ರಷ್ಯಾ ನೀಡಿದ ಬೆದರಿಕೆಯಿಂದ ಪೊಲಂಡ ಉಕ್ರೇನ್ ದೇಶಕ್ಕೆ ಯುದ್ಧ ವಿಮಾನಗಳನ್ನು ನೀಡಲು ನಿರಾಕರಣೆ

ಪೊಲಂಡ ಉಕ್ರೇನ್‌ಗೆ ರಷ್ಯಾದ ವಿರುದ್ಧ ಹೋರಾಡಲು ಯುದ್ಧ ವಿಮಾನಗಳನ್ನು ನೀಡುವುದಾಗಿ ಘೋಷಿಸಿತ್ತು; ಆದರೆ ‘ಯಾವ ದೇಶ ಈ ಯುದ್ಧದಲ್ಲಿ ಉಕ್ರೇನ್ ದೇಶಕ್ಕೆ ಯುದ್ಧ ವಿಮಾನಗಳನ್ನು ನೀಡುವುದೋ, ಅವರನ್ನೂ ಸಹ ಯುದ್ಧದಲ್ಲಿ ಸೇರಿಸಲಾಗುವುದು’, ಎಂದು ರಷ್ಯಾದ ಅಧ್ಯಕ್ಷ ಪುತಿನ್ ಇವರು ಎಚ್ಚರಿಕೆ ನೀಡಿದ ಬಳಿಕ ಪೊಲಂಡ ತಮ್ಮ ಘೋಷಣೆಯನ್ನು ಹಿಂಪಡೆದಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉಕ್ರೇನ್ ರಾಷ್ಟ್ರಾಧ್ಯಕ್ಷ ಝೆಲೆಂಸ್ಕಿಯವರೊಂದಿಗೆ ೩೫ ನಿಮಿಷಗಳ ವರೆಗೆ ಮಾತುಕತೆ ನಡೆಸಿದರು

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉಕ್ರೇನ್ ರಾಷ್ಟ್ರಾಧ್ಯಕ್ಷ ವ್ಲೊದಿಮಿರ ಝೆಲೆಂಸ್ಕಿಯವರೊಂದಿಗೆ ದೂರವಾಣಿ ಮುಖಾಂತರ ೩೫ ನಿಮಿಷಗಳ ವರೆಗೆ ಚರ್ಚಿಸಿದರು. ಇಬ್ಬರೂ ಮುಖಂಡರು ಉಕ್ರೇನನಲ್ಲಿ ಬದಲಾಗುತ್ತಿರುವ ಪರಿಸ್ಥಿತಿಯ ಕುರಿತು ಚರ್ಚಿಸಿದರು.

ಪ್ಯಾಲೆಸ್ಟೈನ್‌ನಲ್ಲಿ ಭಾರತೀಯ ರಾಯಭಾರಿ ಕಚೇರಿಯಲ್ಲಿನ ಅಧಿಕಾರಿ ಮುಕೂಲ ಆರ್ಯ ಇವರ ಸಾವು

ಪ್ಯಾಲೆಸ್ಟೈನ್‌ನಲ್ಲಿ ಭಾರತದ ಪ್ರತಿನಿಧಿ ಮುಕೂಲ ಆರ್ಯ ಇವರು ಇಲ್ಲಿಯ ಭಾರತೀಯ ರಾಯಭಾರಿ ಕಚೇರಿಯಲ್ಲಿ ಶವವಾಗಿ ಪತ್ತೆಯಾಗಿದೆ. ಭಾರತದ ವಿದೇಶಾಂಗ ಸಚಿವ ಎಸ್. ಜಯಶಂಕರ ಇವರು ಟ್ವೀಟ್ ಮಾಡಿ, ಭಾರತದ ರಾಮಲ್ಲಾಹದ ಪ್ರತಿನಿಧಿ ಮುಕೂಲ ಆರ್ಯ ಇವರ ನಿಧನದ ಸುದ್ದಿ ಕೇಳಿ ದೊಡ್ಡ ಆಘಾತವಾಗಿದೆ.

ನಮ್ಮ ಬೇಡಿಕೆ ಒಪ್ಪಿದರೆ, ಮಾತ್ರ ಉಕ್ರೇನಿನ ಮೇಲಿನ ಸೈನ್ಯ ಕಾರ್ಯಾಚರಣೆ ನಿಲ್ಲಿಸುವೆವು ! – ಪುತಿನ್

ನಮ್ಮ ಬೇಡಿಕೆಗಳು ಒಪ್ಪಿದರೆ, ಮಾತ್ರ ಉಕ್ರೇನಿನ ಮೇಲಿನ ಸೈನ್ಯ ಕಾರ್ಯಾಚರಣೆಯನ್ನು ನಿಲ್ಲಿಸುವೆವು, ಎಂದು ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮೀರ ಪುತಿನ್ ಇವರು ಹೇಳಿದರು. ರಷ್ಯಾ ಫೆಬ್ರವರಿ ೨೪, ೨೦೨೨ ರಿಂದ ಉಕ್ರೆನಿನ ಮೇಲೆ ದಾಳಿ ಆರಂಭಿಸಿತ್ತು.

ರಶಿಯಾದ ಮೇಲೆ ಹೇರಿರುವ ನಿರ್ಬಂಧ ಯುದ್ಧದ ಘೋಷಣೆಯಂತಿದೆ

ಪಾಶ್ಚಿಮಾತ್ಯ ದೇಶಗಳಿಂದ ಅವರ ದೇಶದ ಮೇಲೆ ಹೇರಲಾಗಿರುವ ನಿರ್ಬಂಧವು ಯುದ್ಧದ ಘೋಷಣೆಯಂತಿದೆ ಎಂದು ರಶಿಯಾ ರಾಷ್ಟ್ರಾಧ್ಯಕ್ಷ ವ್ಲಾದಿಮೀರ ಪುತಿನ್ ಹೇಳಿದ್ದಾರೆ. ಅವರು ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಪಾಕಿಸ್ತಾನ ‘ಎಫ್.ಎ.ಟಿ.ಎಫ್.’ದ ಗ್ರೆ ಪಟ್ಟಿಯಲ್ಲಿ ಸ್ಥಿರ !

ಫೈನಾನ್ಶಿಯಲ್ ಆಕ್ಷನ್ ಟಾಸ್ಕ ಫೋರ್ಸ್ (ಎಫ್.ಎ.ಟಿ.ಎಫ್.)ಈ ಸಂಘಟನೆಯು ಪಾಕಿಸ್ತಾನವನ್ನು ಮತ್ತೊಮ್ಮೆ ಗ್ರೆ ಪಟ್ಟಿಯಲ್ಲಿ ಇರಿಸಲಾಗಿದೆ. ಜೂನ್ ೨೦೨೨ ವರೆಗೆ ಪಾಕಿಸ್ತಾನವನ್ನು ಈ ಪಟ್ಟಿಯಲ್ಲಿ ಇರಿಸಲಾಗುವುದು.

ಉಕ್ರೇನನ ೨ ನಗರಗಳಲ್ಲಿ ಯುದ್ಧ ವಿರಾಮವನ್ನು ಘೋಷಿಸಿದ ರಷ್ಯಾ !

ರಷ್ಯಾವು ಯುದ್ಧದ ೧೦ನೇಯ ದಿನದಂದು ಉಕ್ರೇನನಲ್ಲಿ ಮಾರಿಯುಪೊಲ ಹಾಗೂ ವೊಲನೋವಾಖಾ ಎಂಬ ೨ ನಗರಗಳಲ್ಲಿ ಯುದ್ಧವಿರಾಮವನ್ನು ಘೋಷಿಸಿದೆ. ರಷ್ಯಾವು ನಾಗರಿಕರನ್ನು ಉಕ್ರೇನ್‌ನಿಂದ ಹೊರಗೆ ಹೋಗಲಿ, ಎಂಬುದಕ್ಕಾಗಿ ಮಾನವಿಯತೆಯ ದೃಷ್ಟಿಯಿಂದ ಮಾರ್ಚ ೫ರಂದು ಬೆಳಿಗ್ಗೆ ೬ ಘಂಟೆಯಿಂದ ಯುದ್ಧವಿರಾಮವನ್ನು ಘೋಷಿಸಿದೆ.

ಉಕ್ರೇನನ ವಾಯುಮಾರ್ಗವನ್ನು ‘ನಿಷೇಧಿತ ವಲಯ’(ನೊ ಫ್ಲೈ ಝೋನ್)ವೆಂದು ಘೋಷಿಸಲು ನಿರಾಕರಿಸಿದ ‘ನಾಟೊ’ !

ಉಕ್ರೇನನ ವಾಯುಮಾರ್ಗವನ್ನು ‘ನಿಷೇಧಿತ ವಲಯ’ (ನೊ ಫ್ಲೈ ಝೋನ) ಎಂದು ಘೋಷಿಸಲು ಅಥವಾ ಅದರ ಮೇಲೆ ನಿಗಾ ವಹಿಸಲು ‘ನಾಟೊ’ ನಿರಾಕರಿಸಿದೆ. ಇದರಿಂದ ಉಕ್ರೇನನ ರಾಷ್ಟ್ರಾಧ್ಯಕ್ಷ ವ್ಲಾದೊಮಿರ ಝೆಲೆಂನ್ಸಕೀಯವರು ‘ನಾರ್ಥ ಆಟಲಾಂಟಿಕ ಟ್ರಿಟೀ ಆರ್ಗನಾಯಝೇಷನ’ (‘ನಾಟೊ)ನ ಮೇಲೆ ಕಟು ಶಬ್ಧಗಳಲ್ಲಿ ಟೀಕಿಸಿದ್ದಾರೆ.

ಯುದ್ಧಕ್ಕೆ ರಷ್ಯಾವು ಹೊಣೆಗಾರವನ್ನಾಗಿಸಬೇಕು ! – ಜೀ ಸೆವೆನ್ ರಾಷ್ಟ್ರಗಳು

ಅಮೇರಿಕಾ, ಬ್ರಿಟನ್, ಪ್ರಾನ್ಸ, ಜರ್ಮನಿ, ಇಟಲಿ, ಜಪಾನ್ ಹಾಗೂ ಕೆನಡಾ ಈ ೭ ರಾಷ್ಟ್ರಗಳ ಗುಂಪಿರುವ ಜೀ ಸೆವೆನ್ ಸಂಘಟನೆಗಳ ವಿದೇಶಾಂಗ ಮಂತ್ರಿಗಳು ರಷ್ಯಾ ಹಾಗೂ ಉಕ್ರೇನ್‌ನ ಯುದ್ಧದ ಬಗ್ಗೆ, ಉಕ್ರೇನ್ನಲ್ಲಿ ಸಾಮಾನ್ಯ ನಾಗರಿಕರ ಮೇಲೆ ಸೈನಿಕರ ಆಕ್ರಮಣಕ್ಕೆ ಯಾರು ಕಾರಣಕರ್ತರಾಗಿದ್ದಾರೆ, ಅವರನ್ನು ಹೊಣೆಗಾರರೆಂದು ನಿರ್ಧರಿಸಬೇಕು.

ಚೀನವು ರಕ್ಷಣಾ ವೆಚ್ಚವನ್ನು ಶೇ. ೭.೧ ರಷ್ಟು ಹೆಚ್ಚಿಸಿದೆ !

ಚೀನವು ತನ್ನ ರಕ್ಷಣಾ ವೆಚ್ಚವನ್ನು ಶೇ. ೭.೧ ರಷ್ಟು ಹೆಚ್ಚಿಸಿದೆ. ೨೦೨೨ ರ ಅರ್ಥಿಕ ವರ್ಷಕ್ಕೆ ಚೀನಾ ೧೭ ಲಕ್ಷ ೭೫ ಸಾವಿರ ಕೋಟಿ ರೂಪಾಯಿಗಳನ್ನು ಹೆಚ್ಚಿಸಿದೆ. ಇದು ಭಾರತದ ರಕ್ಷಣಾ ವೆಚ್ಚದ ೩ ಪಟ್ಟು ಇದೆ.