ಕೌಶಾಂಬಿ (ಉತ್ತರಪ್ರದೇಶ) ಇಲ್ಲಿ ಮುಸಲ್ಮಾನನು ಹಿಂದೂ ಯುವತಿಯ ಮದರಸಾದಲ್ಲಿ ಮತಾಂತರಗೊಳಿಸಿ ನಿಕಾಹ ಮಾಡಿದನು !

ಕುಟುಂಬದವರ ದೂರಿನ ಬಳಿಕ ಪೊಲಿಸರಿಂದ ಯುವತಿಯ ಶೋಧ !

ಮಂಝನಪೂರ (ಉತ್ತರಪ್ರದೇಶ) : ಕೌಶಾಂಬಿ ಜಿಲ್ಲೆಯ ಸರಾಯ ಅಕಿಲ ಗ್ರಾಮದಲ್ಲಿ ‘ಲವ್ ಜಿಹಾದ’ ಪ್ರಕರಣ ಬೆಳಕಿಗೆ ಬಂದಿದೆ. ಜೂನ ೨೭ ರಂದು ಓರ್ವ ಮುಸಲ್ಮಾನನು ಹಿಂದೂ ಯುವತಿಯೊಬ್ಬಳ ಅಪಹರಣ ಮಾಡಿದನು. ಯುವತಿಯ ಕುಟುಂಬದವರು ಅವಳು ನಾಪತ್ತೆಯಾಗಿರುವುದು ಗಮನಕ್ಕೆ ಬರುತ್ತಲೇ, ಅವರು ಪೊಲೀಸರಲ್ಲಿ ದೂರು ದಾಖಲಿಸಿದರು. ಕುಟುಂಬದವರು ಯುವತಿಯನ್ನು ಓರ್ವ ಮುಸಲ್ಮಾನನು ಅಪಹರಣ ಮಾಡಿರುವುದು ತಿಳಿದ ಕೂಡಲೇ ನೂರಾರು ಹಿಂದೂಗಳು ಜೂನ ೨೯ ರಂದು ಪೊಲೀಸ ಠಾಣೆಗೆ ಮುತ್ತಿಗೆ ಹಾಕಿ ಪೊಲಿಸರಲ್ಲಿ ಶೀಘ್ರ ಕ್ರಮ ಜರುಗಿಸುವಂತೆ ಆಗ್ರಹಿಸಿದರು. ಪೊಲಿಸರಿಗೆ ಯುವತಿಯನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದು, ಅವರು ಅವಳನ್ನು ಅವಳ ಮನೆಗೆ ತಲುಪಿಸಿದ್ದಾರೆ. ತನಿಖೆ ಮುಂದುವರಿದಿದೆ.

ಈ ಯುವತಿಯು ಸಂಬಂಧಿಕರೊಬ್ಬರ ಮನೆಗೆ ಹೋಗುತ್ತಿರುವುದಾಗಿ ಹೇಳಿ ಮನೆಯಿಂದ ಹೊರಟಳು. ತದನಂತರ ಅವಳಿಗೆ ಮುಸಲ್ಮಾನನು ಪ್ರಯಾಗರಾಜದ ಕರೇಲಿ ಒಂದು ಮದರಸಾಕ್ಕೆ ಕರೆದುಕೊಂಡು ಹೋದನು ಮತ್ತು ಅವಳ ಮತಾಂತರ ಮಾಡಿದನು. ಬಳಿಕ ಅವಳೊಂದಿಗೆ ನಿಕಾಹ(ಇಸ್ಲಾಮಿ ಪದ್ಧತಿಯಿಂದ ನಿಕಾಹ) ಮಾಡಿಕೊಂಡಿರುವ ಆರೋಪವನ್ನು ಕುಟುಂಬದವರು ಮಾಡಿದ್ದಾರೆ. ಸಂತ್ರಸ್ತ ಯುವತಿಯ ಪೋಷಕರು, ಮತಾಂತರ ಮಾಡುವ ಮೊದಲು ಸರಕಾರಕ್ಕೆ ಮನವಿ ಪತ್ರ ಕೊಡಬೇಕಾಗುತ್ತದೆ; ಆದರೆ ಈ ಪ್ರಕರಣದಲ್ಲಿ ಹಾಗೆ ಮಾಡಲಾಗಿಲ್ಲ. ಉತ್ತರ ಪ್ರದೇಶ ರಾಜ್ಯದಲ್ಲಿ ಮತಾಂತರ ವಿರೋಧಿ ಹಾಗೆಯೇ ಲವ್ ಜಿಹಾದ ವಿರೋಧಿ ಕಾನೂನು ಇದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಉತ್ತರ ಪ್ರದೇಶ ರಾಜ್ಯದಲ್ಲಿ ಲವ್ ಜಿಹಾದ ಮತ್ತು ಮತಾಂತರ ವಿರುದ್ಧ ಕಾನೂನು ಅಸ್ತಿತ್ವದಲ್ಲಿರುವಾಗಲೂ ಹಿಂದೂಗಳ ಸಂದರ್ಭದಲ್ಲಿ ಹೀಗೆ ಆಗುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ ! ರಾಜ್ಯ ಸರಕಾರವು ಕೇವಲ ಕಾನೂನು ಮಾಡಿ, ನಿಲ್ಲಬಾರದು, ಸರಕಾರಿ ಅಧಿಕಾರಿಗಳು ಅದನ್ನು ಸಮರ್ಪಕವಾಗಿ ಕ್ರಮ ಜರುಗಿಸುತ್ತಿದ್ದಾರೆಯೇ, ಎನ್ನುವ ಕಡೆಗೆ ಗಮನ ನೀಡುವುದು ಆವಶ್ಯಕವಿದೆ !