ಆರೋಪದ ಮೆಲೆ ಖಲಿಸ್ತಾನಿ ಉಗ್ರ ನಿಶಾನ ಸಿಂಗನನ್ನು ಪೊಲೀಸರು ಬಂಧಿಸಿದ್ದಾರೆ. ಆತನಿಂದ ‘ರಾಕೆಟ ಪ್ರೊಪೆಲ್ಡ ಗ್ರೆನೇಡ ಲಾಂಚರ’ನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ಪಾಕಿಸ್ತಾನದಲ್ಲಿ ಮಾತ್ರವಲ್ಲ, ಭಾರತದ ಬಹುತೇಕ ಸ್ಥಳಗಳಲ್ಲಿಯೂ ಹೀಗೆಯೇ ಇದೆ !

ಪ್ರಸ್ತುತ ಪಾಕಿಸ್ತಾನದಲ್ಲಿ ೪೦ ಸಾವಿರ ಮದರಸಾಗಳಲ್ಲಿ ಉಗ್ರರು ಸಿದ್ಧರಾಗುತ್ತಿದ್ದಾರೆ. ಈ ಉಗ್ರರು ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಾರೆ ಎಂದು ಅಮೆರಿಕದ ‘ಬಾಲ್ಟಿಮೋರ್ ಪೋಸ್ಟ್ ಎಕ್ಸಾಮಿನರ್’ ಸಂಸ್ಥೆಯ ವರದಿಯಲ್ಲಿ ತಿಳಿಸಲಾಗಿದೆ.

ಜೈಷೆ-ಏ-ಮೋಹಮ್ಮದ್ ನಿಂದ ಹರಿದ್ವಾರದ ಧಾರ್ಮಿಕ ಸ್ಥಳಗಳ ಸಹಿತ ೯ ರೈಲ್ವೆ ಸ್ಟೇಷನ್ ಗಳಿಗೆ ಬಾಂಬ್ ಬೆದರಿಕೆ

ರಾಜ್ಯದ ರೂಡಕೀ ರೈಲ್ವೆ ಸ್ಟೇಷನ್ ಅಧಿಕಾರಿಗಳಿಗೆ ಬೆದರಿಕೆಯ ಪತ್ರ ದೊರೆತಿದ್ದು ಅದರಲ್ಲಿ ಮೆ ೨೧ ರ ನಂತರ ಹರಿದ್ವಾರದ ಮಂಶಾದೇವಿ ಮತ್ತು ಚಂಡಿದೇವಿ ಇವುಗಳ ಜೊತೆಗೆ ಅನ್ಯ ಧಾರ್ಮಿಕ ಸ್ಥಳ, ಹಾಗೂ ಲಕ್ಷರ್, ನಜರಾಬಾದ್, ಡೆಹರಾಡೂನ್, ರೂಡಕೀ, ರಿಷಿಕೇಶ್ ಮತ್ತು ಹರಿದ್ವಾರದ ರೈಲ್ವೆ ಸ್ಟೇಷನಗಳ ಮೇಲೆ ಬಾಂಬು ದಾಳಿ ನಡೆಸಲಾಗುವ ಬೆದರಿಕೆ ಒಡ್ಡಲಾಗಿದೆ.

ಕರ್ನಾಲ (ಹರಿಯಾಣ)ದಲ್ಲಿ ೪ ಖಲಿಸ್ತಾನಿ ಭಯೋತ್ಪಾದಕರನ್ನು ದೊಡ್ಡ ಶಸ್ತ್ರಸಂಗ್ರಹದೊಂದಿಗೆ ಬಂಧಿಸಲಾಯಿತು !

ರಾಜಧಾನಿ ದೆಹಲಿಯಲ್ಲಿ ಬಾಂಬ್‌ಸ್ಫೋಟಗಳನ್ನು ನಡೆಸುವ ದೊಡ್ಡ ಷಡ್ಯಂತ್ರವನ್ನು ಧ್ವಂಸಗೊಳಿಸಲಾಯಿತು. ಇಲ್ಲಿ ಕರ್ನಾಲ ಮತ್ತು ಪಂಜಾಬ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಿಂದ ಗುರಪ್ರೀತ, ಅಮನದೀಪ, ಪರಮಿಂದರ ಮತ್ತು ಭೂಪಿಂದರ ಎಂಬ ೪ ಖಲಿಸ್ತಾನಿ ಭಯೋತ್ಪಾದಕರನ್ನು ಬಂಧಿಸಲಾಗಿದೆ.

ನನ್ನ ಬಂಧನವು ಮುಖ್ಯಮಂತ್ರಿ ವಿಜಯನ್ ಇವರಿಂದ ಜಿಹಾದಿಗಳಿಗೆ ನೀಡಿರುವ ರಮಝಾನ ಉಡುಗೊರೆ – ಮಾಜಿ ಶಾಸಕ ಪಿ.ಸಿ. ಜಾರ್ಜ

ನನ್ನ ಬಂಧನವು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಮಝಾನ ನಿಮಿತ್ತ ಭಯೋತ್ಪಾದಕ ಮುಸಲ್ಮಾನರಿಗೆ ನೀಡಿರುವ ಉಡುಗೊರೆಯಾಗಿದೆಯೆಂದು ಮಾಜಿ ಶಾಸಕ ಮತ್ತು ಕಾಂಗ್ರೆಸ್ಸಿನ ಮಾಜಿ ಮುಖಂಡ ಪಿ.ಸಿ. ಜಾರ್ಜ ಟೀಕಿಸಿದ್ದಾರೆ.

ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆಯಿಂದ ಕಾಶ್ಮೀರದಲ್ಲಿ ೬೪ ಸಾವಿರ ೮೨೭ ಹಿಂದೂ ಕುಟುಂಬಗಳು ಪಲಾಯನಗೈದರು.- ಕೇಂದ್ರ ಸರಕಾರ

ಕೇಂದ್ರ ಸರಕಾರದ ಗೃಹ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆಯಿಂದ ಕಾಶ್ಮೀರದ ೬೪ ಸಾವಿರ ೮೨೭ ಕಾಶ್ಮೀರಿ ಹಿಂದೂ ಕುಟುಂಬಗಳು ೧೯೯೦ ರ ದಶಕದಲ್ಲಿ ಕಾಶ್ಮೀರ ತೊರೆದು ಜಮ್ಮು, ದೆಹಲಿ ಮತ್ತು ದೇಶದ ಅನ್ಯ ಸ್ಥಳಗಳಲ್ಲಿ ಪಲಾಯನ ಮಾಡಲು ಅನಿವಾರ್ಯವಾಯಿತು.