೧. ೨೦೨೫ ರ ಮಹಾಕುಂಭಮೇಳದ ಅಸಾಧಾರಣ ಮಹತ್ವ ‘ಪೃಥ್ವಿಯ ಮೇಲಿನ ಪ್ರಯಾಗ, ತ್ರ್ಯಂಬಕೇಶ್ವರ, ಉಜ್ಜೈನ್ ಮತ್ತು ಹರಿದ್ವಾರ
ಈ ೪ ಸ್ಥಳಗಳಲ್ಲಿ ಕುಂಭಮೇಳಗಳು ನಡೆಯುತ್ತವೆ. ಪ್ರತಿ ೧೨ ವರ್ಷಗಳಿಗೊಮ್ಮೆ ನಡೆಯುವ ಈ ಕುಂಭಮೇಳಗಳಲ್ಲಿ ಸಂತ-ಮಹಾತ್ಮರು, ಮಹಾಮಂಡಲೇಶ್ವರರು, ಸಾಧುಗಳು, ತಪಸ್ವಿಗಳು ಮತ್ತು ಸಾಮಾನ್ಯ ಹಿಂದೂ ಭಕ್ತರು ಪಾಲ್ಗೊಳ್ಳುತ್ತಾರೆ. ಹಿಂದೂಗಳಿಗೆ ಈ ಕುಂಭಮೇಳದ ಮಹತ್ವ ಅಸಾಧಾರಣವಾಗಿದೆ. ಪ್ರಯಾಗರಾಜದಲ್ಲಿ ಪ್ರತಿ ೧೨ ವರ್ಷಗಳಿಗೊಮ್ಮೆ ಕುಂಭಮೇಳ ನಡೆಯುತ್ತದೆ. ಇಂತಹ ೧೨ ಕುಂಭಮೇಳಗಳ ನಂತರ, ಅಂದರೆ ೨೦೨೫ ರಲ್ಲಿ ೧೪೪ ವರ್ಷಗಳ ನಂತರ ಬರುವ ಈ ಕುಂಭಮೇಳವನ್ನು ‘ಮಹಾಕುಂಭಮೇಳ’ವೆಂದು ಆಚರಿಸಲಾಗುತ್ತಿದೆ. ಆದ್ದರಿಂದ ಇದಕ್ಕೆ ಅಸಾಧಾರಣ ಮಹತ್ವ ಪ್ರಾಪ್ತವಾಗಿದೆ.
೨. ಕುಂಭಮೇಳಕ್ಕೆ ನಿರ್ಬಂಧ ಹೇರಲು ಬ್ರಿಟಿಷರ ಪ್ರಯತ್ನ
೧೮೫೭ ರಲ್ಲಿ ಬ್ರಿಟಿಷರ ವಿರುದ್ಧ ಹಿಂದೂಸ್ಥಾನದಲ್ಲಿನ ಧರ್ಮಪ್ರೇಮಿಗಳು, ಜನರು ಮತ್ತು ಸೈನ್ಯ ಇವರೆಲ್ಲರೂ ಒಟ್ಟಾಗಿ ಆಂದೋಲನ ಮಾಡಿ ಭಾರತಮಾತೆಯನ್ನು ಮುಕ್ತಗೊಳಿಸಲು ಪ್ರಯತ್ನಿಸಿದರು. ಈ ಮೊದಲ ಸ್ವಾತಂತ್ರ್ಯ ಸಂಗ್ರಾಮವನ್ನು ಬ್ರಿಟಿಷÀರು ಹಿಸುಕಿ ಹಾಕಿದರು; ಆದರೆ ಬ್ರಿಟಿಷರಿಗೆ ಇದರಿಂದ ತೀವ್ರ ಆಘಾತವಾಯಿತು. ಅನಂತರ ನಡೆಯುವ ಮಹಾಕುಂಭದಲ್ಲಿ ಅಡಚಣೆಯನ್ನುಂಟು ಮಾಡಲು ಅವರು ಅನೇಕ ಪ್ರಯತ್ನಗಳನ್ನು ಮಾಡಿದರು. ಈ ಧಾರ್ಮಿಕ ಮಹೋತ್ಸವದಲ್ಲಿ ಭಾಗವಹಿಸುವ ಎಲ್ಲ ಹಿಂದೂಗಳಿಗೆ ಒಂದು ವೇದಿಕೆ ಸಿಗುವುದು, ಎಂದು ಬ್ರಿಟಿಷÀರಿಗೆ ಅನಿಸಿತ್ತು. ಆದ್ದರಿಂದ ಬ್ರಿಟಿಷರಿಗೆ ಸಂಘಟಿತ ಜನರಿಂದ ದೊಡ್ಡ ಪ್ರಮಾಣದಲ್ಲಿ ವಿರೋಧ ಆರಂಭವಾಗಬಹುದು. ಆದ್ದರಿಂದ ಅವರು ದೊಡ್ಡ ಪ್ರಮಾಣದಲ್ಲಿ ಸೈನ್ಯ ಮತ್ತು ಪೊಲೀಸರ ಕಾವಲನ್ನಿಟ್ಟು ಪರೋಕ್ಷವಾಗಿ ಕುಂಭಮೇಳದ ವ್ಯವಸ್ಥೆಯ ಮೇಲೆ ನಿರ್ಬಂಧ ಹೇರಿದರು. ಇದರ ಜೊತೆಗೆ ೧೯೪೨ ರಲ್ಲಿ ಎರಡನೆಯ ಜಾಗತಿಕ ಯುದ್ಧ ನಡೆಯಿತು. ಆಗ ಭಾರತದಲ್ಲಿ ಕುಂಭಮೇಳ ನಡೆಯಲಿಕ್ಕಿತ್ತು; ಆದರೆ ಬ್ರಿಟಿಷರು ಅಘೋಷಿತ ನಿರ್ಬಂಧ ಹೇರಿದರು. ಪ್ಲೇಗ್, ಕಾಲರಾದಂತಹ ಕೆಲವು ಸೋಂಕು ರೋಗಗಳ ಕಾರಣ ಹೇಳಿ ಅವರು ಹಿಂದೂಗಳು ಒಟ್ಟಾಗದಂತೆ ತಡೆದರು. ಆದರೂ ಈ ಎರಡೂ ಬಾರಿ ಕುಂಭಮೇಳಗಳನ್ನು ಆಚರಿಸಲಾಯಿತು. ಆಗ ಭಕ್ತರ ಉಪಸ್ಥಿತಿ ಕಡಿಮೆ ಇದ್ದಿರಬಹುದು; ಆದರೆ ಬ್ರಿಟಿಷರು ಹೇರಿದ ನಿರ್ಬಂಧಗಳಿಗೆ ಹಿಂದೂಗಳು ಸೊಪ್ಪು ಹಾಕಲಿಲ್ಲ.

೩ ಹಿಂದೂದ್ವೇಷಿ ಕಾಂಗ್ರೆಸ್ಸಿನ ಆಡಳಿತದಲ್ಲಿ ಕುಂಭಮೇಳಕ್ಕೆ ದುರ್ಲಕ್ಷ
ಬ್ರಿಟಿಷರ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಟ್ಟು ಆಡಳಿತ ನಡೆಸುವ ಕಾಂಗ್ರೆಸ್ ಕೂಡ ಅದಕ್ಕೆ ಅಪವಾದವಾಗಿರಲಿಲ್ಲ. ಸ್ವಾತಂತ್ರ್ಯದ ನಂತರ ೩.೨.೧೯೫೪ ರ ಮೌನಿ ಅಮವಾಸ್ಯೆಯಂದು ಪ್ರಯಾಗರಾಜದಲ್ಲಿ ಕುಂಭಮೇಳವನ್ನು ಆಯೋಜಿಸಲಾಗಿತ್ತು. ಆಗ ಜವಾಹರಲಾಲ ನೆಹರು ಪ್ರಧಾನಮಂತ್ರಿಯಾಗಿದ್ದರು. ಅವರು ಕುಂಭಮೇಳದಲ್ಲಿ ಭಾಗವಹಿಸಿದರು. ಅವರ ಜೊತೆಗೆ ಅಂದಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದರು ಕೂಡ ಇದ್ದರು. ಅಂದಿನ ಕಾಂಗ್ರೆಸ್ ಸರಕಾರ ಕುಂಭಮೇಳದಲ್ಲಿ ಉಪಸ್ಥಿತರಿದ್ದ ಸಾಧು-ಸಂತರು, ಮಹಂತರು, ತಪಸ್ವಿಗಳು, ಮಹಾಮಂಡಲೇಶ್ವರರು ಮತ್ತು ಭಕ್ತರ ಸೌಲಭ್ಯಗಳ ಕಡೆಗೆ ಗಮನ ಕೊಡುವ ಬದಲು ಎಲ್ಲ ಪೊಲೀಸ್ ಬಂದೋಬಸ್ತು ಮತ್ತು ಆಡಳಿತ ಪ್ರಧಾನಮಂತ್ರಿ ನೆಹರು ಮತ್ತು ರಾಷ್ಟ್ರಪತಿಯವರನ್ನು ಹಿಂಬಾಲಿಸಿತು. ಪೊಲೀಸರು ಭಕ್ತರನ್ನು ತಡೆದರು. ಆದ್ದರಿಂದ ಜನರು ಬೇಸರಗೊಂಡು ಅವರಲ್ಲಿ ಉದ್ರೇಕ ನಿರ್ಮಾಣವಾಯಿತು. ಅದರಿಂದ ಏನು ದುಷ್ಪರಿಣಾಮ ವಾಗಲಿಕ್ಕಿತ್ತೊ, ಅದು ಆಗಿಯೆ ಹೋಯಿತು. ಒಂದು ವಿಶಿಷ್ಟ ಸೇತುವೆಯ ಮೇಲೆ ನೂಕುನುಗ್ಗಲು ಸಂಭವಿಸಿ ಸುಮಾರು ೮೦೦ ಕ್ಕಿಂತಲೂ ಹೆಚ್ಚು ಹಿಂದೂ ಭಕ್ತರು ಸಾವನ್ನಪ್ಪಿದರು. ಈ ವಾಸ್ತವಿಕತೆಯನ್ನು ಜನರಿಂದ ಅಡಗಿಸಲು ಕಾಂಗ್ರೆಸ್ ಸರಕಾರ ಹಿಂದೂಗಳ ಶವಗಳನ್ನು ಒಟ್ಟು ಮಾಡಿ ಅವರ ಮೇಲೆ ಸಾಮೂಹಿಕ ಅಂತಿಮಸಂಸ್ಕಾರ ಮಾಡಲು ಹೇಳಿತು. ಈ ನೂಕುನುಗ್ಗಲಿನಿಂದಾಗಿ ಅಂದಿನ ಕಾಂಗ್ರೆಸ್ ಸರಕಾರದ ಅಸಡ್ಡೆತನ ಬಹಿರಂಗವಾಯಿತು. ವಿದೇಶದಲ್ಲಿನ ಪತ್ರಿಕೆಗಳು ಅದನ್ನು ಮಹತ್ವದ ಸುದ್ಧಿಯನ್ನಾಗಿ ಪ್ರಕಟಿಸಿ ವಿಶ್ಲೇಷಣೆ ಮಾಡಿದವು.
ಕಾಂಗ್ರೆಸ್ಸಿಗೆ ಹಿಂದೂಗಳ ವಿಷಯದಲ್ಲಿ ಕಾಳಜಿ ಇರಲಿಲ್ಲ. ಆದ್ದರಿಂದ ಅವರ ಕುಟುಂಬದವರಿಗೆ ಸರಕಾರ ಪರಿಹಾರ ಹಣವನ್ನು ಕೊಡಲೆ ಇಲ್ಲ. ದುರ್ಘಟನೆಯಲ್ಲಿ ಗಾಯಗೊಂಡವರಿಗೂ ಸರಕಾರದಿಂದ ಯಾವುದೇ ರೀತಿಯ ಸಹಾಯ ಸಿಗಲಿಲ್ಲ. ತದ್ವಿರುದ್ಧ ಇವೆಲ್ಲ ಪ್ರಕರಣವನ್ನು ಅಡಗಿಸಿಡುವ ಪ್ರಯತ್ನವಾಯಿತು. ಈ ಘಟನೆಯ ವಾರ್ತೆಯನ್ನು ನೀಡುವ ಮಾಧ್ಯಮಗಳು ಪ್ರಯಾಗರಾಜ ಕುಂಭಮೇಳದಲ್ಲಿನ ಎಲ್ಲ ಘಟನೆಗಳಿಗೆ ಕಾಂಗ್ರೆಸ್ ಸರಕಾರ ಮತ್ತು ಜವಾಹರಲಾಲ ನೆಹರು ಇವರೇ ಹೊಣೆಯೆಂದು ಹೇಳಿದವು. ನಿತ್ಯ ನಿಯಮಕ್ಕನುಸಾರ ಈ ಘಟನೆಯ ವಿಚಾರಣೆ ಮಾಡಲು ನ್ಯಾಯಾಧೀಶ ಕಮಲಕಾಂತ ವರ್ಮಾ ಇವರ ಅಧ್ಯಕ್ಷತೆಯಲ್ಲಿ ಒಂದು ಆಯೋಗವನ್ನು ನೇಮಕ ಮಾಡಲಾಯಿತು. ಈ ನ್ಯಾಯಾಂಗ ಆಯೋಗವು ಕಾಂಗ್ರೆಸ್ ಸರಕಾರವನ್ನೇ ಟೀಕಿಸುತ್ತಾ ಅದಕ್ಕೆ ಅವರೇ ಹೊಣೆಯೆಂದು ಸ್ಪಷ್ಟಪಡಿಸಿತು.
೪. ಸಮಾಜವಾದಿ ಪಕ್ಷದ ಆಡಳಿತದಲ್ಲಿ ಆಝಮ ಖಾನ್ ಇವರ ಕೈಗೆ ಕುಂಭಮೇಳದ ಅಧಿಕಾರ
ಸಮಾಜವಾದಿ ಪಕ್ಷ ಅಧಿಕಾರದಲ್ಲಿರುವಾಗ ಅದು ಕುಂಭಮೇಳದ ಸಂಪೂರ್ಣ ಅಧಿಕಾರವನ್ನು ಉತ್ತರಪ್ರದೇಶದಲ್ಲಿ ಮಂತ್ರಿ ಆಝಮ ಖಾನರಿಗೆ ವಹಿಸಿತ್ತು. ಇದರಿಂದ ಸಮಾಜವಾದಿ ಪಕ್ಷಕ್ಕೆ ಅದು ಕಾಂಗ್ರೆಸ್ಸಿಗಿಂತ ಹೆಚ್ಚು ಮುಸಲ್ಮಾನರನ್ನು ಬೆಂಬಲಿಸುತ್ತದೆ ಎಂಬುದನ್ನು ತೋರಿಸಲಿಕ್ಕಿತ್ತು. ಯಾರ ಪೀಳಿಗೆಯಿಂದ ಪೀಳಿಗೆ ಹಿಂದೂ ಧರ್ಮವನ್ನು ಕುಲಕೆಡಿಸುವುದರಲ್ಲಿಯೆ ಕಳೆದು ಹೋಯಿತೊ ಅಂತಹವರ ಕೈಗೆ ಈ ಅಧಿಕಾರವನ್ನು ನೀಡುವುದೆಂದರೆ, ಹಿಂದೂಗಳ ಗಾಯಕ್ಕೆ ಬರೆ ಎಳೆದಂತೆಯೆ ಆಗಿತ್ತು.
೫. ಹಿಂದುತ್ವನಿಷ್ಠ ಸರಕಾರದಿಂದ ಮಹಾಕುಂಭಮೇಳದ ಭವ್ಯದಿವ್ಯ ಆಯೋಜನೆ
ಸದ್ಯ ಕೇಂದ್ರದಲ್ಲಿ ಹಾಗೂ ಉತ್ತರಪ್ರದೇಶದಲ್ಲಿ ಹಿಂದುತ್ವನಿಷ್ಠ ಸರಕಾರ ಅಧಿಕಾರದಲ್ಲಿದೆ. ಆದ್ದರಿಂದ ಅವರು ೨೦೨೫ ರಲ್ಲಿನ ಮಹಾಕುಂಭಮೇಳದ ಆಯೋಜನೆಯನ್ನು ಭವ್ಯದಿವ್ಯವಾಗಿ ಮಾಡಿದರು. ಅದನ್ನು ಸಂಪೂರ್ಣ ಜಗತ್ತು ಅವಲೋಕಿಸಿತು. ಉತ್ತರ ಪ್ರದೇಶದ ಸರಕಾರ ಇದರ ಸಿದ್ಧತೆಯನ್ನು ಅನೇಕ ತಿಂಗಳುಗಳಿಂದಲೆ ಮಾಡಿತ್ತು. ಕುಂಭಮೇಳದ ಮೊದಲನಿಂದಲೇ ಅದರ ಪ್ರಸಿದ್ಧಿಯನ್ನು ಮಾಡಿತು. ಆದ್ದರಿಂದ ಜಗತ್ತಿನಾದ್ಯಂತದ ಕೊಟ್ಯಂತರ ಭಕ್ತರು ಈ ಕುಂಭಮೇಳದತ್ತ ಆಕರ್ಷಿತರಾದರು. ಈ ಹಿನ್ನೆಲೆಯಲ್ಲಿ ವಾರ್ತಾವಾಹಿನಿಗಳು ಮತ್ತು ವರ್ತಮಾನಪತ್ರಿಕೆಗಳು ೧೯೫೪ ರಲ್ಲಿನ ಕುಂಭಮೇಳದ ವಿಷಯದಲ್ಲಿ ನೆಹರು ಸರಕಾರದ ನಿಷ್ಕ್ರಿಯತೆ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಾಲದ ಪ್ರಯಾಗರಾಜದ ಮಹಾಕುಂಭಮೇಳವನ್ನು ತುಲನೆ ಮಾಡಿದವು. ಈಗ ಹಿಂದೂ ರಾಷ್ಟ್ರ ಘೋಷಣೆಯಾಗುವವರೆಗೆ ದೇಶದಲ್ಲಿ ಹಿಂದುತ್ವನಿಷ್ಠ ಸರಕಾರ ಏಕೆ ಬೇಕು, ಎಂಬುದು ಹಿಂದೂಗಳಿಗೆ ತಿಳಿದಿರಬಹುದು.’ (೧೮.೧.೨೦೨೫)
– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ