‘ಭಾರತದ ಸಂವಿಧಾನವನ್ನು ಹೆಚ್ಚು ಹೆಚ್ಚು ಜನರನ್ನು ದರೋಡೆ ಮಾಡುವ ರೀತಿಯಲ್ಲಿ ಬರೆಯಲಾಗಿದೆ !’ (ಅಂತೆ)

ಕೇರಳದ ಸಿಪಿಐ (ಎಂ) ಮೈತ್ರಿ ಸರಕಾರದ ಸಚಿವ ಸಾಜಿ ಚೆರಿಯನ್‌ನ ಹೇಳಿಕೆ !

ತಿರುವನಂತಪುರಂ (ಕೇರಳ) – ಮಾನವೀಯತೆಯ ಆರಂಭದಿಂದಲೂ ಶೋಷಣೆ ನಡೆಯುತ್ತಿದೆ. ಸರಕಾರದ ಆಡಳಿತವು ಈ ಪ್ರಕ್ರಿಯೆಗೆ ಬೆಂಬಲ ನೀಡುತ್ತಿರುವುದು ಸ್ವಾಭಾವಿಕವಾಗಿದೆ. ನಮ್ಮಲ್ಲಿ ಸುಸಜ್ಜಿತ ಸಂವಿಧಾನವಿದೆ ಎಂದು ಎಲ್ಲ ಕಡೆಗಳಲ್ಲಿ ಹೇಳಲಾಗುತ್ತದೆ; ಆದರೆ ದೇಶದ ಸಂವಿಧಾನವನ್ನು ಹೆಚ್ಚು ಹೆಚ್ಚು ಜನರನ್ನು ಲೂಟಿ ಮಾಡುವ ರೀತಿಯಲ್ಲಿ ಬರೆಯಲಾಗಿದೆ ಎಂದು ನಾನು ಹೇಳುತ್ತೇನೆ ಎಂದು ಕೇರಳದ ಮಾರ್ಕ್ಸವಾದಿ ಕಮ್ಯುನಿಸ್ಟ ಪಕ್ಷದ ಮೈತ್ರಿ ಸರಕಾರದ ‘ಸಂಸ್ಕೃತಿ ಮತ್ತು ಮೀನುಗಾರಿಕೆ’ ಸಚಿವ ಸಾಜಿ ಚೆರಿಯನ್ ಇವರು ಸಭೆಯೊಂದರಲ್ಲಿ ಹೇಳಿದರು. ಈ ಹೇಳಿಕೆಗೆ ಕಾಂಗ್ರೆಸ್ ಸೇರಿದಂತೆ ಇತರೆ ವಿರೋಧ ಪಕ್ಷಗಳು ಹಾಗೂ ಸಂಘಟನೆಗಳಿಂದ ಟೀಕೆ ವ್ಯಕ್ತವಾಗಿದೆ. ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಸಂವಿಧಾನವನ್ನು ತಿದ್ದುಪಡಿ ಮಾಡಬೇಕೆಂಬ ಹಿಂದೂಗಳ ಬೇಡಿಕೆಯನ್ನು ವಿರೋಧಿಸಿದ ಕಮ್ಯುನಿಸ್ಟರು ಈಗ ಸಂವಿಧಾನವನ್ನೇ ಅವಮಾನಿಸುತ್ತಿದ್ದಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !