|

ಪ್ರಯಾಗರಾಜ್, ಫೆಬ್ರವರಿ 13 (ಸುದ್ದಿ) – ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ, 2027 ರ ಸೆಪ್ಟೆಂಬರ್‌ನಲ್ಲಿ ನಾಸಿಕ್‌ನಲ್ಲಿ ನಡೆಯಲಿರುವ ಸಿಂಹಸ್ಥ ಕುಂಭ ಮೇಳದ ಆಹ್ವಾನ ನೀಡುವ ದೊಡ್ಡ ಜಾಹೀರಾತು ಫಲಕಗಳನ್ನು ಬೇರೆ ಬೇರೆ ಸ್ಥಳಗಳಲ್ಲಿ ಹಾಕಲಾಗಿದೆ. ಮಹಾರಾಷ್ಟ್ರ ಸರಕಾರದ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಈ ಫಲಕಗಳನ್ನು ಹಾಕಲಾಗಿದೆ.
ಈ ಹಿಂದೆ ಕುಂಭ ಮೇಳದ ಯಾವುದೇ ಫಲಕಗಳಲ್ಲಿ ಸಾಧುಗಳು ಶಂಖನಾದ ಮಾಡುತ್ತಿರುವ ಛಾಯಾಚಿತ್ರ ಇರುತ್ತಿತ್ತು. ಈ ವರ್ಷ ಇದೇ ಮೊದಲ ಬಾರಿಗೆ ಈ ಫಲಕದಲ್ಲಿ ವೃದ್ಧ ಮಹಿಳೆಯು ಕೈಮುಗಿದು ನಮಸ್ಕರಿಸುವ ಚಿತ್ರವನ್ನು ಮುದ್ರಿಸಲಾಗಿದೆ. ಇದರಲ್ಲಿ ಅವರ ಅಕ್ಕಪಕ್ಕ ದೇವಾಲಯಗಳು, ಕೇಸರಿ ಧ್ವಜಗಳು, ನದಿ ಮತ್ತು ಸ್ನಾನಮಾಡುವ ಸಾಧುಗಳ ಚಿತ್ರ ಇದೆ. ವಿಶೇಷವೆಂದರೆ ಈ ಫಲಕ ಇಂಗ್ಲಿಷ್ ಭಾಷೆಯಲ್ಲಿದೆ. ಈ ಫಲಕದಲ್ಲಿ ದೊಡ್ಡ ಅಕ್ಷರಗಳಲ್ಲಿ, ‘ಎ ಲಾರ್ಜರ್ ದ್ಯಾನ್ ಲೈಫ್ ಮಿಸ್ಟಿಕಲ್ ಎಕ್ಸ್‌ಪೀರಿಯನ್ಸ್ ಅವೇಟ್ಸ್: ನಾಸಿಕ್ ಕುಂಭ’ ಎಂದು ಬರೆಯಲಾಗಿದೆ. (ಜೀವನದ ರಹಸ್ಯ ಅನುಭವದ ದಾರಿ ನೋಡಿ! : ನಾಶಿಕ ಕುಂಭ’) ಅದರ ಕೆಳಗೆ ‘ತ್ರಯಂಬಕೇಶ್ವರ ಮತ್ತು ಪಂಚವಟಿ, ನಾಸಿಕ್, ಜುಲೈ 2027’ ಎಂದು ಬರೆಯಲಾಗಿದೆ. ಈ ಫಲಕಗಳು ಪ್ರಸ್ತುತ ಪ್ರಯಾಗರಾಜ್‌ನಲ್ಲಿ ಚರ್ಚೆಯ ವಿಷಯವಾಗಿದೆ.