ವಡೋದರಾ (ಗುಜರಾತ) – ಇಲ್ಲಿಯ ಭಾಜಪದ ತಾಲೂಕಾಧ್ಯಕ್ಷರಾಗಿರುವ ನೀಲೇಶ ಸಿಂಹ ಜಾಧವ ಇವರಿಗೆ ಕನ್ಹಯ್ಯಾಲಾಲ ಇವರಂತೆ ಹತ್ಯೆ ಮಾಡಲಾಗುವುದು, ಎಂದು ಬೆದರಿಕೆ ನೀಡಲಾಗಿದೆ. ಈ ಪ್ರಕರಣದಲ್ಲಿ ಜಾಧವ ಇವರು ಪೊಲಿಸರಲ್ಲಿ ದೂರು ದಾಖಲಿಸಿದ್ದಾರೆ. ಜಾಧವರ ಇವರು ಕನ್ಹಯ್ಯಾಲಾಲ ಇವರ ಹತ್ಯೆಯ ಬಳಿಕ ಫೇಸಬುಕ ಮೇಲೆ ಪೋಸ್ಟ ಮಾಡಿ ‘ಇಂತಹ ಘಟನೆ ತಾಲಿಬಾನಿ ಅಫಘಾನಿಸ್ಥಾನ ಅಥವಾ ಪಾಕಿಸ್ತಾನದಲ್ಲಿ ಜರುಗುತ್ತದೆ. ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು, ಅಂದರೆ ಇತರರಿಗೆ ಹೀಗೆ ಮಾಡುವ ಧೈರ್ಯ ಬರಲಾರದು’, ಎಂದು ಹೇಳಿದ್ದರು.
Gujarat: BJP leader threatened with ‘Kanhaiya Lal like fate’ by one Abdul for condemning his killing, police initiates investigation (@MeghalHparmar reports) https://t.co/MsTKONjztQ
— OpIndia.com (@OpIndia_com) July 4, 2022
೧. ಜಾಧವ ಇವರು, ಹತ್ಯೆ ಮಾಡುವವರಿಗೆ ಜೀವಾವಧಿ ಶಿಕ್ಷೆಯಾಗಬಹುದು ಇದರ ಅರಿವು ಅವರಿಗೆ ಇತ್ತು; ಆದರೆ ಈ ಹತ್ಯೆಯ ಬದಲು ಅವರ ಕುಟುಂಬದವರಿಗೆ ಕೋಟ್ಯಾಂತರ ರೂಪಾಯಿಗಳು ಸಿಕ್ಕಿರಬಹುದು ಮತ್ತು ಅವರೆಲ್ಲರು ಕತಾರ, ಕುವೈತ, ಸೌದಿ ಅರೇಬಿಯಾ ಈ ದೇಶಗಳಿಂದ ಬಂದಿರಬಹುದು. ಆದ್ದರಿಂದ ಕೇಂದ್ರೀಯ ತನಿಖಾ ದಳವು ಆರೋಪಿಯ ತಂದೆ, ತಾಯಿ, ಸಹೋದರ, ಸಹೋದರಿ, ಸಂಬಂಧಿಕರು, ಅಕ್ಕಪಕ್ಕದವರು ಮತ್ತು ಮೌಲವಿ (ಇಸ್ಲಾಂ ಧಾರ್ಮಿಕ ಮುಖಂಡ) ಇವರನ್ನು ಬಂಧಿಸಬೇಕು. ಒಟ್ಟಾರೆ ಈ ಹಣವನ್ನು ಅವರು ಉಪಯೋಗಿಸಲಾರರು. ಇವರೆಲ್ಲರ ಆಸ್ತಿಯನ್ನು ಕೂಡ ವಶಪಡಿಸಿಕೊಳ್ಳಬೇಕು. ಈ ಎಲ್ಲ ಜಿಹಾದಿಗಳು ಸ್ವರ್ಗದಲ್ಲಿ ಅಪ್ಸರೆಯನ್ನು ಪಡೆಯಲು ಅಲ್ಲ ಬದಲಾಗಿ ಹಣಕ್ಕಾಗಿ ಹತ್ಯೆ ಮಾಡುತ್ತಾರೆ ಎಂದು ಬರೆದಿದ್ದರು.
೨. ಈ ಪೋಸ್ಟ ಕುರಿತು ಅಬ್ದುಲ ಸುಬುರ ಚೌಧರಿಯು ಅಶ್ಲೀಲ ಭಾಷೆಯಲ್ಲಿ ಉತ್ತರಿಸುತ್ತಾ, ಜಾಧವರ ಅವಸ್ಥೆ ಕನ್ಹಯ್ಯಾಲಾಲನಂತೆ ಆಗಲಿದೆ ಎಂದು ಬೆದರಿಕೆ ನೀಡಿದ್ದಾನೆ. ಇವನ ವಿರುದ್ಧ ದೂರು ದಾಖಲಿಸಿದ ಬಳಿಕ ಈ ಖಾತೆಯನ್ನು ಡಿಲಿಟ(ಸ್ಥಗಿತ)ಗೊಳಿಸಲಾಗಿದೆ.
ಸನೆಂಪಾದಕೀಯ ನಿಲುವುದೇಶದಲ್ಲಿ ಎಲ್ಲೆಡೆಯ ಹಿಂದೂಗಳಿಗೆ ಈ ರೀತಿಯ ಬೆದರಿಕೆಗಳು ಬರುತ್ತಿವೆ. ಕಟ್ಟರವಾದಿ ಮುಸಲ್ಮಾನರು ಈಗ ಹಿಂದೂಗಳ ವಿರುದ್ಧ ಧರ್ಮಯುದ್ಧವನ್ನೇ ಸಾರಿದ್ಧಾರೆಯೇ ?, ಎಂದು ಅನಿಸುತ್ತಿದೆ. ಇದರ ಕಡೆಗೆ ಕೇಂದ್ರ ಸರಕಾರವು ಗಂಭೀರತೆಯಿಂದ ಪರಿಶೀಲಿಸಿ ಆಳದ ವರೆಗೆ ಹೋಗಿ ಕಠಿಣ ಕ್ರಮ ಕೈಕೊಳ್ಳಬೇಕಾಗಿದೆ ! |