ಜಳಗಾಂವ್ (ಮಹಾರಾಷ್ಟ್ರ) : ಗುಜರಾತ್‌ನ ಸೂರತ್ ನಿಂದ ಮಹಾಕುಂಭಮೇಳದ ಪವಿತ್ರ ಸ್ನಾನಕ್ಕಾಗಿ ಪ್ರಯಾಗರಾಜಗೆ ಹೋಗುತ್ತಿದ್ದ ತಾಪ್ತಿ ಗಂಗಾ ಎಕ್ಸ್‌ಪ್ರೆಸ್ ರೈಲಿನ ಮೇಲೆ ಮಹಾರಾಷ್ಟ್ರದ ಜಳಗಾಂವ್ ಬಳಿಯ ಬಿ6 ಕೋಚ್ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಮಹಾಕುಂಭಮೇಳದಂತಹ ಪವಿತ್ರ ತೀರ್ಥಯಾತ್ರೆಯ ಸಂದರ್ಭದಲ್ಲಿ ನಡೆದ ಈ ಘಟನೆಯು ಹಿಂದೂ ಸಮಾಜದ ಭಾವನೆಗಳಿಗೆ ನೋವುಂಟು ಮಾಡಿದೆ. ಧಾರ್ಮಿಕ ಯಾತ್ರಿಕರ ಮೇಲಿನ ಇಂತಹ ದಾಳಿಗಳನ್ನು ಹಿಂದೂ ಸಮಾಜ ಎಂದಿಗೂ ಸಹಿಸುವುದಿಲ್ಲ. 2002 ರಲ್ಲಿ ರಾಮ ಮಂದಿರಕ್ಕೆ ಕರಸೇವೆ ಮಾಡಲು ರಾಮ ಭಕ್ತರು ಹೋಗುತ್ತಿರುವಾಗ ಗುಜರಾತ್‌ನ ಗೋಧ್ರಾದಲ್ಲಿ ಇದೇ ರೀತಿಯ ಗಂಭೀರ ಘಟನೆ ಸಂಭವಿಸಿತ್ತು, ಇದಲ್ಲದೆ, ಹಲವು ವರ್ಷಗಳಿಂದ ಅಮರನಾಥ ಯಾತ್ರೆಯ ಮೇಲೆ ಇದೇ ರೀತಿಯ ಕಲ್ಲು ತೂರಾಟದ ಘಟನೆಗಳು ನಡೆಯುತ್ತಿವೆ.
ಇಂತಹ ಮತಾಂಧ ಸಮಾಜ ಕಂಟಕರ ಮೇಲೆ ಸಕಾಲದಲ್ಲಿ ಕಠಿಣ ಕ್ರಮ ಕೈಗೊಳ್ಳದಿದ್ದರೆ, ಇಂದು ರೈಲಿನ ಮೇಲೆ ಕಲ್ಲು ತೂರಾಟ ಮಾಡಿದವರು ನಾಳೆ ರೈಲನ್ನು ಸುಡಲು ಹಿಂಜರಿಯುವುದಿಲ್ಲ. ಪ್ರಸ್ತುತ, ಕೆಲವು ಮತಾಂಧ ಕಟ್ಟರವಾದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ “ಕುಂಭಮೇಳ ನಡೆಯಲು ಬಿಡುವುದಿಲ್ಲ” ಎಂಬಂತೆ ಬೆದರಿಕೆ ಹಾಕುತ್ತಿದ್ದಾರೆ. ಈಗ ಅವರು ರೈಲುಗಳ ಮೇಲೆ ಕಲ್ಲು ತೂರಾಟ ನಡೆಸುವ ಮೂಲಕ ಅಂತಹ ಬೆದರಿಕೆಗಳನ್ನು ವಾಸ್ತವವನ್ನಾಗಿ ಪರಿವರ್ತಿಸಲು ಪ್ರಾರಂಭಿಸಿದ್ದಾರೆ. ಕೋಟ್ಯಂತರ ಹಿಂದೂ ಭಕ್ತರ ಸಮ್ಮುಖದಲ್ಲಿ ನಡೆಯುವ ಕುಂಭಮೇಳದ ಸಮಯದಲ್ಲಿ ಹಿಂದೂಗಳು ಸಂಘಟಿತರಾಗುವುದನ್ನು ಮತ್ತು ಅವರನ್ನು ಧರ್ಮಾಚರಣೆಯಿಂದ ಬೇರೆಡೆಗೆ ತಿರುಗಿಸುವುದನ್ನು ತಡೆಯಲು ಹಿಂದೂ ವಿರೋಧಿ ಶಕ್ತಿಗಳು ಸಕ್ರಿಯವಾಗಿವೆ.
ಈ ಘಟನೆಯಲ್ಲಿ ಭಾಗಿಯಾದ ಅಪರಾಧಿಗಳ ವಿರುದ್ಧ ಕೊಲೆಯತ್ನ (ಶಿಕ್ಷಾರ್ಹ ನರಹತ್ಯೆ) ಪ್ರಕರಣ ದಾಖಲಿಸಬೇಕು ಮತ್ತು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಅವರ ಹಿಂದೆ ಯಾವ ಶಕ್ತಿಗಳಿವೆ ಎಂಬುದನ್ನು ತನಿಖೆ ಮಾಡಬೇಕು. ಇದಲ್ಲದೆ, ‘ಕುಂಭಮೇಳ ನಡೆಯಲು ಬಿಡುವುದಿಲ್ಲ’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಬೆದರಿಕೆ ಹಾಕುವವರ ವಿರುದ್ಧ ಸರಕಾರ ತಕ್ಷಣ ಕ್ರಮ ಕೈಗೊಳ್ಳಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿ ಸರಕಾರದ ಬಳಿ ಆಗ್ರಹಿಸಿದೆ.
Stone Pelting on Tapti-Ganga Express En Route to Mahakumbh Mela in Jalgaon
File charges of culpable homicide and take strict action! — @HinduJagrutiOrg
– It is to be noted that it is only during Hindu festivals that Hindus, their vehicles, and trains are subjected to attacks.… pic.twitter.com/ykMlT55RSS
— Sanatan Prabhat (@SanatanPrabhat) January 13, 2025