ಪ್ರಯಾಗರಾಜದಲ್ಲಾಗುತ್ತಿರುವ ಮಹಾಕುಂಭಮೇಳದ ಮಹಾತ್ಮೆ ಮತ್ತು ವೈಶಿಷ್ಟ್ಯಗಳು

ಕಲ್ಪವಾಸದ ಲಾಭ

ಪುಷ್ಯ ಶುಕ್ಲ ಏಕಾದಶಿಯಿಂದ ಮಾಘ ಹುಣ್ಣಿಮೆಯ ತನಕ ಭಕ್ತರು ಪ್ರಯಾಗದಲ್ಲಿ ಕಲ್ಪವಾಸ (ನೆಲದ ಮೇಲೆ ಮಲಗುವುದು, ತ್ರಿಕಾಲ ಸ್ನಾನ, ವಿಷ್ಣುಪೂಜೆ, ಉಪವಾಸ ಮುಂತಾದ ನಿಯಮಗಳನ್ನು ಪಾಲಿಸುತ್ತಾರೆ) ಮಾಡುತ್ತಾರೆ. ಇದರಿಂದ ಪಿತೃರಿಗೆ ತೃಪ್ತಿ, ಪಾಪನಾಶ ಹಾಗೂ ಭವಸಾಗರದಿಂದ ಮುಕ್ತಿ ಈ ಅಕ್ಷಯಫಲಗಳು ಸಿಗುತ್ತವೆ.

ಆಧಾರ : ಸನಾತನದ ಗ್ರಂಥ ‘ಕುಂಭಪರ್ವದ ಮಹಾತ್ಮೆ)

ಪ್ರಯಾಗ ಕುಂಭ ಪರ್ವಕಾಲದ ಸ್ನಾನದ ಮಹತ್ವ ಮಹಾಪ್ರಳಯವಾಗಿ ಇಡೀ ಜಗತ್ತು ಮುಳುಗಿದರೂ ಪ್ರಯಾಗವು ಮುಳುಗುವುದಿಲ್ಲ. ಪ್ರಯಾಗವು ಇಂತಹ ಒಂದು ಅಕ್ಷಯ ಕ್ಷೇತ್ರವಾಗಿದೆ. ಕುಂಭ ಪರ್ವಕಾಲದಲ್ಲಿ ಇಲ್ಲಿ ಸ್ನಾನ ಮಾಡುವುದರಿಂದ ೧೦೦೦ ಅಶ್ವಮೇಧ ಯಜ್ಞ, ೧೦೦ ವಾಜಪೇಯ ಯಜ್ಞ ಮತ್ತು ಪೃಥ್ವಿಯ ಸುತ್ತಲೂ ೧ ಲಕ್ಷ ಪ್ರದಕ್ಷಿಣೆ ಹಾಕಿದ ಪುಣ್ಯ ಸಿಗುತ್ತದೆ.

(ಆಧಾರ : ಭಾರತೀಯ ಸಂಸ್ಕ್ರತಿ ಕೋಶ, ಖಂಡ ೫)