ಮುಸಲ್ಮಾನ ಯುವಕನಿಂದ ವಿಹಂಪದ ಮುಖಂಡರ ಮೇಲೆ ಮಾರಣಾಂತಿಕ ಹಲ್ಲೆ

ಇಲ್ಲಿನ ರಾಮದೇವ ದೇವಾಲಯದ ಎದುರಿಗೆ ಕುಳಿತುಕೊಂಡಿದ್ದ ಮುಸಲ್ಮಾನ ಯುವಕನು ದೇವಾಲಯಕ್ಕೆ ಹೋಗುವ ಯುವತಿಯನ್ನು ಚುಡಾಯಿಸಿದ ಬಗ್ಗೆ ಪ್ರಶ್ನಿಸಲು ಹೋದ ವಿಶ್ವ ಹಿಂದು ಪರಿಷತ್ತಿನ ಸ್ಥಳೀಯ ಮುಖಂಡ ಸತವೀರ ಸಹಾರಣರವರ ಮೇಲೆ ಕಬ್ಬಿಣದ ಸಲಾಕೆಯಿಂದ ದಾಳಿ ಮಾಡಿದ್ದರಿಂದ ಸತವೀರರವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೊಹಾಲಿ (ಪಂಜಾಬ) ಗ್ರೆನೇಡ ದಾಳಿ ಪ್ರಕರಣ ಖಲಿಸ್ತಾನಿ ಭಯೋತ್ಪಾದಕನ ಬಂಧನ

ಇಲ್ಲಿನ ಪಂಜಾಬ ಪೊಲೀಸರ ಗುಪ್ತಚರ ಇಲಾಖೆಯ ಕಚೇರಿಯಲ್ಲಿ ರಾಕೆಟ ಲಾಂಚರ ಮೂಲಕ ಗ್ರೆನೇಡ ಎಸೆದ ಆರೋಪದ ಮೆಲೆ ಖಲಿಸ್ತಾನಿ ಉಗ್ರ ನಿಶಾನ ಸಿಂಗನನ್ನು ಪೊಲೀಸರು ಬಂಧಿಸಿದ್ದಾರೆ. ಆತನಿಂದ ‘ರಾಕೆಟ ಪ್ರೊಪೆಲ್ಡ ಗ್ರೆನೇಡ ಲಾಂಚರ’ನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ಹನುಮಾನ ದೇವಸ್ಥಾನದ ಮೇಲಿನ ಧ್ವನಿವರ್ಧಕ ತೆರವುಗೊಳಿಸುವುದಕ್ಕೆ ಮುಸಲ್ಮಾನ ಗೂಂಡಾನಿಂದ ವಿಶ್ವಹಿಂದೂ ಪರಿಷತ್ತಿನ ಕಾರ್ಯಕರ್ತನ ಕೊಲೆ ಮಾಡುವ ಬೆದರಿಕೆ !

ಹನುಮಾನ ದೇವಸ್ಥಾನದ ಮೇಲಿನ ಧ್ವನಿವರ್ಧಕ ತೆರವುಗೊಳಿಸುವುದಕ್ಕೆ ವಿಶ್ವಹಿಂದೂ ಪರಿಷತ್ತಿನ ಕಾರ್ಯಕರ್ತ ಮಹೇಂದ್ರ ಮಾಲಿ ಇವರಿಗೆ ಕೊಲೆ ಬೆದರಿಕೆ ನೀಡಿರುವ ಪ್ರಕರಣದಲ್ಲಿ ಪೊಲೀಸರು ಸಿರಾಜ್ ಅಲಿಯಾಸ್ ಸಿರೋ ಡಾನ್ ಎಂಬವನನ್ನು ಬಂಧಿಸಿದ್ದಾರೆ.

ದೆಹಲಿಯಲ್ಲಿ ಚಿಕ್ಕಮಕ್ಕಳ ಜಗಳದ ಕಾರಣ ಮತಾಂಧರಿಂದ ಹಿಂದೂಗಳ ಮೇಲೆ ದಾಳಿ

ಇಲ್ಲಿಯ ವೆಲ್ಕಮ್ ಭಾಗದಲ್ಲಿ ಚಿಕ್ಕಮಕ್ಕಳ ಜಗಳದ ಕಾರಣ ಮತಾಂಧರಿಂದ ಹಿಂದೂಗಳ ಮೇಲೆ ದಾಳಿ ನಡೆದಿದೆ. ಪೊಲೀಸರು ಈ ಪ್ರಕರಣದಲ್ಲಿ ೩ ಜನರನ್ನು ಬಂಧಿಸಿದ್ದಾರೆ ಹಾಗೂ ೩೭ ಜನರನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆ ಮೇ ೪ ರಂದು ರಾತ್ರಿ ನಡೆದಿದೆ.

ಕೇರಳದಲ್ಲಿ ಸಂಘ ಕಾರ್ಯಕರ್ತನ ಹತ್ಯೆಯ ಪ್ರಕರಣದಲ್ಲಿ ಪಿ.ಎಫ್.ಐ.ಯ ೪ ಜನರ ಬಂಧನ

ಜಿಲ್ಲೆಯಲ್ಲಿ ಕಳೆದ ತಿಂಗಳ ನಡೆದಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಒಬ್ಬ ನಾಯಕನ ಹತ್ಯೆ ಪ್ರಕರಣದಲ್ಲಿ ಇನ್ನೂ ೪ ಜನರನ್ನು ಬಂಧಿಸಲಾಗಿದೆ. ಆದ್ದರಿಂದ ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಬಂಧಿಸಲಾಗಿರುವ ಒಟ್ಟು ಆರೋಪಿಗಳ ಸಂಖ್ಯೆ ೨೦ ಕೆ ತಲುಪಿದೆ, ಎಂಬ ಮಾಹಿತಿ ಹೆಚ್ಚುವರಿ ಪೊಲೀಸ್ ಮಹಾ ಸಂಚಾಲಕರು (ಕಾನೂನು ಮತ್ತು ಸುವ್ಯವಸ್ಥೆ) ವಿಜಯ ಸಾಖರೆ ಇವರು ನೀಡಿದರು.

ಕರ್ನಾಲ (ಹರಿಯಾಣ)ದಲ್ಲಿ ೪ ಖಲಿಸ್ತಾನಿ ಭಯೋತ್ಪಾದಕರನ್ನು ದೊಡ್ಡ ಶಸ್ತ್ರಸಂಗ್ರಹದೊಂದಿಗೆ ಬಂಧಿಸಲಾಯಿತು !

ರಾಜಧಾನಿ ದೆಹಲಿಯಲ್ಲಿ ಬಾಂಬ್‌ಸ್ಫೋಟಗಳನ್ನು ನಡೆಸುವ ದೊಡ್ಡ ಷಡ್ಯಂತ್ರವನ್ನು ಧ್ವಂಸಗೊಳಿಸಲಾಯಿತು. ಇಲ್ಲಿ ಕರ್ನಾಲ ಮತ್ತು ಪಂಜಾಬ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಿಂದ ಗುರಪ್ರೀತ, ಅಮನದೀಪ, ಪರಮಿಂದರ ಮತ್ತು ಭೂಪಿಂದರ ಎಂಬ ೪ ಖಲಿಸ್ತಾನಿ ಭಯೋತ್ಪಾದಕರನ್ನು ಬಂಧಿಸಲಾಗಿದೆ.

ಉತ್ತರಪ್ರದೇಶದಲ್ಲಿ ಅಪ್ರಾಪ್ತ ಬಾಲಕಿಯ ಅಪಹರಣ ಮಾಡಿ ಸಾಮೂಹಿಕ ಬಲಾತ್ಕಾರ

ಇಲ್ಲಿನ ಓರ್ವ ಅಪ್ರಾಪ್ತ ವಯಸ್ಸಿನ ಹುಡುಗಿಯನ್ನು ಅಪಹರಿಸಿ ಆಕೆಯನ್ನು ಭೋಪಾಲಕ್ಕೆ ಒಯ್ದು ಆಕೆಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಲಾಯಿತು. ಅನಂತರ ಸಂತ್ರಸ್ತೆಯು ಈ ಬಗ್ಗೆ ದೂರ ನೀಡಲು ಪೊಲೀಸ ಠಾಣೆಗೆ ಹೋದಾಗ ಆಕೆಯ ಮೇಲೆ ಪೊಲೀಸ ಅಧಿಕಾರಿಯೂ ಬಲಾತ್ಕಾರ ಮಾಡಿದನು.

ಪೂಜೆ ಮಾಡಲು ತಾಜಮಹಲಿಗೆ ಹೋದ ಮಹಂತ ಪರಮಹಂಸ ದಾಸ ಪೊಲೀಸರ ವಶಕ್ಕೆ !

ಅಯೋಧ್ಯಾ ಛಾವಣಿಯ ತಪಸ್ವೀ ಮಹಂತ ಪರಮಹಂಸ ದಾಸರವರು ತಾಜಮಹಲಿನಲ್ಲಿ ಭಗವಾನ ಶಿವನ ಪೂಜೆ ಮಾಡುವುದಾಗಿ ಘೋಷಿಸಿದ್ದರು. ಮಹಂತ ಪರಮಹಂಸ ದಾಸರವರು ತಮ್ಮ ಶಿಷ್ಯರೊಂದಿಗೆ ತಾಜಮಹಲಿನ ದಿಕ್ಕಿನಲ್ಲಿ ಹೋಗುತ್ತಿರುವಾಗ ಪೊಲೀಸರು ಅವರನ್ನು ತಡೆದಿದ್ದು, ಈಗ ಅವರನ್ನು ಅಜ್ಞಾತಸ್ಥಳಕ್ಕೆ ಕೊಂಡೊಯ್ಯಲಾಗಿದೆ.

ಜೋಧಪುರದಲ್ಲಿ ಭಗವಾ ತೆಗೆದು ಹಸಿರು ಧ್ವಜ ಹಾಕಿದ್ದರಿಂದ ಹಿಂಸಾಚಾರ !

ಜಾಲೋರೀ ಗೇಟ್‌ ಚೌಕನಲ್ಲಿ ಮೇ ೨ರ ರಾತ್ರಿ ಭಗವಾ ಧ್ವಜವನ್ನು ತೆಗೆದು ಅಲ್ಲಿ ಹಸಿರು ಧ್ವಜ, ಹಾಗೆಯೇ ಧ್ವನಿಕ್ಷೇಪಕವನ್ನು ಹಾಕಿದ್ದರಿಂದ ಎರಡೂ ಬದಿಗಳಿಂದ ಪರಸ್ಪರ ದೊಡ್ಡ ಪ್ರಮಾಣದಲ್ಲಿ ಕಲ್ಲುತೂರಾಟವಾಯಿತು. ಇದರಲ್ಲಿ ಪೊಲೀಸ ಉಪಾಯುಕ್ತರು, ಪೊಲೀಸ ಠಾಣೆಯ ಪ್ರಮುಖರೊಂದಿಗೆ ಅನೇಕರು ಗಾಯಗೊಂಡಿದ್ದಾರೆ.

ಪಿಎಫಐ ಗುರಿಯಾಗಿಸಿತ್ತು ಬಿಜೆಪಿ ಮತ್ತು ರಾ.ಸ್ವ.ಸಂಘದ 100 ನಾಯಕರ ಹತ್ಯೆಯ ಸಂಚು

ಪಾಪ್ಯುಲರ ಫ್ರಂಟ ಆಫ ಇಂಡಿಯಾ (ಪಿಎಫಐ) ಕಾರ್ಯಕರ್ತರು ಹತ್ಯೆ ಮಾಡುವ ಉದ್ದೇಶದಿಂದ ತಯಾರಿಸಿರುವ ಒಂದು ಪಟ್ಟಿಯಲ್ಲಿ ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ 100 ಜನರ ಹೆಸರು ಇರುವ ಮಾಹಿತಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.