ಉಕ್ರೇನನ ವಾಯುಮಾರ್ಗವನ್ನು ‘ನಿಷೇಧಿತ ವಲಯ’(ನೊ ಫ್ಲೈ ಝೋನ್)ವೆಂದು ಘೋಷಿಸಲು ನಿರಾಕರಿಸಿದ ‘ನಾಟೊ’ !

ಇನ್ನು ಮುಂದೆ ಆಗುವ ಸಾವಿಗೆ ‘ನಾಟೊ’ ಹೊಣೆಯಾಗಿದೆ ಎಂದು ಉಕ್ರೇನನ ರಾಷ್ಟ್ರಾಧ್ಯಕ್ಷರ ಟೀಕೆ

ಕೀವ (ಉಕ್ರೇನ) – ಉಕ್ರೇನನ ವಾಯುಮಾರ್ಗವನ್ನು ‘ನಿಷೇಧಿತ ವಲಯ’ (ನೊ ಫ್ಲೈ ಝೋನ) ಎಂದು ಘೋಷಿಸಲು ಅಥವಾ ಅದರ ಮೇಲೆ ನಿಗಾ ವಹಿಸಲು ‘ನಾಟೊ’ ನಿರಾಕರಿಸಿದೆ. ಇದರಿಂದ ಉಕ್ರೇನನ ರಾಷ್ಟ್ರಾಧ್ಯಕ್ಷ ವ್ಲಾದೊಮಿರ ಝೆಲೆಂನ್ಸಕೀಯವರು ‘ನಾರ್ಥ ಆಟಲಾಂಟಿಕ ಟ್ರಿಟೀ ಆರ್ಗನಾಯಝೇಷನ’ (‘ನಾಟೊ)ನ ಮೇಲೆ ಕಟು ಶಬ್ಧಗಳಲ್ಲಿ ಟೀಕಿಸಿದ್ದಾರೆ. ‘ಇನ್ನು ಮುಂದೆ ಆಗುವ ಸಾವುಗಳಿಗೆ ನೀವು ಕೂಡ ಹೊಣೆಯಾಗುವಿರಿ. ನಿಮ್ಮ ನೇತೃತ್ವದಿಂದ ಹಾಗೂ ನಿಮ್ಮಲ್ಲಿ ತೀರ್ಮಾನ ತೆಗೆದುಕೊಳ್ಳಲು ಐಕ್ಯತೆ ಇಲ್ಲದಿರುವುದರಿಂದ ಈ ಸಾವಿಗಾಗಿ ನಿಮ್ಮನ್ನೇ ಹೊಣೆಯಾಗಿಸಬೇಕಾಗುವುದು’, ಎಂದು ಝೆಲೆಂನ್ಸಕೀಯವರು ಟೀಕಿಸಿದರು. ‘ನಾಟೊ’ವು ಉಕ್ರೇನ ಅನ್ನು ‘ನೊ ಫ್ಲಾಯ ಝೋನ’ ಎಂದು ಘೋಷಿಸಿದಿದ್ದರೆ ಉಕ್ರೇನನ ಮೇಲೆ ರಷ್ಯಾವು ವಾಯುಮಾರ್ಗದಿಂದ ಮಾಡುವ ದಾಳಿ ಹೆಚ್ಚಿಸುವುದು. ‘ನಾಟೊ’ ಬಾಂಬ್ ಮೂಲಕ ದಾಳಿ ಮಾಡಲು ಹಸಿರು ಸಂಕೇತ ತೋರಿಸಿದೆ’, ಎಂದು ಝೆಲೆಂನ್ಸಕೀಯವರು ಟೀಕಿಸಿದ್ದಾರೆ.

೧. ‘ನಾಟೊ’ದ ಪ್ರಧಾನ ಕಾರ್ಯದರ್ಶಿಗಳಾದ ಜೆನ್ಸ ಸ್ಟಾಲ್ಟನಬರ್ಗರವರು ತಮ್ಮ ತೀರ್ಮಾನವನ್ನು ಬೆಂಬಲಿಸುತ್ತಾ, ಉಕ್ರೇನ ವಾಯುಮಾರ್ಗವನ್ನು ‘ನೊ ಫ್ಲೈ ಝೋನ’ ಎಂದು ಘೊಷಿಸಿದರೆ ಅದರ ಪರಿಣಾಮವಾಗಿ ಯುರೊಪಿನಲ್ಲಿ ಪರಮಾಣು ಸಜ್ಜಾಗಿರುವ ರಷ್ಯಾದೊಂದಿಗೆ ಯುದ್ಧವನ್ನು ಪ್ರೇರೆಪಿಸಿದಂತೆ ಆಗುತ್ತದೆ. ನಾವು ಉಕ್ರೇನನ ಒಳಗೆ ಪ್ರವೇಶಿಸುವುದಿಲ್ಲ, ಭೂಮಿಯ ಮೇಲೂ ಇಲ್ಲ ಹಾಗೂ ಆಕಾಶ ಕ್ಷೇತ್ರದಲ್ಲಿಯೂ ಇಲ್ಲ.

೨. ಜೆನ್ಸ ಸ್ಟಾಲ್ಟನಬರ್ಗರವರು, ರಷ್ಯಾ ‘ಕ್ಲಸ್ಟರ’ ಬಾಂಬ ಅನ್ನು ಬಳಸುತ್ತಿರುವುದು ನಾವು ನೋಡಿದ್ದೇವೆ. ರಷ್ಯಾದ ಕೃತಿಯಿಂದ ಆಂತರರಾಷ್ಟ್ರೀಯ ಕಾಯಿದೆಯ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿದೆ.