ಆಗ್ರಾದ ಜಾಮಾ ಮಸೀದಿಯ ಉತ್ಖನನ ಕೈಕೊಳ್ಳಬೇಕು!- ಪ್ರಯಾಗರಾಜ ಉಚ್ಚ ನ್ಯಾಯಾಲಯದಲ್ಲಿ ಮನವಿ

ಪ್ರಯಾಗರಾಜ (ಉತ್ತರಪ್ರದೇಶ) – ಪುರಾತತ್ವ ವಿಭಾಗವು ಆಗ್ರಾದ ಜಾಮಾ ಮಸೀದಿಯ ಉತ್ಖನನ ಮಾಡಬೇಕು ಎಂಬ ಹೊಸ ಮನವಿಯೊಂದು ಅಲಹಾಬಾದ ಉಚ್ಚ ನ್ಯಾಯಾಲಯದ ನ್ಯಾಯವಾದಿ ವರುಣ ಕುಮಾರ ಇವರು ದಾಖಲಿಸಿದ್ದಾರೆ. ಅವರು ಹೇಳುವುದೇನೆಂದರೆ, ‘ಈ ಮಸೀದಿಯ ಮೆಟ್ಟಿಲುಗಳ ಕೆಳಗೆ ಠಾಕುರ ಕೇಶವ ದೇವಜಿ ಇವರ ಮಂದಿರದ ಅವಶೇಷಗಳು ದೊರೆಯುವ ಸಾಧ್ಯತೆಯಿದೆ’. ನ್ಯಾಯವಾದಿ ವರುಣ ಕುಮಾರ ಇವರು ಈ ಹಿಂದೆಯೂ ಇದೇ ರೀತಿಯ ದೂರನ್ನು ಮಥುರಾ ನ್ಯಾಯಾಲಯದಲ್ಲಿಯೂ ದಾಖಲಿಸಿದ್ದರು; ಆದರೆ ಇಲ್ಲಿಯವರೆಗೆ ಅದರ ಆಲಿಸುವಿಕೆ ಆಗಿರುವುದಿಲ್ಲ.

ಈ ವಿಷಯದಲ್ಲಿ ಜಾಮಾ ಮಸೀದಿಯ ಇಮಾಮುದ್ದೀನ ಮಾತನಾಡುತ್ತಾ, ಈ ಮಸೀದಿಯನ್ನು ಶಹಾಜಹಾನನ ಪುತ್ರಿ ಜಹಾಂ ಆರಾ ಕಟ್ಟಿಸಿದ್ದಳು. ಅವಳ ಮದುವೆಯ ವೆಚ್ಚದಲ್ಲಿ ಉಳಿದ ಹಣದಿಂದ ಈ ಮಸೀದಿ ನಿರ್ಮಿಸಿದ್ದಳು. ಈ ಮಸೀದಿಯ ಮೆಟ್ಟಿಲುಗಳ ಕೆಳಗೆ ಅವಶೇಷಗಳು ದೊರೆಯುವ ಸಾಧ್ಯತೆಯಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಂಪೂರ್ಣ ಮಸೀದಿಯಲ್ಲಿ ಉತ್ಖನನ ಮಾಡುವುದು ಉಚಿತವಲ್ಲ ಎಂದು ಪ್ರತಿಕ್ರಯಿಸಿದ್ದಾರೆ.

ಸಂಪಾದಕೀಯ ನಿಲುವು

ವಾಸ್ತವಿಕವಾಗಿ ಹಿಂದೂಗಳು ಇಂತಹ ಮನವಿ ದಾಖಲಿಸುವ ಸಮಯ ಬರಬಾರದು. ಕೇಂದ್ರ ಸರಕಾರವೇ ಭಾರತದಾದ್ಯಂತ ವಿವಾದಿತ ಮಸೀದಿಗಳ ನಿರೀಕ್ಷಣೆ ಮಾಡಿ ಸತ್ಯ ಬಹಿರಂಗಗೊಳಿಸಲು ಹೆಜ್ಜೆಯಿಡುವುದು ಆವಶ್ಯಕವಾಗಿದೆ!