ಅಜ್ಮೇರ ದರ್ಗಾದ ಸೇವಕ ಸಲಮಾನ ಚಿಶ್ತಿಯ ಬಂಧನ

  • ನೂಪುರ ಶರ್ಮಾರ ಶಿರಚ್ಛೇದ ಮಾಡುವವನಿಗೆ ಮನೆ ನೀಡುವ ಘೋಷಣೆ

  • ಬೆದರಿಕೆ ಒಡ್ಡಿದಾಗ ಸಲಮಾನ ನಶೆಯಲ್ಲಿದ್ದ ಎಂದು ಹೇಳಿದ ಪೊಲೀಸರು

ಅಜ್ಮೇರ (ರಾಜಸ್ಥಾನ) – ಇಲ್ಲಿಯ ಅಜ್ಮೇರ ದರ್ಗಾದ ಖಾದಿಮ (ಸೇವಕ) ಸಲ್ಮಾನ ಚಿಶ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. `ನೂಪುರ ಶರ್ಮಾರವರ ಶಿರಚ್ಛೇದ ಮಾಡುವವರಿಗೆ ಮನೆ ಕೊಡುತ್ತೇನೆ’, ಎಂದು ಘೋಷಣೆ ಮಾಡುವ ವೀಡಿಯೋ ಸಲ್ಮಾನ ಪ್ರಸಾರ ಮಾಡಿದ್ದಾನೆ. ಸಲ್ಮಾನ ಚಿಶ್ತಿಯ ಮೇಲೆ ಈ ಹಿಂದೆಯೂ ಅನೇಕ ಅಪರಾಧಗಳು ದಾಖಲಾಗಿವೆ ಎಂದು ಪೊಲಿಸರು ಹೇಳಿದ್ದಾರೆ. (ಅಜ್ಮೇರ ದರ್ಗಾ ಸೇವಕರು ಅಪರಾಧ ವೃತ್ತಿಯವರಾಗಿದ್ದಾರೆ ಎನ್ನುವುದು ಇದರಿಂದ ಗಮನಕ್ಕೆ ಬರುತ್ತದೆ. ಈ ವಿಷಯದಲ್ಲಿ ಜಾತ್ಯತೀತವಾದಿಗಳು ಬಾಯಿ ತೆರೆಯುವರೇ?- ಸಂಪಾದಕರು) `ಸಲ್ಮಾನ ಚಿಶ್ತಿಯವರು ಈ ಹೇಳಿಕೆ ನೀಡುವಾಗ ನಶೆಯಲ್ಲಿದ್ದರು’, ಎಂದು ಪೊಲಿಸರು ಅಭಿಪ್ರಾಯಪಟ್ಟಿದ್ದಾರೆ. (ಅಜ್ಮೇರ ದರ್ಗಾದ ಸೇವಕರು ಮದ್ಯ ಕುಡಿಯುತ್ತಾರೆ, ಎಂದು ಪೊಲಿಸರಿಗೆ ಹೇಳುವುದಿದೆಯೇ? ಇದನ್ನು ಮುಸಲ್ಮಾನರು ಮತ್ತು ಅಜ್ಮೇರ ದರ್ಗಾ ಸಂಚಾಲಕರು ಒಪ್ಪುತ್ತಾರೆಯೇ? – ಸಂಪಾದಕರು)

ಸಂಪಾದಕೀಯ ನಿಲುವು

ಅಂದರೆ ‘ನಶೆಯೇರಿದರೆ ಬೆದರಿಕೆ ಹಾಕಬಹುದು’, ಎಂದು ಪೊಲಿಸರಿಗೆ ಹೇಳುವುದಿದೆಯೇ? ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರ ಇರುವುದರಿಂದ ಅವರು ಸಲ್ಮಾನ ಚಿಶ್ತಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನುವುದು ಗಮನಕ್ಕೆ ಬರುತ್ತದೆ. ಹಿಂದೂಗಳು ಈ ಪ್ರಕರಣವನ್ನು ಬೆಂಬೆತ್ತಿ ಚಿಶ್ತಿಗೆ ಕಠಿಣ ಶಿಕ್ಷೆಯಾಗಲು ಪ್ರಯತ್ನಿಸಬೇಕು!

ಅಜ್ಮೇರ ದರ್ಗಾಕ್ಕೆ ಬೃಹತ ಪ್ರಮಾಣದಲ್ಲಿ ಹಿಂದೂಗಳು ಹೋಗುತ್ತಾರೆ. ಇಂತಹ ದರ್ಗಾದ ಸೇವಕರು ಎಂತಹ ಮಾನಸಿಕತೆಯವರಾಗಿದ್ದಾರೆ, ಎನ್ನುವುದು ಹಿಂದೂಗಳು ಗಮನಕ್ಕೆ ತೆಗೆದುಕೊಳ್ಳುವ ದಿನವೇ ಸುದಿನ!