ಲೀನಾ ಮಣಿಮೇಕಲೈ ವಿರುದ್ಧ ದೆಹಲಿ ಪೊಲೀಸ್ ಆಯುಕ್ತರಲ್ಲಿ ದೂರು

ಸಾಕ್ಷ್ಯಚಿತ್ರದ ಮೂಲಕ ಶ್ರೀ ಕಾಳಿಮಾತೆಗೆ ಅವಮಾನ ಮಾಡಿದ ಪ್ರಕರಣ

ಹೊಸ ದೆಹಲಿ : ಶ್ರೀ ಕಾಳಿಮಾತೆಗೆ ಅವಮಾನ ಮಾಡಿದ ಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ವಿರುದ್ಧ ದೆಹಲಿ ಪೊಲೀಸ್ ಆಯುಕ್ತರಲ್ಲಿ ಕ್ರಿಮಿನಲ್ ದೂರು ದಾಖಲಿಸಲಾಗಿದೆ. ಹಿಂದೂಗಳ ಆರಾಧ್ಯ ದೇವತೆಯಾಗಿರುವ ಶ್ರೀ ಮಹಾಕಾಳಿ ಮಾತೆಗೆ ಅವಮಾನ ಮಾಡಿರುವ ಲೀನಾ ಮಣಿಮೇಕಲೈ ಹಾಗೂ ಆಶಾ ಪೊನ್ನಾಚನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯವಾದಿ ಅಮಿತಾ ಸಚ್‌ದೇವ್ ಇವರು ದೂರಿನಲ್ಲಿ ಆಗ್ರಹಿಸಿದ್ದಾರೆ.