ನಮ್ಮ ಬೇಡಿಕೆ ಒಪ್ಪಿದರೆ, ಮಾತ್ರ ಉಕ್ರೇನಿನ ಮೇಲಿನ ಸೈನ್ಯ ಕಾರ್ಯಾಚರಣೆ ನಿಲ್ಲಿಸುವೆವು ! – ಪುತಿನ್

ಮಾಸ್ಕೋ (ರಷ್ಯಾ) – ನಮ್ಮ ಬೇಡಿಕೆಗಳು ಒಪ್ಪಿದರೆ, ಮಾತ್ರ ಉಕ್ರೇನಿನ ಮೇಲಿನ ಸೈನ್ಯ ಕಾರ್ಯಾಚರಣೆಯನ್ನು ನಿಲ್ಲಿಸುವೆವು, ಎಂದು ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮೀರ ಪುತಿನ್ ಇವರು ಹೇಳಿದರು. ರಷ್ಯಾ ಫೆಬ್ರವರಿ ೨೪, ೨೦೨೨ ರಿಂದ ಉಕ್ರೆನಿನ ಮೇಲೆ ದಾಳಿ ಆರಂಭಿಸಿತ್ತು.

ಉಕ್ರೇನಿನ ರಾಷ್ಟ್ರಾಧ್ಯಕ್ಷ ವ್ಲೊದಿಮೀರ ಝೆಲೆಂಕ್ಸಿ ಇವರ ಹತ್ಯೆಯಾದರೆ, ಮುಂದಿನ ಯೋಜನೆ ಸಿದ್ಧ – ಅಮೆರಿಕದ ಹೇಳಿಕೆ

ಉಕ್ರೇನ್‌ನ ರಾಷ್ಟ್ರಾಧ್ಯಕ್ಷ ವ್ಲೊದಿಮೀರಿ ಝೆಲೆಂಕ್ಸಿ ಇವರ ಹತ್ಯೆ ನಡೆದರೆ, ಉಕ್ರೆನ್‌ನ ಮುಂದಿನ ಯೋಜನೆ ಸಿದ್ಧವಾಗಿದೆ, ಎಂದು ಅಮೆರಿಕಾದ ವಿದೇಶಾಂಗ ಸಚಿವ ಆಂಟೋನಿ ಬ್ಲಿಕನೆ ಇವರು ಹೇಳಿದ್ದಾರೆ. ಝೇಲೆಂಕ್ಸಿ ಪದೇಪದೆ ರಷ್ಯಾದಿಂದ ನನ್ನನ್ನು ಕೊಲ್ಲುವ ಆದೇಶ ನೀಡಿದೆ ಎಂದು ಹೇಳುತ್ತಿದ್ದಾರೆ. ಝೆಲೆಂಕ್ಸಿ ಇವರನ್ನು ಹತ್ಯೆ ಮಾಡಲು ರಷ್ಯಾದ ಅನೇಕ ಜನರು ಕಿವ ನಗರಕ್ಕೆ ಬಂದ್ದಿದಾರೆ. ಬ್ಲಿಂಕನೆ ಇವರು ಒಂದು ವಾರ್ತಾ ವಾಹಿನಿಯೊಂದಿಗೆ ಮಾತನಾಡುವಾಗ ಉಕ್ರೇನ್ ಸರಕಾರದ ನೇತೃತ್ವ ಶ್ಲಾಘನೀಯವಾಗಿದೆ ಎಂದು ಹೇಳಿದರು.