ಪೂಜೆ ಮಾಡಲು ತಾಜಮಹಲಿಗೆ ಹೋದ ಮಹಂತ ಪರಮಹಂಸ ದಾಸ ಪೊಲೀಸರ ವಶಕ್ಕೆ !

ಆಗರಾ (ಉತ್ತರಪ್ರದೇಶ) – ಅಯೋಧ್ಯಾ ಛಾವಣಿಯ ತಪಸ್ವೀ ಮಹಂತ ಪರಮಹಂಸ ದಾಸರವರು ತಾಜಮಹಲಿನಲ್ಲಿ ಭಗವಾನ ಶಿವನ ಪೂಜೆ ಮಾಡುವುದಾಗಿ ಘೋಷಿಸಿದ್ದರು. ಮಹಂತ ಪರಮಹಂಸ ದಾಸರವರು ತಮ್ಮ ಶಿಷ್ಯರೊಂದಿಗೆ ತಾಜಮಹಲಿನ ದಿಕ್ಕಿನಲ್ಲಿ ಹೋಗುತ್ತಿರುವಾಗ ಪೊಲೀಸರು ಅವರನ್ನು ತಡೆದಿದ್ದು, ಈಗ ಅವರನ್ನು ಅಜ್ಞಾತಸ್ಥಳಕ್ಕೆ ಕೊಂಡೊಯ್ಯಲಾಗಿದೆ. ಪೊಲೀಸರು ಈ ಪ್ರಕರಣದಲ್ಲಿ ಯಾವುದೇ ಹೇಳಿಕೆ ನೀಡಲು ನಿರಾಕರಿಸಿದರು. ‘ತಾಜಮಹಲ ಇದು ಭಗವಾನ ಶಿವನ ತೇಜೋಮಹಾಲಯವಾಗಿದೆ. ನಾನು ಇಲ್ಲಿ ಪೂಜೆ ಮಾಡಬೇಕು’, ಎಂದು ಮಹಂತರು ಹೇಳಿದರು.

ಈ ಹಿಂದೆ ಮಹಂತ ಪರಮಹಂಸ ದಾಸರು ಎಪ್ರಿಲ ೨೬ ೨೦೨೨ರಂದು ಆಗರಾಗೆ ಹೋಗಿದ್ದರು. ಅಲ್ಲಿ ಅವರಿಗೆ ನಿಯಮದ ವಿರುದ್ಧ ಪ್ರವೇಶವನ್ನು ತಡೆಯಲಾಯಿತು. ಕೇಸರಿ ವಸ್ತ್ರ ಹಾಗೂ ಧರ್ಮದಂಡದಿಂದ ತಾಜಮಹಲಿನ ಒಳಗೆ ಪ್ರವೇಶಿಸಲು ತಡೆಯಲಾಯಿತು ಎಂದು ಮಹಂತ ಪರಮಹಂಸದಾಸರು ಆರೋಪಿಸಿದ್ದರು. ಅಲ್ಲಿ ಉಪಸ್ಥಿತರಾಗಿದ್ದ ವಿಶಿಷ್ಟ ಸಮುದಾಯದ ಜನರ ಹೇಳಿಕೆಯ ಮೇರಿಗೆ ಸುರಕ್ಷದಳದ ಸೈನಿಕರು ನನ್ನೊಂದಿಗೆ ತಪ್ಪಾಗಿ ನಡೆದುಕೊಂಡರು ಎಂದು ಕೂಡ ಅವರು ಆರೋಪಿಸಿದ್ದರು.

ಸಂಪಾದಕೀಯ ನಿಲುವು

ತಾಜಮಹಲ ಹಿಂದೂಗಳ ಕಟ್ಟಡವಾಗಿದೆ ಎಂಬ ವಿಷಯವು ಅಸಂಖ್ಯಾತ ಪುರಾವೆಗಳಿಂದ ತಿಳಿದು ಬಂದಿದೆ. ಇಂತಹ ಪ್ರಕರಣಗಳನ್ನು ತಪ್ಪಿಸಬೇಕೆಂದರೆ, ಇಂತಹ ಕಟ್ಟಡಗಳ ನಿಜ ಸ್ವರೂಪವನ್ನು ಬೆಳಕಿಗೆ ತರಲು ಸರಕಾರವು ಪ್ರಯತ್ನಿಸಬೇಕು !