ಹಿಂದೂ ವಿರೋಧಿ ಮಮತಾ ಬ್ಯಾನರ್ಜಿಯವರ ಖೇದಕರ ಹೇಳಿಕೆ
ಕೋಲಕಾತಾ (ಬಂಗಾಳ) – ಮಹಾಕುಂಭ ಮೇಳ ಪ್ರತಿ 12 ವರ್ಷಗಳಿಗೊಮ್ಮೆ ನಡೆಯುತ್ತದೆ. ಇದು 144 ವರ್ಷಗಳ ನಂತರ ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ. ಆದರೆ ಇದು ಸಂಪೂರ್ಣವಾಗಿ ತಪ್ಪಾಗಿದೆ. ನನಗೆ ತಿಳಿದ ಮಟ್ಟಿಗೆ, ಇದು 2014 ರಲ್ಲಿಯೂ ನಡೆದಿತ್ತು. 144 ವರ್ಷಗಳ ನಂತರ ಕುಂಭಮೇಳವನ್ನು ಆಯೋಜಿಸಲಾಗುತ್ತಿದೆ ಎಂಬ ಹೇಳಿಕೆ ನಿಜವಲ್ಲ ಎಂದು ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಈ ಹೇಳಿಕೆಗೆ ಭಾಜಪವು ಮಮತಾ ಬ್ಯಾನರ್ಜಿಯವರ ಹೇಳಿಕೆಯ ಬಗ್ಗೆ ಟೀಕಿಸಿದ್ದಾರೆ.
Hon’ble CM Mamata Banerjee who has a Master’s degree in “Religious” History; is asserting that the 144-year Mahakumbh cycle is “incorrect & hyped”. Historical records, astrological & astronomical science confirm its legitimacy.
Her repeated misleading statements appear to be… pic.twitter.com/T1rUrYKKu0— Suvendu Adhikari (@SuvenduWB) February 25, 2025
ಮಮತಾ ಬ್ಯಾನರ್ಜಿ ಹೇಳಿಕೆಯು ಓಲೈಕೆಯ ರಾಜಕೀಯದಿಂದ ಪ್ರಭಾವಿತವಾಗಿದೆ !
ಭಾಜಪ ನಾಯಕ ಸುವೇಂದು ಅಧಿಕಾರಿ ಅವರು ಮಾತನಾಡಿ, ಮಮತಾ ಬ್ಯಾನರ್ಜಿ ಅವರ ಆಯ್ದ ಹೇಳಿಕೆಗಳಿಂದಾಗಿ ಅವರ ಹಿಂದೂ ವಿರೋಧಿ ರಾಜಕೀಯ ನಿಲುವುಗಳು ಬಹಿರಂಗವಾಗಿದೆ, ಎಂದು ಹೇಳಿದ್ದಾರೆ. ಅವರು ಪದೇ ಪದೇ ನೀಡಿರುವ ದಾರಿತಪ್ಪಿಸುವ ಹೇಳಿಕೆಗಳು ರಾಜಕೀಯದೃಷ್ಟಿಯಿಂದ ಪ್ರೇರಿತವಾಗಿರುವಂತೆ ಕಂಡುಬರುತ್ತಿದೆ. ಸನಾತನ ಧರ್ಮದ ಪವಿತ್ರ ಘಟನೆಗಳನ್ನು ದುರ್ಬಲಗೊಳಿಸುವ ಮತ್ತು ಅವಮಾನಿಸುವ ಪ್ರಯತ್ನ ನಡೆಯುತ್ತಿದೆ, ಇದು ಅವರ ಓಲೈಕೆಯ ರಾಜಕೀಯದಿಂದ ಪ್ರಭಾವಿತವಾಗಿರುತ್ತದೆ.
ಬ್ಯಾನರ್ಜಿಯವರ ಈ ಹೇಳಿಕೆಯ ಬಗ್ಗೆ ಭಾಜಪ ನಾಯಕ ಮಿಥುನ ಚಕ್ರವರ್ತಿ ಕೂಡ ಟೀಕಿಸಿದ್ದಾರೆ. ಮಮತಾ ಬ್ಯಾನರ್ಜಿ ಹೇಳುತ್ತಿರುವುದು ತಪ್ಪು ಎಂದು ಅವರು ಹೇಳಿದರು. 66 ಕೋಟಿ ಜನರು ಇಲ್ಲಿಗೆ ಬಂದು ಪವಿತ್ರ ಸ್ನಾನ ಮಾಡಿದ್ದಾರೆ. ಇದು ತಪ್ಪೇ? ಜನರು ಸನಾತನ ಧರ್ಮದ ಶಕ್ತಿಯನ್ನು ನೋಡಿದ್ದಾರೆ’, ಎಂದು ಹೇಳಿದರು.
ಸಂಪಾದಕೀಯ ನಿಲುವು
|