‘ಕಾಲಿ’ ಸಾಕ್ಷ್ಯಚಿತ್ರದಲ್ಲಿನ ಭಿತ್ತಿಪತ್ರದ ವಿರುದ್ಧ ಹಿಂದೂ ಜನಜಾಗೃತಿ ಸಮಿತಿಯಿಂದ ಆನ್‌ಲೈನ್ ಸಹಿ ಅಭಿಯಾನ

೨೪ ಗಂಟೆಗಳಲ್ಲಿ ೪ ಸಾವಿರ ಹಿಂದೂಗಳಿಂದ ಸಹಿ

(ಈ ಚಿತ್ರ ಪ್ರಕಟಿಸುವುದರ ಹಿಂದೆ ಯಾದ ಧಾರ್ಮಿಕ ಭಾವನೆಗಳಿಗೆ ನೋವನ್ನು ಉಂಟುಮಾಡುವುದಾಗಿರದೆ ನಿಜ ಸ್ಥಿತಿ ತಿಳಿಸುವುದಾಗಿದೆ)

ಮುಂಬಯಿ : ಹಿಂದೂ ಜನಜಾಗೃತಿ ಸಮಿತಿಯು ‘ಕಾಲಿ’ ಸಾಕ್ಷ್ಯಚಿತ್ರದ ಭಿತ್ತಿಪತ್ರ ಮತ್ತು ಅದರ ನಿರ್ಮಾಪಕ ಲೀನಾ ಮಣಿಮೇಕಲೈ ವಿರುದ್ಧ ಕ್ರಮ ಕೈಗೊಳ್ಳುವಂತೆ ಆನ್‌ಲೈನ್ ಸಹಿ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದಾದ ಬಳಿಕ ಕೇಂದ್ರ ಸರಕಾರಕ್ಕೆ ಮನವಿ ನೀಡಲಾಗುವುದು. ಈ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಕೇವಲ ೨೪ ಗಂಟೆಗಳಲ್ಲಿ ೪ ಸಾವಿರ ಹಿಂದೂಗಳು ಸಹಿ ಹಾಕಿದ್ದಾರೆ. ಹೆಚ್ಚು ಹೆಚ್ಚು ಹಿಂದೂಗಳು ಸಹಿ ಹಾಕಬೇಕು ಎಂದು ಸಮಿತಿಯಿಂದ ಮನವಿ ಮಾಡಲಾಗಿದೆ.