ತಿರುವನಂತಪುರಂ (ಕೇರಳ) – ಪಾಪ್ಯುಲರ ಫ್ರಂಟ ಆಫ ಇಂಡಿಯಾ (ಪಿಎಫಐ) ಕಾರ್ಯಕರ್ತರು ಹತ್ಯೆ ಮಾಡುವ ಉದ್ದೇಶದಿಂದ ತಯಾರಿಸಿರುವ ಒಂದು ಪಟ್ಟಿಯಲ್ಲಿ ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ 100 ಜನರ ಹೆಸರು ಇರುವ ಮಾಹಿತಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕೆಲ ದಿನಗಳ ಹಿಂದೆ ರಾಜ್ಯದಲ್ಲಿ ಶ್ರೀನಿವಾಸನ್ ಎಂಬ ಕಾರ್ಯಕರ್ತನ ಹತ್ಯೆ ಪ್ರಕರಣದ ತನಿಖೆ ನಡೆಸಿದಾಗ ಈ ಮಾಹಿತಿಯು ಬೆಳಕಿಗೆ ಬಂದಿದೆ. ಈ ಹತ್ಯೆಗೆ ಸಂಬಂಧಿಸಿದಂತೆ ಪಿಎಫಐನ ಕೆಲವು ಕಾರ್ಯಕರ್ತರನ್ನು ಬಂಧಿಸಲಾಗಿದೆ.
PFI terrorists prepared a list of 100 RSS leaders before targeting Sreenivasan for murder https://t.co/sHDEnDkb86
— HinduPost (@hindupost) April 29, 2022
ಈ ಸೂಚಿಯಲ್ಲಿ ಬಿಜೆಪಿಯ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ. ಕೃಷ್ಣಕುಮಾರ, ಬಿಜೆಪಿಯ ಮುಖಂಡ ಪ್ರಶಾಂತ ಶಿವನ ಮತ್ತಿತರರಿದ್ದರು. ಈ ನಾಯಕರ ಹತ್ಯೆಯ ಹಿಂದಿನ ಉದ್ದೇಶ ಪಿಎಫಐದ ಸದಸ್ಯ ಜುಬೇರ ಹತ್ಯೆಗೆ ಸೇಡು ತೀರಿಸಿಕೊಳ್ಳುವುದಾಗಿದೆ. ಈ ಸೂಚಿಯ ಪ್ರಕಾರವೇ ಶ್ರೀನಿವಾಸನ ಹತ್ಯೆ ನಡೆದಿದೆ. ಇದು ಈ ಸೂಚಿಯಲ್ಲಿ ಮೊದಲನೆಯ ಹತ್ಯೆಯಾಗಿತ್ತು ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಸಂಪಾದಕೀಯ ನಿಲುವುಕೇಂದ್ರ ಸರಕಾರ ಈಗಲಾದರೂ ಈ ಸಂಘಟನೆಯನ್ನು ನಿಷೇಧಿಸಲಿದೆಯೇ? |