ಅಜ್ಮೇರ ದರ್ಗಾದ ಸೇವಕ ಸಲಮಾನ ಚಿಶ್ತಿಯ ಬಂಧನ

ಇಲ್ಲಿಯ ಅಜ್ಮೇರ ದರ್ಗಾದ ಖಾದಿಮ (ಸೇವಕ) ಸಲ್ಮಾನ ಚಿಶ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. `ನೂಪುರ ಶರ್ಮಾರವರ ಶಿರಚ್ಛೇದ ಮಾಡುವವರಿಗೆ ಮನೆ ಕೊಡುತ್ತೇನೆ’, ಎಂದು ಘೋಷಣೆ ಮಾಡುವ ವೀಡಿಯೋ ಸಲ್ಮಾನ ಪ್ರಸಾರ ಮಾಡಿದ್ದಾನೆ.

ಆಗ್ರಾದ ಜಾಮಾ ಮಸೀದಿಯ ಉತ್ಖನನ ಕೈಕೊಳ್ಳಬೇಕು!- ಪ್ರಯಾಗರಾಜ ಉಚ್ಚ ನ್ಯಾಯಾಲಯದಲ್ಲಿ ಮನವಿ

ಪುರಾತತ್ವ ವಿಭಾಗವು ಆಗ್ರಾದ ಜಾಮಾ ಮಸೀದಿಯ ಉತ್ಖನನ ಮಾಡಬೇಕು ಎಂಬ ಹೊಸ ಮನವಿಯೊಂದು ಅಲಹಾಬಾದ ಉಚ್ಚ ನ್ಯಾಯಾಲಯದ ನ್ಯಾಯವಾದಿ ವರುಣ ಕುಮಾರ ಇವರು ದಾಖಲಿಸಿದ್ದಾರೆ.

ಭ್ರಷ್ಟಾಚಾರ ನಿಗ್ರಹ ದಳದ ಭ್ರಷ್ಟಾಚಾರದ ಕಾರಣ ನನಗೆ ವರ್ಗಾವಣೆಯ ಬೆದರಿಕೆ!

ಕರ್ನಾಟಕ ಉಚ್ಚನ್ಯಾಯಲಯದ ನ್ಯಾಯಮೂರ್ತಿ ಎಚ.ಪಿ. ಸಂದೇಶ ಪ್ರಕರಣವೊಂದರ ವಿಚಾರಣೆ ವೇಳೆ ‘ಭ್ರಷ್ಟಾಚಾರ ನಿಗ್ರಹ ದಳದ ಕಾರ್ಯದ ಬಗ್ಗೆ ಟೀಕೆ ಮಾಡಿದಕ್ಕೆ ದಳದ ಹೆಚ್ಚುವರಿ ಪೊಲೀಸ ಮಹಾ ನಿರ್ದೇಶಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ

‘ಭಾರತದ ಸಂವಿಧಾನವನ್ನು ಹೆಚ್ಚು ಹೆಚ್ಚು ಜನರನ್ನು ದರೋಡೆ ಮಾಡುವ ರೀತಿಯಲ್ಲಿ ಬರೆಯಲಾಗಿದೆ !’ (ಅಂತೆ)

ಮಾನವೀಯತೆಯ ಆರಂಭದಿಂದಲೂ ಶೋಷಣೆ ನಡೆಯುತ್ತಿದೆ. ಸರಕಾರದ ಆಡಳಿತವು ಈ ಪ್ರಕ್ರಿಯೆಗೆ ಬೆಂಬಲ ನೀಡುತ್ತಿರುವುದು ಸ್ವಾಭಾವಿಕವಾಗಿದೆ. ನಮ್ಮಲ್ಲಿ ಸುಸಜ್ಜಿತ ಸಂವಿಧಾನವಿದೆ ಎಂದು ಎಲ್ಲ ಕಡೆಗಳಲ್ಲಿ ಹೇಳಲಾಗುತ್ತದೆ; ಆದರೆ ದೇಶದ ಸಂವಿಧಾನವನ್ನು ಹೆಚ್ಚು ಹೆಚ್ಚು ಜನರನ್ನು ಲೂಟಿ ಮಾಡುವ ರೀತಿಯಲ್ಲಿ ಬರೆಯಲಾಗಿದೆ ಎಂದು ನಾನು ಹೇಳುತ್ತೇನೆ

ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ವಿರುದ್ಧ ಮಹಾಭಿಯೋಗಕ್ಕೆ ಸಹಿ ಅಭಿಯಾನ !

‘ಉದಯಪುರ ಘಟನೆಗೆ (ಕನ್ಹೈಯ್ಯಾಲಾಲ್ ಹತ್ಯೆ) ನೂಪುರ್ ಶರ್ಮಾರವರೇ ಕಾರಣ’ ಎಂದು ಹೇಳಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ಪಾರಡಿವಾಲಾ ಅವರ ಮೇಲೆ ಮಹಾಭಿಯೋಗ ನಡೆಸುವಂತೆ ಒತ್ತಾಯಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಸಹಿ ಅಭಿಯಾನವನ್ನು ಪ್ರಾರಂಭಿಸಲಾಗುತ್ತಿದೆ.

ಲೀನಾ ಮಣಿಮೇಕಲೈ ವಿರುದ್ಧ ದೆಹಲಿ ಪೊಲೀಸ್ ಆಯುಕ್ತರಲ್ಲಿ ದೂರು

ಶ್ರೀ ಕಾಳಿಮಾತೆಗೆ ಅವಮಾನ ಮಾಡಿದ ಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ವಿರುದ್ಧ ದೆಹಲಿ ಪೊಲೀಸ್ ಆಯುಕ್ತರಲ್ಲಿ ಕ್ರಿಮಿನಲ್ ದೂರು ದಾಖಲಿಸಲಾಗಿದೆ. ಹಿಂದೂಗಳ ಆರಾಧ್ಯ ದೇವತೆಯಾಗಿರುವ ಶ್ರೀ ಮಹಾಕಾಳಿ ಮಾತೆಗೆ ಅವಮಾನ ಮಾಡಿರುವ ಲೀನಾ ಮಣಿಮೇಕಲೈ ಹಾಗೂ ಆಶಾ ಪೊನ್ನಾಚನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯವಾದಿ ಅಮಿತಾ ಸಚ್‌ದೇವ್ ಇವರು ದೂರಿನಲ್ಲಿ ಆಗ್ರಹಿಸಿದ್ದಾರೆ.

‘ಕಾಲಿ’ ಸಾಕ್ಷ್ಯಚಿತ್ರದಲ್ಲಿನ ಭಿತ್ತಿಪತ್ರದ ವಿರುದ್ಧ ಹಿಂದೂ ಜನಜಾಗೃತಿ ಸಮಿತಿಯಿಂದ ಆನ್‌ಲೈನ್ ಸಹಿ ಅಭಿಯಾನ

ಹಿಂದೂ ಜನಜಾಗೃತಿ ಸಮಿತಿಯು ‘ಕಾಲಿ’ ಸಾಕ್ಷ್ಯಚಿತ್ರದ ಭಿತ್ತಿಪತ್ರ ಮತ್ತು ಅದರ ನಿರ್ಮಾಪಕ ಲೀನಾ ಮಣಿಮೇಕಲೈ ವಿರುದ್ಧ ಕ್ರಮ ಕೈಗೊಳ್ಳುವಂತೆ ಆನ್‌ಲೈನ್ ಸಹಿ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದಾದ ಬಳಿಕ ಕೇಂದ್ರ ಸರಕಾರಕ್ಕೆ ಮನವಿ ನೀಡಲಾಗುವುದು.

ಕರ್ನಾಟಕದ ಹೆಚ್ಚುವರಿ ಪೊಲೀಸ ಮಹಾನಿರ್ದೇಶಕರಾದ ಅಮೃತ ಪೌಲ ಇವರ ಬಂಧನ

ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಹೆಚ್ಚುವರಿ ಪೊಲೀಸ ಮಹಾನಿರ್ದೇಶಕ ಹುದ್ದೆಯಲ್ಲಿರುವ ವ್ಯಕ್ತಿಯ ಬಂಧನವಾಗಿರುವ ಘಟನೆ ನಡೆದಿದೆ. ಪೊಲೀಸ ಉಪನಿರೀಕ್ಷಕ ನೇಮಕಾತಿಗೆ ಸಂಬಂಧಿಸಿದ ಹಗರಣದಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮೃತಪೌಲ ಇವರನ್ನು ಬಂಧಿಸಲಾಗಿದೆ.

ಕೌಶಾಂಬಿ (ಉತ್ತರಪ್ರದೇಶ) ಇಲ್ಲಿ ಮುಸಲ್ಮಾನನು ಹಿಂದೂ ಯುವತಿಯ ಮದರಸಾದಲ್ಲಿ ಮತಾಂತರಗೊಳಿಸಿ ನಿಕಾಹ ಮಾಡಿದನು !

ಕೌಶಾಂಬಿ ಜಿಲ್ಲೆಯ ಸರಾಯ ಅಕಿಲ ಗ್ರಾಮದಲ್ಲಿ ‘ಲವ್ ಜಿಹಾದ’ ಪ್ರಕರಣ ಬೆಳಕಿಗೆ ಬಂದಿದೆ. ಜೂನ ೨೭ ರಂದು ಓರ್ವ ಮುಸಲ್ಮಾನನು ಹಿಂದೂ ಯುವತಿಯೊಬ್ಬಳ ಅಪಹರಣ ಮಾಡಿದನು. ಯುವತಿಯ ಕುಟುಂಬದವರು ಅವಳು ನಾಪತ್ತೆಯಾಗಿರುವುದು ಗಮನಕ್ಕೆ ಬರುತ್ತಲೇ, ಅವರು ಪೊಲೀಸರಲ್ಲಿ ದೂರು ದಾಖಲಿಸಿದರು.

ಕನ್ಹಯ್ಯಾಲಾಲನ ಹತ್ಯೆಯನ್ನು ವಿರೋಧಿಸಿದ್ದರಿಂದ ವಡೋದರಾ (ಗುಜರಾತ)ನ ಭಾಜಪ ಮುಖಂಡನಿಗೆ ಮುಸಲ್ಮಾನರಿಂದ ಹತ್ಯೆಯ ಬೆದರಿಕೆ

ಇಲ್ಲಿಯ ಭಾಜಪದ ತಾಲೂಕಾಧ್ಯಕ್ಷರಾಗಿರುವ ನೀಲೇಶ ಸಿಂಹ ಜಾಧವ ಇವರಿಗೆ ಕನ್ಹಯ್ಯಾಲಾಲ ಇವರಂತೆ ಹತ್ಯೆ ಮಾಡಲಾಗುವುದು, ಎಂದು ಬೆದರಿಕೆ ನೀಡಲಾಗಿದೆ. ಈ ಪ್ರಕರಣದಲ್ಲಿ ಜಾಧವ ಇವರು ಪೊಲಿಸರಲ್ಲಿ ದೂರು ದಾಖಲಿಸಿದ್ದಾರೆ.